ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಪ್ರೊ.ಭರತ್​ಕುಮಾರ, ಡಾ.ರಾಜೀವ್​ ಜೋಶಿ, ಡಾ.ಪಿ.ಎಸ್​.ಕಟ್ಟಿಮನಿ, ಡಾ. ಸತೀಶ್​ ತೋಟರ್​ ಇತರರಿದ್ದರು. 
ರಾಜ್ಯ

ಪ್ರಾಮಾಣಿಕತೆ ಗುಣಮಟ್ಟ ಸಂಶೋಧನೆ ಅಡಿಪಾಯ

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿಕೆ
  • ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕಾರ್ಯಾಗಾರ
ಕಲಬುರಗಿ: ಪ್ರಾಮಾಣಿಕತೆ, ಸಮಗ್ರತೆ, ಸ್ವಂತಿಕೆ ಮತ್ತು ನೈತಿಕ ನಡವಳಿಕೆಯೂ ಗುಣಮಟ್ಟದ ಸಂಶೋಧನೆಯ ಅಡಿಪಾಯಗಳಾಗಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಗ್ರಂಥಾಲಯದಿಂದ ಹೊಸದಾಗಿ ಪ್ರವೇಶ ಪಡೆದ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಸಂಶೋಧನೆ ಮತ್ತು ಪ್ರಕಟಣೆ ನೈತಿಕತೆ ಕುರಿತು ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಅರ್ಥಪೂರ್ಣ ಸಂಶೋಧನಾ ವಿಷಯ ಆಯ್ಕೆ ಮಾಡಿಕೊಳ್ಳಬೇಕು. ಕೃತಿಚೌರ್ಯ ತಪ್ಪಿಸಬೇಕು. ದೇಶ-ವಿದೇಶದ ಪ್ರತಿಷ್ಠಿತ ರ್ಜನ್​ಲ್​ ಮತ್ತು ಶೋಧಗಂಗಾದಲ್ಲಿ ನಮ್ಮ ಸಂಶೋಧನಾ ಪ್ರಬಂಧ ಠೇವಣಿ ಹಾಗೂ ಪ್ರಕಟವಾಗುವಂತೆ ನಾವು ಸಂಶೋಧನೆಯಲ್ಲಿ ತೊಡಗುವುದರಿಂದ ಸಂಶೋಧಕರಿಗೆ ಶೈಕ್ಷಣಿಕ ವೃತ್ತೀಜಿವನದ ಯಶಸ್ಸಿಗೆ ನೆರವಾಗಲಿದೆ ಎಂದರು.
ಪ್ರಭಾರ ಪರೀಾ ನಿಯಂತ್ರಕ ಪ್ರೊ.ಭರತ್​ಕುಮಾರ್​, ಕಾರ್ಯಾಗಾರದ ಸಂಯೋಜಕ ಡಾ.ಪಿ.ಎಸ್​.ಕಟ್ಟಿಮನಿ ಮಾತನಾಡಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ರಾಜೀವ್​ ಜೋಶಿ, ಗಣಿತ ವಿಭಾಗದ ಪ್ರಾಧ್ಯಾಪಕ ಡಾ.ಎನ್​.ಸಂದೀಪ್​ ಅವರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಗ್ರಂಥಾಲಯದ ಉಪ ಗ್ರಂಥಪಾಲಕ ಡಾ. ಸತೀಶ್​ ತೋಟರ್​, ಸಿಬ್ಬಂದಿ ರಾಜಕುಮಾರ್​ ಕಲ್ಯಾಣಿ, ಪ್ರಮುಖರಾದ ರಾಜೇಶ ದಾಸ್​, ಬಸವರಾಜ ಯಾದವಾಡ, ನಿಂಗಣ್ಣ ಎಂ.ಜಿ., ಪ್ರಕಾಶ ಎಸ್​.ಎನ್​., ಸಾಗರ್​ ಕಬಾಡೆ, ಸತೀಶಕುಮಾರ ಇದ್ದರು. ಸಹಾಯಕ ಗ್ರಂಥಪಾಲಕ ಡಾ.ಜಿ.ಜೆ.ಪಿ. ದೀತ್​ ನಿರೂಪಣೆ ಮಾಡಿದರು.
"


ನಮ್ಮ ವಿಶ್ವವಿದ್ಯಾಲಯದಲ್ಲಿ ಅತ್ಯುನ್ನತ ಪ್ರಯೋಗಾಲಯಗಳಿದ್ದು, ಆಧುನಿಕ ಸೌಲಭ್ಯದ ಸುಸಜ್ಜಿತ ಕೇಂದ್ರ ಗ್ರಂಥಾಲಯದ ಸಂಪನ್ಮೂಲಗಳನ್ನು ಸಂಶೋಧಕರು ಹೆಚ್ಚು ಬಳಕೆ ಮಾಡಿಕೊಳ್ಳಬೇಕು. ಸಂಶೋಧನಾ ವಿದ್ಯಾರ್ಥಿಗಳು ನಿತ್ಯ ತಮ್ಮ ಸಂವಹನ ಮತ್ತು ಭಾಷಾ ಕೌಶಲ ಬೆಳೆಸಿಕೊಳ್ಳುವುದರ ಜತೆಗೆ ಪರಿಣಾಮಕಾರಿ ಬರವಣಿಗೆಯ ಕೌಶಲ ಹೆಚ್ಚಿಸಿಕೊಳ್ಳಬೇಕು.

— > ಪ್ರೊ.ಬಟ್ಟು ಸತ್ಯನಾರಾಯಣ, ಕುಲಪತಿ, ಸಿಯುಕೆ