Honneswaraswamy temple dedication from 27th 
ರಾಜ್ಯ

27ರಿಂದ ಹೊನ್ನೇಶ್ವರಸ್ವಾಮಿ ದೇಗುಲ ಲೋಕಾರ್ಪಣೆ

ತುಮಕೂರು ಡೆಸ್ಕ್
ಮಧುಗಿರಿ/ದೊಡ್ಡೇರಿ: ಹೊನ್ನೇಶ್ವರ ಸ್ವಾಮಿಯ ಪುನ@ ಪ್ರತಿಷ್ಠಾಪನಾ ಹಾಗೂ ನೂತನ ದೇಗುಲ ಲೋಕಾರ್ಪಣೆ ಮಹೋತ್ಸವ ಫೆ.27 ರಿಂದ ಮಾ.1ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್​ ಅಧ್ಯಕ್ಷ ಮುದಿಮಡು ಮಂಜುನಾಥ್​ ತಿಳಿಸಿದರು.
ತಾಲೂಕಿನ ದೊಡ್ಡೇರಿ ಹೋಬಳಿಯ ಶಿವನಗೆರೆ ಗ್ರಾಮದ ದೇವಾಲಯದ ಸಭಾಂಗಣಾದಲ್ಲಿ ಭಾನುವಾರ ಅಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 27ರಂದು ಜಲದಿ ಮಹೋತ್ಸವ, ಕುಂಚಗಿರಿ ಹೊಸದುರ್ಗ ಮಠದ ಡಾ. ಶ್ರೀ ಶಾಂತವೀರ ಸ್ವಾಮೀಜಿ, ರೈಲ್ವೆ ಸಚಿವ ವಿ.ಸೋಮಣ್ಣ, ವಿರೋಧಪಕ್ಷದ ನಾಯಕ ಆರ್​. ಅಶೋಕ್​, ಮೈಸೂರು ಸಂಸದ ಯಧುವೀರ ಕೃಷ್ಣದತ್ತ ಚಾಮರಾಜ ಒಡೆಯರ್​, ವಿಧಾನಪರಿಷತ್​ ಸದಸ್ಯ ಚಿದಾನಂದಗೌಡ, ಶಾಸಕ ಸುರೇಶ್​ ಗೌಡ, ಮಾಜಿ ಶಾಸಕ ರಾಜೇಶ್​ ಗೌಡ ಭಾಗವಹಿಸಲಿದ್ದಾರೆ ಎಂದರು.
ಫೆ.28ರಂದು ಮಹಾಗಣಪತಿ ಪ್ರಾರ್ಥನೆ, ಕಳಶ ಸ್ಥಾಪನೆ, ಶತರುದ್ರ ಪಾರಾಯಣ ಮತ್ತಿತರ ದೇವತಾ ಕಾರ್ಯ ನೆರವೇರಿಸಲಾಗುವುದು. ವಿಶೇಷ ಆಹ್ವಾನಿತರಾಗಿ ಎಲೆರಾಂಪುರ ಮಠದ ಡಾ. ಶ್ರೀ ಹನುಮಂತನಾಥ ಸ್ವಾಮೀಜಿ, ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ, ಕೇಂದ್ರ ಸಚಿವ ಎಚ್​.ಡಿ. ಕುಮಾರಸ್ವಾಮಿ, ಮಾಜಿ ಶಾಸಕ ಎಂ.ವಿ. ವೀರಭದ್ರಯ್ಯ ಭಾಗವಹಿಸಲಿದ್ದಾರೆ ಎಂದರು.
ಮಾ.1 ಮಹಾಗಣಪತಿ ಪೂಜೆ, ಪ್ರಾಣಪ್ರತಿಷ್ಠೆ ಹಾಗೂ ಮತ್ತಿತರ ಪೂಜಾ ಕೈಂಕರ್ಯ ನಡೆಯಲಿದ್ದು, ಕಾರ್ಯಕ್ರಮಕ್ಕೆ ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಡಾ. ಶ್ರೀ ನಿಮಾರ್ಲಾನಂದನಾಥ ಸ್ವಾಮೀಜಿ, ಸ್ಫಟಿಕಪುರಿ ಗುರುಗುಂಡೇಶ್ವರ ಮಠದ ಡಾ. ಶ್ರೀ ನಂಜಾವಧೂತ ಸ್ವಾಮೀಜಿ, ಡಿಸಿಎಂ ಡಿ.ಕೆ. ಶಿವಕುಮಾರ್​, ಗೃಹ ಸಚಿವ ಡಾ.ಜಿ. ಪರಮೇಶ್ವರ, ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಕೆ.ಎನ್​ ರಾಜಣ್ಣ, ವಿಧಾನ ಪರಿಷತ್​ ಸದಸ್ಯ ರಾಜೇಂದ್ರ ರಾಜಣ್ಣ, ಮಾಜಿ ಶಾಸಕ ಡಿ.ಸಿ. ಗೌರಿಶಂಕರ್​ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಟ್ರಸ್ಟ್​ ಉಪಾಧ್ಯಕ್ಷ ಎಚ್​.ಶಿವರಾಮ್​ ಮಾತನಾಡಿದರು.
ಪದಾಧಿಕಾರಿಗಳಾದ ಡಾ.ಕೆ.ಶ್ರೀದರ್​, ಡಿ.ಕೆ.ನಾಗೇಂದ್ರಪ್ಪ, ಆರ್​ ಎಸ್​ ಪ್ರಸಾದ್​, ಜಗದೀಶಬಾಬು, ಎಚ್​. ಈಶ್ವರಪ್ಪ, ಎಚ್​.ರಾಜಣ್ಣ, ಎಂ.ರಾಮಚಂದ್ರಯ್ಯ, ಕುಲಗುರುರಾಮಚಂದ್ರಪ್ಪ, ತಿಪ್ಪೇಸ್ವಾಮಿ ಇದ್ದರು.