ಚನ್ನಮ್ಮನ ಕಿತ್ತೂರಿನ ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶಾಸಕ ಬಾಬಾಸಾಹೇಬ ಪಾಟೀಲ, ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕಲಗೌಡ ಪಾಟೀಲ, ಶಿವಾನಂದ ಗುಡುಗನಟ್ಟಿ ಇತರರಿದ್ದರು. 
ರಾಜ್ಯ

ಇತಿಹಾಸ ಉಳಿವಿಗೆ ಶ್ರಮಿಸೋಣ

ವಿಜಯವಾಣಿ ಸುದ್ದಿಜಾಲ ಚನ್ನಮ್ಮನ ಕಿತ್ತೂರು
ಇತಿಹಾಸ ಕೇಳುವುದಕ್ಕಿಂತ ನೋಡಿದರೆ ಹೆಚ್ಚು ನೆನಪಿನಲ್ಲಿಡಲು ಸಾಧ್ಯವಾಗುತ್ತದೆ. ಇಂದು ವಸ್ತು ಸಂಗ್ರಹಾಲಯಗಳಿರುವುದರಿಂದ ಇತಿಹಾಸ, ಪರಂಪರೆ ಹಾಗೂ ಸಂಸತಿ ಜೀವಂತವಾಗಿವೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯದ ಆವರಣದಲ್ಲಿ ಪುರಾತತ್ತ$್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ, ಕಿತ್ತೂರು ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತು ಸಂಗ್ರಹಾಲಯ ಹಾಗೂ ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಟಕದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರೊ.ಡಾ.ಸದಾಶಿವ ಮುಗಳಿ ಮಾತನಾಡಿ, ವಸ್ತು ಸಂಗ್ರಹಾಲಯಗಳ ಹಿನ್ನೆಲೆ, ಬೆಳೆದು ಬಂದ ಬಗೆ, ಅವುಗಳ ಅಧ್ಯಯನದ ಮಹತ್ವ ಹಾಗೂ ವೈವಿಧ್ಯಮಯ ವಸ್ತು ಸಂಗ್ರಹಾಲಯಗಳ ಕುರಿತು ಮಾಹಿತಿ ನೀಡಿದರು.
ಎಸ್ಸೆಸ್ಸೆಲ್ಸಿ ಪರೀೆಯ ಕನ್ನಡ ವಿಷಯದಲ್ಲಿ 125 ಅಂಕ ಪಡೆದ 40 ವಿದ್ಯಾರ್ಥಿಗಳು ಹಾಗೂ ಆಂಗ್ಲ ಮಾಧ್ಯಮದಲ್ಲಿ ದ್ವೀತಿಯ ಭಾಷೆ ಕನ್ನಡಕ್ಕೆ 100
ಅಂಕ ಪಡೆದ ತಾಲೂಕಿನ 15 ವಿದ್ಯಾರ್ಥಿಗಳಿಗೆ ತಾಲೂಕು ಕಸಾಪ ಟಕದ ವತಿಯಿಂದ ಸನ್ಮಾನಿಸಲಾಯಿತು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಿತ್ತೂರಿನ ಇತಿಹಾಸ ಸಾರಲಿದೆ "ಥೀಮ್​ ಪಾರ್ಕ್​' : ಚನ್ನಮ್ಮನ ಕಿತ್ತೂರಿನ ಇತಿಹಾಸವನ್ನು ದೇಶವೇ ಬಂದು ಕಣ್ತುಂಬಿಕೊಳ್ಳುವಂತೆ ಮಾಡಬೇಕೆಂಬ ಕನಸಿದೆ. ಕಿತ್ತೂರಿನ ಇತಿಹಾಸ ಅರಿಯಲು ಆಸಕ್ತಿಯಿಂದ ಬರುತ್ತಿದ್ದ ಜನರು ನಿರಾಸೆಯಿಂದ ಹೋಗಬೇಕಿತ್ತು. ಆದರೆ, ಈಗ ಕಿತ್ತೂರಿನ ಕೋಟೆ ಹಾಗೂ ಅರಮನೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಜತೆಗೆ ಕಿತ್ತೂರಿನಲ್ಲಿ "ಥೀಮ್​ ಪಾರ್ಕ್​' ಯೋಜನೆ ಮಾಡಲಾಗಿದೆ. ಕಿತ್ತೂರಿನ ಇತಿಹಾಸ, ಪರಂಪರೆ ಸಾರಲಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು.
ತಹಸೀಲ್ದಾರ್​ ಕಲಗೌಡ ಪಾಟೀಲ, ಸಿಪಿಐ ಶಿವಾನಂದ ಗುಡುಗನಟ್ಟಿ, ೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜನವರ, ತಾಪಂ ಇಒ ನಿಂಗಪ್ಪ ಮಸಳಿ, ಪ್ರಾಚಾರ್ಯ ಡಾ.ಬಸವರಾಜ ಹೊಸಮನಿ, ಕಸಾಪ ತಾಲೂಕಾಧ್ಯಕ್ಷ ಡಾ.ಎಸ್​.ಬಿ.ದಳವಾಯಿ, ವಸ್ತು ಸಂಗ್ರಹಾಲಯದ ಮೇಲ್ವಿಚಾರಕ ರಾವೇಂದ್ರ, ಗಣ್ಯರಾದ ವೈಶಾಲಿ ಅಳಗುಂಡಿ, ಮಂಜುನಾಥ ಕಳಸಣ್ಣವರ, ಬಿ.ಸಿ.ಬಿದರಿ ಇತರರಿದ್ದರು.