ನಾಪೋಕ್ಲುವಿನಲ್ಲಿರುವ ಅಂಕುರ್ ಶಾಲೆಯಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಬೊಳ್ಳೆಪಂಡ ಆಶಾ ಬೋಪಣ್ಣ, ರಾಜಾ ಚರ್ಮಣ ಇತರರಿದ್ದರು.
- ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ
- ಅಂಕುರ್ ಶಾಲೆಯಲ್ಲಿ ಶಿಕ್ಷಕರ ದಿನ
ನಾಪೋಕ್ಲು: ಮಾಜಿ ರಾಷ್ಟ್ರಪತಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಇಲ್ಲಿನ ಅಂಕುರ್ ಶಾಲೆಯಲ್ಲಿ ಶಿಕ್ಷಕರ ದಿನವನ್ನು ಸಡಗರದಿಂದ ಆಚರಿಸಲಾಯಿತು.
ಶಾಲೆಯ ನಿವೃತ್ತ ಶಿಕ್ಷಕಿ ಬೊಳ್ಳೆಪಂಡ ಆಶಾ ಬೋಪಣ್ಣ, ಶಾಲೆ ಅಧ್ಯಕ್ಷ ರಾಜಾ ಚರ್ಮಣ, ಕಾರ್ಯದರ್ಶಿ ರತ್ನಾ ಚರ್ಮಣ ಹಾಗೂ ಇತರರು ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜ್ಯೋತಿ ಬೆಳಗಿಸಿದರು. ಶಾಲೆಯಲ್ಲಿ 25 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿದ ಹಿರಿಯ ಶಿಕ್ಷಕರಾದ ಅಂಜಪರಂಡ ತಾರಾ ಕುಶಾಲಪ್ಪ, ಪಾಂಡಂಡ ಶೈಲಾ ನರೇಶ್, ಶಿವಚಾಳಿಯಂಡ ಚೇತನ ವಿಜು, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಅವರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ದಿನದ ವಿಶೇಷತೆ ಕುರಿತು ಭಾಷಣ, ನಂತರ ಶಿಕ್ಷಕರಿಗೆ ಸಂಗೀತ ಕುರ್ಚಿ, ರಸಪ್ರಶ್ನೆ ಆಯೋಜಿಸಲಾಗಿತ್ತು. ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿ ಸಂಭ್ರಮಿಸಿದರು.ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕರಿಗೆ ಸ್ವತಃ ಕೈಯಿಂದ ತಯಾರಿಸಿದ ಧನ್ಯವಾದ ಕಾರ್ಡ್‌ಗಳು ಮತ್ತು ಸಣ್ಣ ಉಡುಗೊರೆಗಳನ್ನು ನೀಡಿದರು. ಶಾಲಾ ಆಡಳಿತ ಮಂಡಳಿ ವತಿಯಿಂದ ಎಲ್ಲ ಶಿಕ್ಷಕರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.