ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಜಕುಮಾರ ಹೊನ್ನಾಡೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗುರುಪ್ರಸಾದ ಮೆಂಟೆ ಅವರನ್ನು ಸನ್ಮಾನಿಸಲಾಯಿತು. ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸಂದ ಜಿಲ್ಲಾಧ್ಯ ಆನಂದ ದೇವಪ್ಪ, ಉಪಾಧ್ಯ ಪೃಥ್ವಿರಾಜ ಎಸ್​., ಶಿವಕುಮಾರ ಸ್ವಾಮಿ, ಸುರೇಶ ಚನ್ನಶೆಟ್ಟಿ, ಡಾ.ಬಸವರಾಜ ಬಲ್ಲೂರ ಇತರರಿದ್ದರು. 
ರಾಜ್ಯ

ಹುಲಸೂರು ಪತ್ರಕರ್ತರ ಸಂಘದ ಅಧ್ಯಕ್ಷ ಹೊನ್ನಾಡೆ

ಹುಲಸೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷರಾಗಿ ರಾಜಕುಮಾರ ಹೊನ್ನಾಡೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಗುರುಪ್ರಸಾದ ಮೆಂಟೆ ಆಯ್ಕೆಯಾದರು. ಪಟ್ಟಣದ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ಭಾನುವಾರ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ ನೇತೃತ್ವದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಜಿಲ್ಲಾಧ್ಯಕ್ಷ ಆನಂದ ದೇವಪ್ಪ ಮಾತನಾಡಿ, ಯಾವುದೇ ಸಂಘ ಸಂಸ್ಥೆ ಬೆಳೆಯಬೇಕಾದರೆ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಅಗತ್ಯವಾಗಿದೆ. ಸಂಘದ ನಿಯಮಗಳನ್ನು ಚಾಚುತಪ್ಪದೇ ಪಾಲಿಸುವುದರ ಜತೆಗೆ ಸಭೆ ಸಮಾರಂಭ ಮಾಡಬೇಕು ಎಂದು ಹೇಳಿದರು.
ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಸಂದ ಜಿಲ್ಲಾ ಉಪಾಧ್ಯ ಪ್ರಥ್ವಿರಾಜ್​ ಎಸ್​., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಖಜಾಂಚಿ ಸುನೀಲ ಕುಲಕರ್ಣಿ, ಕಾರ್ಯದರ್ಶಿ ಸಂತೋಷ ಚೆಟ್ಟೆ, ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ ಪಾಟೀಲ, ವ್ಯವಸ್ಥಾಪಕ ರಾಜಕುಮಾರ ಸಾಗರ, ಕಸಾಪ ಜಿಲ್ಲಾಧ್ಯ ಸುರೇಶ ಚನ್ನಶೆಟ್ಟಿ, ಸಾಹಿತಿ ಡಾ.ಬಸವರಾಜ ಬಲ್ಲೂರ, ತಾಲೂಕು ಸದಸ್ಯರಾದ ಶಿವರಾಜ ಖಪಲೆ, ಮಹೇಶ ಹುಲಸೂರಕರ, ಬಸವಕುಮಾರ ಕೌಟೆ, ವೀರಶೆಟ್ಟಿ ಕರಕಲ್ಲೆ, ದತ್ತಾ ಸಾಬನೆ ಇತರರಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂದ ಜಿಲ್ಲಾಧ್ಯ ಆನಂದ ದೇವಪ್ಪ, ಉಪಾಧ್ಯ ಪ್ರಥ್ವಿರಾಜ್​ ಎಸ್​., ಶಿವಕುಮಾರ ಸ್ವಾಮಿ, ಸುನೀಲ ಕುಲಕರ್ಣಿ, ಸಂತೋಷ ಚೆಟ್ಟೆ, ಶ್ರೀಕಾಂತ ಪಾಟೀಲ ಅವರನ್ನು ಶ್ರೀಮಠದಿಂದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಸನ್ಮಾನಿಸಿ ಆಶೀರ್ವದಿಸಿದರು.