ಕಕ್ಕೇರಾ ಬಳಿಯ ಆಯಕಟ್ ರೋಡ್ ನಿವಾಸಿ ಮೈಹಿಬೂಬಿ ದೇವಾಪುರ್ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ವಾತ್ಸಲ್ಯ ಕಾರ್ಯಕ್ರಮದಡಿ 1.35ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಮಂಗಳವಾರ ಹಸ್ತಾಂತರಿಸಲಾಯಿತು. ವಸಂತಗೌಡ, ನಾಗೇಶ, ಅಮರಪ್ಪ ಮಂಡಿ, ರಮೇಶ ಶೆಟ್ಟಿ, ಸುರಿಯಾಬೇಗಂ ಇತರರಿದ್ದರು.
- ಧರ್ಮಸ್ಥಳ ಗ್ರಾಮಾಭಿವೃದ್ಧಿ ವಾತ್ಸಲ್ಯ ಕಾರ್ಯಕ್ರಮದಡಿ 1.35 ಲಕ್ಷ ರೂ. ಮನೆ
ಕಕ್ಕೇರಾ: ಪಟ್ಟಣದ 14ನೇ ವಾರ್ಡ್ನ ಆಯಕಟ್ ರೋಡ್ ನಿವಾಸಿ ನಿರ್ಗತಿಕ ವೃದ್ಧೆ ಮಹಿಬೂಬಿ ದೇವಾಪುರ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಾತ್ಸಲ್ಯ ಕಾರ್ಯಕ್ರಮದಡಿ 1.35ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಮಂಗಳವಾರ ಸಂಸ್ಥೆ ಜಿಲ್ಲಾ ನಿರ್ದೇಶಕ ವಸಂತಗೌಡ ಹಸ್ತಾಂತರಿಸಿದರು.
ನಂತರ ಮಾನತಾಡಿದ ಅವರು, ನಮ್ಮ ಗ್ರಾಮಾಭಿವೃದ್ಧಿಯ ಯೋಜನೆಯಿಂದ ವಿರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಕೃಷಿ ಕಾರ್ಯಕ್ರಮ, ಕೆರೆ ಹೂಳೆತ್ತುವುದು, ಸಮುದಾಯ ಅಭಿವೃದ್ಧಿ ಕಾಯಕ್ರಮ ಸೇರಿ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವುಗಳ ಲಾಭ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಇಲ್ಲಿನ ನಿವಾಸಿಯಾದ ಮಹಿಬೂಬಿ ದೇವಾಪುರ (68) ವೃದ್ಧೆ ಹಲವು ವರ್ಷಗಳಿಂದ ಸೂರಿಲ್ಲದೆ ಜೀವನ ಸಾಗಿಸಲು ಪರದಾಡುತ್ತಿರುವುದನ್ನು ಗಮನಿಸಿದ ಸಂಸ್ಥೆಯ ಸ್ಥಳಿಯ ಸೇವಾ ಪ್ರತಿನಿಧಿ ಸುರಿಯಾಬೇಗಂ ಅವರು, ಆಕೆಗೆ ಸೂರು ನಿರ್ಮಿಸಿ ಕೊಡಲು ಯೋಗ್ಯರಿದ್ದಾರೆ ಎಂದಾದ ಕೆಲವೇ ತಿಂಗಳುಗಳಲ್ಲಿ 1.35ಲಕ್ಷ ರೂ. ವೆಚ್ಚದ ಮನೆ ನಿರ್ಮಿಸಿ ವೃದ್ಧೆಗೆ ಹಸ್ತಾಂತರಿಸಲಾಗಿದೆ ಎಂದರು.
ಸಹಕಾರ ಸಂದ ಅಧ್ಯಕ್ಷ ಅಮರಪ್ಪ ಮಂಡಿ ಮಾತನಾಡಿ, ಧರ್ಮಸ್ಥಳ ಮಂಜುನಾಥ ಗ್ರಾಮಾಭಿವೃದ್ಧಿ ಸಂಸ್ಥೆ ಅಧಿಕಾರಿಗಳು ವಾತ್ಸಲ್ಯ ಕಾರ್ಯಕ್ರಮದಡಿ ಬಡ ನಿರ್ಗತಿಕ ವೃದ್ಧೆ ಮಹಿಬೂಬಿಗೆ ಮನೆ ನಿರ್ಮಿಸಿ ಹಸ್ತಾಂತರಿಸಿದ್ದಕ್ಕೆ ವೃದ್ಧೆಗೆ ಆಸರೆಯಲ್ಲದೇ ಆಶಾಕಿರಣವಾಗಿದೆ ಎಂದರು.
ಸಂಸ್ಥೆ ತಾಲೂಕು ಯೋಜನಾಧಿಕಾರಿ ನಾಗೇಶ ಎನ್.ಪಿ., ಸಮಸ್ವಯಾಧಿಕಾರಿ ಅನಿತಾ, ನಿಂಗರಾಜ ಬಿ.ಎಸ್, ಅಯ್ಯಣ್ಣ ಪೂಜಾರಿ, ದಸ್ತಗಿರಸಾಹೇಬ್ ಶ್ಯಾನಿ ಪೂಜಾರಿ, ರಮೇಶ ಶೆಟ್ಟಿ, ಕಸ್ತೂರಿ ಗಿಟಗಿ, ಮುದೆಪ್ಪ ದೇಸಾಯಿ, ಶರಣು ಅಕ್ಕಿ, ಸುರಿಯಾಬೇಗಂ, ಮಹಿಬೂಬ್, ಪ್ರಕಾಶ ಕುಂಬಾರ, ಸೋಮಶೇಖರ ದೊರೆ, ಬಸವರಾಜ, ರವಿ, ಸೈದಾಬಿ, ಖಾಜಾಬೀ ಇತರರಿದ್ದರು.