ವಿಜಯಪುರದ ಸ್ವಾತಂತ್ರೃಯೋಧರ ಕಾಲನಿಯಲ್ಲಿನ ಸಾಹಿತಿ ಸಂಗಮೇಶ ಬಾದಾಮಿ ಅವರ ನಿವಾಸದಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ನಡೆಯಿತು. ಕುಶಾಲ ಬರಗೂರ, ಶಂಕರ ಬೈಚಬಾಳ, ಮುರುಗೇಶ ಸಂಗಮ ಮತ್ತಿತರರಿದ್ದಾರೆ. 
ರಾಜ್ಯ

ಪುಸ್ತಕಗಳಿಂದ ಮನೆ ಶೃಂಗಾರ

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಪುಸ್ತಕ ಪ್ರಾಧಿಕಾರ ಸದಸ್ಯ ಕುಶಾಲ ಬರಗೂರ ಅಭಿಮತ
  • ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ
ವಿಜಯಪುರ: ದೇವರ ಮನೆಯಲ್ಲಿ ದೇವರು ಕಾಣುವ ಹಾಗೆ ಮನೆ ಪ್ರವೇಶಿಸಿದೊಡನೆ ಗ್ರಂಥಗಳು ಕಾಣಬೇಕು. ಅಂದಾಗ ಓದುವ ಸಂಸ್ಕೃತಿ ಬೆಳೆಯುತ್ತದೆ. ಅಲ್ಲದೇ, ಮೊಬೈಲ್ ಗೀಳು ಕಡಿಮೆಯಾಗಿ ಓದುವ ಆಸಕ್ತಿ ಹೆಚ್ಚುತ್ತದೆ. ಪುಸ್ತಕಗಳಿಂದ ಮನೆ ಶೃಂಗಾರಗೊಂಡರೇ, ಮಕ್ಕಳ ಮನಸ್ಸು ಜ್ಞಾನದಿಂದ ಶೃಂಗಾರವಾಗುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸದಸ್ಯ ಕುಶಾಲ ಬರಗೂರ ಹೇಳಿದರು.
ನಗರದ ಸ್ವಾತಂತ್ರೃ ಯೋಧರ ಕಾಲನಿಯ ಸಾಹಿತಿ ಸಂಗಮೇಶ ಬಾದಾಮಿ ಅವರ ನಿವಾಸದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಂಕರ ಬೈಚಬಾಳ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ವಚನ ಕ್ರಾಂತಿಗೆ ನಾಂದಿ ಹಾಡಿದ ಬಸವನಬಾಗೇವಾಡಿಯ ಬಸವಣ್ಣನವರ ವಚನಗಳು ನಮಗೆ ದಾರಿದೀಪವಾಗಿವೆ ಎಂದು ತಿಳಿಸಿದರು.
ಸಾಹಿತಿ ಸಂಗಮೇಶ ಬಾದಾಮಿ ಮಾತನಾಡಿ, ಮನೆಯಲ್ಲಿ ಬರೀ ಪುಸ್ತಕಗಳಿದ್ದರೆ ಸಾಲದು. ಅವುಗಳನ್ನು ಇಷ್ಟಪಟ್ಟು ಓದಬೇಕು. ಅಂದಾಗಲೇ ಪುಸ್ತಕ ಸಂಸ್ಕೃತಿ ಉಳಿಯುತ್ತದೆ ಎಂದು ತಿಳಿಸಿದರು.
ಮಲ್ಲಿಕಾರ್ಜುನ ಅಮರಣ್ಣವರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಸಾಲವಾಡಗಿ ಸ್ವಾಗತಿಸಿದರು. ಮುರುಗೇಶ ಸಂಗಮ ನಿರೂಪಿಸಿದರು. ಎಸ್.ಡಿ. ಜೋಶಿ ವಂದಿಸಿದರು. ಸಿದ್ದು ಯರನಾಳ, ಸಾಕ್ಷಿ ಚವ್ಹಾಣ, ಬಸವರಾಜ ಒಂಟಗೋಡಿ, ಹರ್ಷ ಮಲಘಾಣ, ಅಂಬಾದಾಸ ಚವ್ಹಾಣ, ವಿದ್ಯಾಲಕ್ಷ್ಮಿ ಬದಾಮಿ ಮತ್ತಿತರರಿದ್ದರು.