ರೆಡ್ಡಿ ಸಮುದಾಯಕ್ಕೆ ಭವನ Reddy community
- ಶಾಸಕ ಎಸ್.ಎನ್ ನಾರಾಯಣಸ್ವಾಮಿ ಭರವಸೆ
ಬಂಗಾರಪೇಟೆ: ರೆಡ್ಡಿ ಸಮುದಾಯ ಭವನ ನಿರ್ಮಿಸಲು 10 ಗುಂಟೆ ಜಾಗ ಹಾಗೂ ಅನುದಾನ ನೀಡುವುದಾಗಿ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಭರವಸೆ ನೀಡಿದರು.Reddy community
ತಾಲೂಕು ಆಡಳಿತ ಹಾಗೂ ರೆಡ್ಡಿ ಸಮುದಾಯದಿಂದ ಸೋಮವಾರ ತಾಲೂಕು ಕಚೇರಿಯ ಭೀಮ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೇಮನ ಜಯಂತಿಯಲ್ಲಿ ಮಾತನಾಡಿ, ಎಲ್ಲ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಿಸಲು ಜಾಗ ಕೊಟ್ಟಿದ್ದೇವೆ. ಅದರಂತೆ ರೆಡ್ಡಿ ಸಮುದಾಯದವರೆಗೂ 10 ಗುಂಟೆ ಜಾಗ ಮಂಜೂರು ಮಾಡಲಾಗಿದ್ದು, ಭವನ ನಿಮಾರ್ಣಕ್ಕೆ ಅನುದಾನ ಕೊಡುವುದಾಗಿ ಹೇಳಿದರು.
ಅನೇಕ ವರ್ಷಗಳಿಂದ ವೇಮನ ಜಯಂತಿ ಅದ್ದೂರಿಯಾಗಿ ಮಾಡಲಾಗುತ್ತಿಲ್ಲ. ಒಂದು ಬಾರಿ ಪಲ್ಲಕ್ಕಿ ಮೆರವಣಿಗೆ ಮಾಡುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ದೊಡ್ಡದಾಗಿ ಕಾರ್ಯಕ್ರಮ ಮಾಡಲು ಸಹಕಾರ ನೀಡುವುದಾಗಿ ಹೇಳಿದರು.