ಆನೇಕಲ್​ನಲ್ಲಿ ವಾಟಳ್​ ಸಂಘದಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಶಿಕ್ಷಣ ತಜ್ಞ ಜಿ.ಎಂ.ಆರ್​.ಮುನಿರಾಜು ಅವರನ್ನು ಸನ್ಮಾನಿಸಲಾಯಿತು. ಅಸ್ಲಾಂಪಾಶ, ಚುಟುಕು ಶಂಕರ್​, ಮುನಿರಾಜು, ಗಿರೀಶ್​, ಅನಿತಾ, ಇಲಿಯಾಸ್​ ಖಾನ್​, ಕಿರುತೆರೆ ನಟ ಚಂದ್ರು, ನಿರ್ದೇಶಕ ಗುಡ್ನಳ್ಳಿ ಮುನಿರಾಜು ಇದ್ದರು. 
ರಾಜ್ಯ

ಸಂಸತಿಗಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ / ANEKAL

ಆನೇಕಲ್​ : ನಾಡು&ನುಡಿ ಹಾಗೂ ಸಂಸತಿಗಾಗಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸುವುದು ಮತ್ತು ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದು ವಾಟಾಳ್​ ನಾಗರಾಜ್​ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಸನಾವುಲ್ಲ ತಿಳಿಸಿದರು.
ಪಟ್ಟಣದ ಉದಯಕುಮಾರ್​ ವೃತ್ತದಲ್ಲಿ ವಾಟಾಳ್​ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ವೈಯುಕ್ತಿಕ ಬದುಕಿನ ಜತೆಗೆ ನಾಡು&ನುಡಿಗಾಗಿ ಸೇವೆ ಸಲ್ಲಿಸುವವರನ್ನು ಸಂಘಟನೆಗಳು ರಾಜ್ಯೋತ್ಸವದ ವೇಳೆ ಗೌರವಿಸುತ್ತಾ ಬಂದಿವೆ. ಇದು ಸಂಘಟನೆಗಳ ಜವಾಬ್ದಾರಿಯೂ ಹೌದು. ವಾಟಾಳ್​ ಸಂಘದಿಂದ ಪ್ರತಿ ವರ್ಷವೂ ಇಂತಹ ಸಾಧಕರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ಜರುಗುತ್ತಿದೆ ಎಂದು ತಿಳಿಸಿದರು.
ದಲಿತಪರ ಹೋರಾಟಗಾರ ಡಿ.ವೆಂಕಟೇಶ್​ ಮಾತನಾಡಿ, ಹೊರನಾಡ ಭಾಷೆ ಮತ್ತು ಆಚಾರ&ವಿಚಾರಗಳು ನಿರಂತರ ಪ್ರಭಾವ ಬೀರುವ ಗಡಿನಾಡ ಪ್ರದೇಶಗಳಲ್ಲಿ ಕನ್ನಡ ಸಂಸತಿಯನ್ನು ಉಳಿಸಿ, ಬೆಳೆಸುವುದು ಸುಲಭದ ಮಾತಲ್ಲ. ಇಂಥಹ ಮಿತಿಗಳನ್ನು ಮೀರಿ ಪ್ರಾದೇಶಿಕ ಭಾಷೆಯನ್ನು ಸಂರಕ್ಷಿಸುವ ಕಾರ್ಯವನ್ನು ವಾಟಾಳ್​ ಸಂ ಮಾಡುತ್ತಿದೆ ಎಂದರು.
ಇದೇ ವೇಳೆ ಕಲಾ ಕೇಸರಿ ಉದಯ್​ ಕುಮಾರ್​ ನಾಮಫಲಕಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ತಾಲೂಕಿನ ಶಿಕ್ಷಣ ತಜ್ಞ ಜಿ.ಎಂ.ಆರ್​. ಮುನಿರಾಜು, ಪತ್ರಕರ್ತ ಪ್ರಸನ್ನ ಕುಮಾರ್​, ವಕೀಲೆ ಅನುರಾಧಾ, ವಿಕ್ರಂ ಉದಯ್​ ಕುಮಾರ್​, ತಿರುಪಾಳ್ಯ ಮುನಿರಾಜು, ನಿವೃತ್ತ ಶಿಕ್ಷಕ ಸೈಯದ್​ ರಹಮತುಲ್ಲಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.