Home Guard dies in Bolero collision 
ರಾಜ್ಯ

ಬೊಲೆರೋ ಡಿಕ್ಕಿಯಾಗಿ ಹೋಂಗಾರ್ಡ್​ ಸಾವು

ಬಾಗೇಪಲ್ಲಿ: ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರ ನಾರೇಪಲ್ಲಿ ಟೋಲ್​ ಪ್ಲಾಜಾ ಬಳಿಯಲ್ಲಿರುವ ಆರ್​ಟಿಒ ಕಚೇರಿ ಬಳಿ ಶನಿವಾರ ರಾತ್ರಿ ವೇಳೆ ವಾಹನ ತಪಾಸಣೆ ಮಾಡುತ್ತಿದ್ದ ಹೋಂಗಾರ್ಡ್​ಗೆ ಬೊಲೆರೋ ಡಿಕ್ಕಿಯಾಗಿದ್ದು, ನೌಕರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಾಗೇಪಲ್ಲಿ ನಿವಾಸಿ, ಗೃಹರಕ್ಷಕ ದಳ ಸಿಬ್ಬಂದಿ ಷಫೀವುಲ್ಲಾ(45) ಮೃತ. ಷಫೀವುಲ್ಲಾ ಶನಿವಾರ ರಾತ್ರಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆಂಧ್ರದ ಚೆಕ್​ಪೋಸ್ಟ್​ ಕಡೆಯಿಂದ ಬಂದ ಬೊಲೆರೋ ಷಪೀವುಲ್ಲಾಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಬಾಗೇಪಲ್ಲಿಯ ಸಾರ್ವಜನಿಕ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಬಾಗೇಪಲ್ಲಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
ಸ್ಥಳಿಯರು ಬೇಸರ: ಆರ್​ಟಿಒ ಕಚೇರಿ ಬಳಿ ವಾಹನಗಳನ್ನು ನಿಲ್ಲಿಸುವ ಹಾಗೂ ತಪಾಸಣೆ ನಡೆಸುವ ಬಗ್ಗೆ ಚಾಲಕರಿಗೆ ಮುನ್ನಚ್ಚರಿಕೆ ನೀಡುವ ಯಾವುದೇ ಸೂಚನಾ ಫಲಕ, ನಾಕಾಬಂದಿಯೂ ಇಲ್ಲ. ರಾತ್ರಿ ವೇಳೆ ಹೆದ್ದಾರಿಗೆ ಅಡ್ಡಲಾಗಿ ನಿಂತು ವೇಗವಾಗಿ ಚಲಿಸುವ ವಾಹನ ತಡೆಯುವುದು ಅವೈಜ್ಞಾನಿಕ ಪದ್ಧತಿಯಾಗಿದೆ. ಆರ್​ಟಿಒ ಕಚೇರಿ ಅಧಿಕಾರಿಗಳ ರ್ನಿಲಕ್ಷ$್ಯದಿಂದಲೇ ಹೋಂಗಾರ್ಡ್​ ಪ್ರಾಣಕ್ಕೆ ಕುತ್ತು ಬಂದಿದೆ ಎಂದು ಸ್ಥಳಿಯರು ಬೇಸರ ವ್ಯಕ್ತಪಡಿಸಿದ್ದಾರೆ.