ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದಲ್ಲಿ ಭಾರತಾಂಬೆ ಭಾವಚಿತ್ರಕ್ಕೆ ಶ್ರೀಸೌಮ್ಯನಾಥ ಸ್ವಾಮೀಜಿ, ಜಗ್ಗೇಶ್, ಡಾ.ವಿ.ಬಿ.ಆರತಿ, ಶ್ರೀಕಾಂತ್ ಶೆಟ್ಟಿ ಪುಷ್ಪ ನಮನ ಸಲ್ಲಿಸಿದರು 
ರಾಜ್ಯ

ಎಲ್ಲರ ಶ್ರೇಯಸ್ಸು ಬಯಸುವ ಹಿಂದೂ ಧರ್ಮ; ಹಿಂದೂ ಸಮಾಜೋತ್ಸವದಲ್ಲಿ ಶ್ರೀಸೌಮ್ಯನಾಥ ಸ್ವಾಮೀಜಿ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಎಲ್ಲರ ಶ್ರೇಯಸ್ಸು ಬಯಸುವುದು ಹಿಂದೂ ಧರ್ಮ
  • ಆದಿಚುಂಚನಗಿರಿ ಶಾಖಾಮಠದ ಶ್ರೀಸೌಮ್ಯನಾಥ ಸ್ವಾಮೀಜಿ ಅಭಿಮತ
  • ಆರ್​ಎಸ್ಎಸ್ 100 ವರ್ಷದ ಹಿನ್ನೆಲೆಯಲ್ಲಿ ಹಿಂದೂ ಸಮಾಜೋತ್ಸವ

ಬೆಂಗಳೂರು:ಧರ್ಮದ ಮೇಲಿನದಾಳಿಗಳು ಹೆಚ್ಚುತ್ತಿದ್ದು,ಪ್ರತಿಯೊಬ್ಬರೂತಮ್ಮ ಧರ್ಮದ ರಕ್ಷಣೆಗಾಗಿ ಹೋರಾಡುವಮನೋಭಾವ ಹೊಂದಿರಬೇಕು.ಹಿಂದೂ ಎಂಬುದುಎಲ್ಲರ ಶ್ರೇಯಸ್ಸು ಬಯಸುವ ಧರ್ಮಎಂದು ಆದಿಚುಂಚನಗಿರಿ ಶಾಖಾ ಮಠದಶ್ರೀಸೌಮ್ಯನಾಥ ಸ್ವಾಮೀಜಿಹೇಳಿದರು.

ರಾಷ್ಟ್ರೀಯಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ಕ್ಕೆ ನೂರುವರ್ಷಗಳು ಪೂರ್ಣಗೊಂಡಿರುವಹಿನ್ನೆಲೆಯಲ್ಲಿ ಜಯನಗರದ ಚಂದ್ರಗುಪ್ತಮೌರ್ಯ (ಶಾಲಿನಿಗ್ರೌಂಡ್) ಆಟದಮೈದಾನದಲ್ಲಿ ಹಮ್ಮಿಕೊಂಡಿದ್ದಹಿಂದೂ ಸಮಾಜೋತ್ಸವ ಕಾರ್ಯಕ್ರಮದಸಾನ್ನಿಧ್ಯ ವಹಿಸಿ ಆಶೀರ್ವಚನನೀಡಿದರು.

ಕೇಸರಿಎಂಬುದು ತ್ಯಾಗದ ಸಂಕೇತ.ಆರ್‌ಎಸ್‌ಎಸ್ಕಾರ್ಯಕರ್ತರು ಕೇಸರಿ ಶಾಲುಧರಿಸಿರುವುದು ಅವರ ಸೇವಾ ಮನೋಭಾವನೆಗೆಸಾಕ್ಷಿಯಾಗಿದೆ.ಹುಟ್ಟಿದ ವ್ಯಕ್ತಿತನ್ನ ದೇಶ, ಧರ್ಮದಹಿಂದಿನ ಇತಿಹಾಸವನ್ನು ಅರಿತುಕೊಂಡಿರಬೇಕು.ನಮ್ಮ ಪುರಾತನಋಷಿ ಮುನಿಗಳು ತಪಸ್ಸು ಮಾಡಿ,ಹಲವು ಕೊಡುಗೆಗಳನ್ನುನೀಡಿದ ಪುಣ್ಯಭೂಮಿ ಭಾರತ.ಇಂದು ಧರ್ಮದಮೇಲಿನ ದಾಳಿ ಉಂಟಾದಾಗ,ಅನ್ಯಾಯದ ವಿರುದ್ಧಧ್ವನಿ ಎತ್ತುವ ಧೈರ್ಯ ಎಲ್ಲರಿಗೂಬರಬೇಕು. ಹಿಂದೂಧರ್ಮ ವಿಶ್ವಕ್ಕೆ ಮಾರ್ಗದರ್ಶನಮಾಡುವ, ಮಾನವೀಯತೆ,ಸಂಸ್ಕೃತಿ,ಸಂಸ್ಕಾರಗಳನ್ನುನೀಡುವ ಶಕ್ತಿ ಹೊಂದಿದೆ.ಇಂತಹ ಧರ್ಮದಪರವಾಗಿ ಕೆಲಸ ಮಾಡುವ ಆರ್‌ಎಸ್‌ಎಸ್ತನ್ನ 100ನೇವರ್ಷದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವಕಾರ್ಯಕ್ರಮ ಅರ್ಥಪೂರ್ಣ ಎಂದರು.

