Housewife commits suicide after leaving a death note. 
ರಾಜ್ಯ

ಡೆತ್​ನೋಟ್​ ಬರೆದಿಟ್ಟು ಗೃಹಿಣಿ ಆತ್ಮಹತ್ಯೆ

ಚಿಂತಾಮಣಿ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ಡೆತ್​ನೋಟ್​ ಬರೆದಿಟ್ಟು ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ಗಂಡನ ಮನೆಯಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಗರದ ಗಣೇಶ್​ ನಗರ ಬಡಾವಣೆ ನಿವಾಸಿ ಶ್ರೀನಿವಾಸ್​ ರೆಡ್ಡಿ ಪುತ್ರಿ ಮಮತಾಶ್ರೀ (26) ಮೃತೆ.
ಮಮತಾಶ್ರೀಗೆ 5 ವರ್ಷಗಳ ಹಿಂದೆ ನಗರದ ಮೋಹನ್​ರೆಡ್ಡಿ ಅವರೊಂದಿಗೆ ಮದುವೆಯಾಗಿತ್ತು. ದಂಪತಿಗೆ 4 ವರ್ಷದ ಗಂಡು ಮಗು ಇದೆ. ಕೆಲವು ದಿನಗಳಿಂದ ಇಬ್ಬರ ನಡುವೆ ಮುನಿಸಿತ್ತು. ಹೀಗಾಗಿ ಡೆತ್​ನೋಟ್​ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಡೆತ್​ನೋಟನಲ್ಲಿ ಮಗುವನ್ನು ತನ್ನ ಪಾಲಕರ ವಶಕ್ಕೆ ನೀಡುವಂತೆ ಹಾಗೂ ಅಂತ್ಯಸಂಸ್ಕಾರದಲ್ಲಿ ಗಂಡ ಪಾಲ್ಗೊಳ್ಳುದಂತೆ ಬರೆದಿದ್ದಾಳೆ ಎನ್ನಲಾಗಿದೆ. ತಹಸೀಲ್ದಾರ್​ ಸುದರ್ಶನ್​ ಯಾದವ್​, ಸ್ಥಳಿಯ ಪೊಲೀಸರು ಸ್ಥಳ ಪರಿಶೀಲಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.