ಇಂಚಲ ಗ್ರಾಮದಲ್ಲಿ ಮೆಟ್ರಿಕ್ ನಂತರ ಬಾಲಕರ ವಸತಿನಿಲಯವನ್ನು ಪೂರ್ಣಾನಂದ ಭಾರತಿ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಮಹಾಂತೇಶ ಕೌಜಲಗಿ, ರಾಜು ಜನ್ಮಟ್ಟಿ ಇತರರಿದ್ದರು.
ಬೈಲಹೊಂಗಲ: ವಸತಿನಿಲಯಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೇಂದ್ರಗಳಾಗಿವೆ. ವಿದ್ಯಾರ್ಥಿಗಳು ವಸತಿ ನಿಲಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ತಾಲೂಕಿನ ಇಂಚಲ ಗ್ರಾಮದಲ್ಲಿ ಮೆಟ್ರಿಕ್ ನಂತರ ಬಾಲಕರ ವಸತಿನಿಲಯ ಕಟ್ಟಡವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಸುಸಜ್ಜಿತ ಹಾಗೂ ಆಧುನಿಕ ಸೌಲಭ್ಯ ಹೊಂದಿದ ಕಟ್ಟಡವು ವಿದ್ಯಾರ್ಥಿಗಳಿಗೆ ವಸತಿ ಮತ್ತು ಅಧ್ಯಯನಕ್ಕೆ ಉತ್ತಮ ವಾತಾವರಣ ಒದಗಿಸಲಿದೆ ಎಂದರು.
ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಪುರಸಭೆ ಮಾಜಿ ಅಧ್ಯ ರಾಜು ಜನ್ಮಟ್ಟಿ, ಸಿ.ಎಸ್.ರಾಯನಾಯ್ಕರ, ಬಸಪ್ಪ ಮಲ್ಲೂರ, ಅನಿಲ ಎಂ., ತಾಲೂಕು ಕಲ್ಯಾಣಾಧಿಕಾರಿ ಎಂ.ಚಿನಗುಡಿ, ಗುತ್ತಿಗೆದಾರ ಶಿವಾನಂದ ಕಾಗತಿಕರ, ನಿಲಯ ಪಾಲಕ ಎಸ್.ಜಿ.ಸಿಂಗಾರಕೊಪ್ಪ, ಪಿ.ಎ್.ಗುಮ್ಮಗೋಳ, ಎಂ.ಎ.ತಹಸೀಲ್ದಾರ್ ಇತರರಿದ್ದರು.