ಕಾರ್ಯಕ್ರಮದಮೊದಲಿಗೆ ಪ್ರಾಸ್ತಾವಿಕವಾಗಿಮಾತನಾಡಿದ ಸಂಸ್ಕೃತ ವಿದುಷಿಡಾ.ವಿ.ಬಿ.ಆರತಿ,ಜಗತ್ತಿಗೆ ವೇದ,ಆಯುರ್ವೇದ,ಯೋಗ,ಹಲವು ವೈವಿದ್ಯಕಲೆ, ಸಂಸ್ಕೃತಿಯನ್ನುನೀಡಿದ್ದು ಸನಾತನ ಧರ್ಮ.‘ಕೊಂದ ಜನರನ್ನುಬಂಧು ಎಂಬ ದೇಶ ಭಾರತ’ ವಿನಮ್ರತೆ,ಪರೋಪಕಾರಗಳುಭಾರತದ ಮಣ್ಣಿನಲ್ಲಿದೆ.ಇಲ್ಲಿನಗುರುಪರಂಪರೆಯನ್ನು ನಾಶ ಮಾಡುವುದಕ್ಕಾಗಿಮೆಕಾಲೆ ಶಿಕ್ಷಣ ಪದ್ಧತಿಯನ್ನುನಮ್ಮ ಮೇಲೆ ಹೇರಲಾಯಿತು.ಅದನ್ನು ಮೀರಿಯೂನಮ್ಮ ಅಸ್ಮಿತೆ ನಮ್ಮ ರಕ್ತದಲ್ಲಿಬೆರೆತಿದೆ ಎಂದರು.

ಸಮಾರಂಭದಲ್ಲಿಹಿಂದೂ ಕಾರ್ಯಕರ್ತ ಶ್ರೀಕಾಂತ್ಶೆಟ್ಟಿ ಭಾರತದ ರಕ್ತಸಿಕ್ತಇತಿಹಾಸ ಕುರಿತು ಉಪನ್ಯಾಸ ನೀಡಿದರು.ಹಿಂದೂ ಸಮಾಜೋತ್ಸವಸಮಿತಿಯ ಜಯನಗರ ಮಂಡಲ ಅಧ್ಯಕ್ಷೆಸಾಧನ ರಾಜಶೇಖರ್ ಮತ್ತಿತರರುಉಪಸ್ಥಿತರಿದ್ದರು.

ಪ್ರತಿ ಮನೆಯಲ್ಲಿರುವ ತಾಯಿ ನಿಜವಾದ ಗುರು. ಆಕೆ ಮನಸ್ಸು ಮಾಡಿದರೆ ಭಾರತವನ್ನು ಸದೃಢ ರಾಷ್ಟ್ರವನ್ನಾಗಿ ಮಾಡಬಲ್ಲಳು. ಹಿಂದುತ್ವ ಮನೆ ಮನೆಗಳಲ್ಲಿ ಹುಟ್ಟಬೇಕೆಂದರೆ ಆ ಮನೆಯ ತಾಯಿ ಮಕ್ಕಳಿಗೆ ಸಂಸ್ಕಾರ ನೀಡಬೇಕು. ನಾವು ಸರಿಯಿದ್ದರೆ ಅನ್ಯ ಧರ್ಮಗಳನ್ನು ಧೂಷಿಸುವ ಅಗತ್ಯವಿಲ್ಲ. ದೇಶಕ್ಕೆ ದೇವರ ಸ್ವರೂಪವನ್ನು ನೀಡಿದವರು ಹಿಂದೂಗಳು.