Household census begins today
ಹುಳಿಯಾರು : ಭಾರತ ಸರ್ಕಾರದ ಜನಗಣತಿ-2027ರ ಮಹತ್ವದ ಮೊದಲ ಹಂತವಾದ ’ಮನೆಗಳ ಪಟ್ಟಿ ವಾಡುವಿಕೆ ಮತ್ತು ಮನೆಗಣತಿ’ ಪ್ರಕ್ರಿಯೆಯು ಹುಳಿಯಾರು ಪಪಂ ವ್ಯಾಪ್ತಿಯಲ್ಲಿ ಏ.16ರಿಂದ ಅಧಿಕೃತವಾಗಿ ಆರಂಭವಾಗಲಿದೆ ಎಂದು ಮುಖ್ಯಾಧಿಕಾರಿ ಎಲ್.ವಿ.ಮಂಜುನಾಥ್ ತಿಳಿಸಿದರು.
ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಗಣತಿದಾರರಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಹಾಗೂ ಪೂರ್ವಭಾವಿ ಸಭೆಯಲ್ಲಿ ವಾತನಾಡಿ, ಏ.16ರಿಂದ ಗಣತಿದಾರರು ನೇರವಾಗಿ ಮನೆಗಳಿಗೆ ಭೇಟಿ ನೀಡಿ ವಾಹಿತಿ ಸಂಗ್ರಹಿಸುವ ಕಾರ್ಯ ವಾಡಲಿದ್ದು, ಇದು ಸುವಾರು ಒಂದು ತಿಂಗಳ ಕಾಲ ನಡೆಯಲಿದೆ ಎಂದರು.
ಹುಳಿಯಾರು ಪಟ್ಟಣದ ಒಟ್ಟು 16 ವಾರ್ಡ್‌ಗಳನ್ನು 32 ಬ್ಲಾಕ್‌ಗಳನ್ನಾಗಿ ವಿಂಗಡಿಸಲಾಗಿದೆ. ಸುಗಮವಾಗಿ ಗಣತಿ ನಡೆಸಲು ಪ್ರತಿ ಬ್ಲಾಕ್‌ಗೆ ಒಬ್ಬರಂತೆ ಒಟ್ಟು 32 ಜನ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಕ ವಾಡಲಾಗಿದೆ ಎಂದು ವಾಹಿತಿ ನೀಡಿದರು.
ಮನೆಗಣತಿಯಲ್ಲಿ ಒಟ್ಟು 33 ಪ್ರಶ್ನೆಗಳನ್ನು ಒಳಗೊಂಡ ನಮೂನೆಯನ್ನು ಸಿದ್ಧಪಡಿಸಲಾಗಿದೆ. ಮನೆಗಳ ಸ್ಥಿತಿಗತಿ, ಆಸ್ತಿ ವಿವರ, ಲಭ್ಯವಿರುವ ಮೂಲ ಸೌಕರ್ಯಗಳು ಸೇರಿದಂತೆ ವಿವಿಧ ಆಯಾಮಗಳ ಬಗ್ಗೆ ಗಣತಿದಾರರು ವಾಹಿತಿ ಕಲೆಹಾಕಲಿದ್ದಾರೆ. ಮೊದಲ ಹಂತದಲ್ಲಿ ಗಣತಿದಾರರು ಪ್ರತಿ ಮನೆಗೆ ಭೇಟಿ ನೀಡಿ ಸಂಖ್ಯೆಗಳನ್ನು ನೀಡಲಿದ್ದಾರೆ. ಬಹುಮಹಡಿ ಕಟ್ಟಡಗಳಲ್ಲಿ ಪ್ರತ್ಯೇಕ ಕುಟುಂಬಗಳಿದ್ದರೆ ಅವುಗಳನ್ನು ಪ್ರತ್ಯೇಕವಾಗಿ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ ಎಂದರು.
ಗಣತಿ ಸಮಯದಲ್ಲಿ ಗಣತಿದಾರರು ಯಾವುದೇ ಮನೆಯು ಗಣತಿಯಿಂದ ಹೊರಗುಳಿಯದಂತೆ ಹಾಗೂ ನಮೂನೆಗಳನ್ನು ಭರ್ತಿ ವಾಡುವಾಗ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಗಣತಿದಾರರು ಹಾಜರಿದ್ದರು.