ಹೊಸಕೋಟೆ :
ನಗರದ ದಿ ಟೌನ್ ಕೋ&ಆಪರೇಟಿವ್ ಬ್ಯಾಂಕ್ 2026ರ ಮಾರ್ಚ್ ಅಂತ್ಯಕ್ಕೆ 5.28 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಈ ಬಾರಿ ಷೇರುದಾರರಿಗೆ ಶೇ.15ರಷ್ಟು ಡಿವಿಡೆಂಟ್ ನೀಡಲಾಗುವುದು ಎಂದು ಬ್ಯಾಂಕ್ ಅಧ್ಯಕ್ಷ ಎಸ್.ಮಂಜುನಾಥ ತಿಳಿಸಿದರು.
ನಗರದ ಎಚ್ಜೆಎಸ್ಎಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ ಮಾತನಾಡಿದ ಅವರು, ಹೊಸಕೋಟೆಗೆ ಸೀಮಿತವಾಗಿದ್ದ ಟೌನ್ ಬ್ಯಾಂಕ್ ಈಗ ಕಾರ್ಯಕ್ಷೇತ್ರವನ್ನು ವಿಸ್ತರಿಸಲಾಗಿದ್ದು, ನೆರೆ ಜಿಲ್ಲೆಗಳ ಮಾಲೂರು, ಚಿಂತಾಮಣಿ ಹಾಗೂ ಶೀಗೆಹಳ್ಳಿ ಸೇರಿ ಒಟ್ಟು ಆರು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆಯಲು ರ್ನಿಣಯ ಕೈಗೊಳ್ಳಲಾಗುವುದು ಎಂದುರ.
ಒಟ್ಟು 17,181 ಸದಸ್ಯರನ್ನೊಳಗೊಂಡು 11.86 ಕೋಟಿ ರೂ. ಷೇರು ಬಂಡವಾಳವನ್ನು ಬ್ಯಾಂಕ್ ಹೊಂದಿದ್ದು, 297.04 ಕೋಟಿ ರೂ. ಠೇವಣಿ ಇದೆ. ದುಡಿಯುವ ಬಂಡವಾಳ 367.66 ಕೋಟಿ ರೂ., 187.11 ಕೋಟಿ ರೂ. ಹೂಡಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಸಿಎ ನಿವೇಶನಕ್ಕೆ ಮನವಿ: ಬ್ಯಾಂಕಿನ ನೂತನ ಕಟ್ಟಡ ನಿಮಾರ್ಣಕ್ಕೆ ನಗರದ ಎಂ.ವಿ.ಬಡಾವಣೆಯಲ್ಲಿ ಸಿಎ ನಿವೇಶನಕ್ಕಾಗಿ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಮನವಿ ಮಾಡಲಾಗಿತ್ತು. ಶಾಸಕರು ಯೋಜನಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ನಿರ್ದೇಶನ ನೀಡಿದ್ದರು. ಈಗ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವ್ ಮೂರ್ತಿಗೆ ಸಿಎ ನಿವೇಶನಕ್ಕಾಗಿ ಮನವಿ ನೀಡಲಾಗಿದೆ ಎಂದು ಎಸ್.ಮಂಜುನಾಥ ತಿಳಿಸಿದರು.
ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎ.ನಾಗರಾಜ್ ಲೆಕ್ಕ ಪತ್ರ ಓದಿ ಅನುಮೋದನೆ ಪಡೆದರು.
ಉಪಾಧ್ಯಕ್ಷ ಅಕ್ಬರ್ಪಾಷಾ, ನಿರ್ದೇಶಕರಾದ ಎನ್.ನಾಗರಾಜ್, ಎಚ್.ಎಸ್.ಗೋಪಾಲ್, ಎ.ಅಪ್ಸರ್, ಕೆ.ಮುರಳಿ, ಕೆ.ಕಿರಣ್ ಕುಮಾರ್, ಬಿ.ನಾಗರಾಜ್, ಜಿಯು ವಿಷ್ಣು, ಎಸ್.ಮುರಳಿ, ಎನ್.ಬಾಲಚಂದ್ರನ್, ಬಿ ವೆಂಕಟಲಕ್ಷಿ$್ಮ, ಸರೋಜಮ್ಮ ಬಚ್ಚಣ್ಣ, ವಿಕ್ರಮ್, ಆರ್.ಮಂಜುನಾಥ್ ಇತರರು ಇದ್ದರು.