ಸಿಂಧನೂರಿನಲ್ಲಿ 200 ಹಾಸಿಗೆಯ ಜಿಲ್ಲಾ ಆಸ್ಪತ್ರೆ ಮಾದರಿ ಕಟ್ಟಡದ ಕಾಮಗಾರಿಯನ್ನು ಎಂಎಲ್ಸಿ ಬಸನಗೌಡ ಬಾದರ್ಲಿ ಪರಿಶೀಲಿಸಿದರು. ಟಿಎಚ್‌ಒ ಅಯ್ಯನಗೌಡ, ಮುಖ್ಯ ವೈದ್ಯಾಧಿಕಾರಿ ಸುರೇಶಗೌಡ, ವೀರೇಶ ಉಪ್ಪಲದೊಡ್ಡಿ ಇತರರಿದ್ದರು. 
ರಾಜ್ಯ

ಅಂದಾಜು ಪಟ್ಟಿಯಂತಿಲ್ಲ ಆಸ್ಪತ್ರೆ ಕಾಮಗಾರಿ

ಪ್ರಮುಖ ಮುಖ್ಯಾಂಶಗಳು

  • ಎಂಎಲ್ಸಿ ಬಸನಗೌಡ ಬಾದರ್ಲಿ ಆರೋಪ
  • ಗುಣಮಟ್ಟದ ಕಾಮಗಾರಿಗೆ ಸೂಚನೆ
ಸಿಂಧನೂರು: ನಿರ್ಮಾಣದ ಹಂತದಲ್ಲಿರುವ 200 ಹಾಸಿಗೆಯ ಜಿಲ್ಲಾ ಆಸ್ಪತ್ರೆ ಮಾದರಿ ಕಟ್ಟಡದ ಕಾಮಗಾರಿ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. 
ನಂತರ ಮಾತನಾಡಿ, ಅಂದಾಜು ಪಟ್ಟಿಯಂತೆ ಕಾಮಗಾರಿ ನಡೆಯುತ್ತಿಲ್ಲ. 40 ಎಂಎಂ ಬದಲಾಗಿ 20 ಎಂಎಂ ಕಂಕರ್ ಬಳಸಲಾಗಿದೆ. 4 ಇಂಚು ಬದಲಿಗೆ 2 ಇಂಚು ಕಾಂಕ್ರೀಟ್ ಹಾಕಲಾಗಿದೆ. 
ಸರಿಯಾಗಿ ಕ್ಯೂರಿಂಗ್ ಮಾಡಿಲ್ಲ. ತುಳಿದರೆ ಸಾಕು, ಮುರಿದು ಬೀಳುತ್ತಿದೆ. ಕಳಪೆ ಕಾಮಗಾರಿ ಮಾಡಿದರೆ ಸಹಿಸುವುದಿಲ್ಲ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. 
ದೋಷಗಳನ್ನು ಸರಿಪಡಿಸಿಕೊಂಡು ಗುಣಮಟ್ಟದ ಕಾಮಗಾರಿ ನಡೆಸಬೇಕು. ಇಲ್ಲವಾದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.