House broken into and gold jewelry stolen. 
ರಾಜ್ಯ

ಮನೆ ಬೀಗ ಒಡೆದು ಚಿನ್ನಾಭರಣ ಕಳವು

ಮುಳಬಾಗಿಲು: ತಾಲೂಕಿನ ಮುಷ್ಟೂರಿನಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಪರಿಚಿತರು ಮನೆಯ ಬೀಗ ಒಡೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಗ್ರಾಮದ ಸುನಿತಮ್ಮ ಎಂಬುವವರು ಜೂ.30ರಂದು ಮನೆಗೆ ಬೀಗ ಹಾಕಿಕೊಂಡು ಕೋಲಾರ ತಾಲೂಕು ಕೋಟಿಗಾನಹಳ್ಳಿಗೆ ಹೋಗಿದ್ದಾಗ ಕಳ್ಳರು ಮನೆಗೆ ನುಗ್ಗಿ ಮೂರು ಜತೆ 20 ಗ್ರಾಂ ಬಂಗಾರದ ಓಲೆ, ಒಂದು ಸಾವಿರ ರೂ.ನಗದು ದೋಚಿದ್ದಾರೆ. ಗುರುವಾರ ಮಾಲಕಿ ಮನೆಗೆ ಬಂದು ನೋಡಿದಾಗ ಟನೆ ಬೆಳಕಿಗೆ ಬಂದಿದೆ. ನಂಗಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.