ಬಸವಕಲ್ಯಾಣದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಬೃಹತ್​ ಹಿಂದೂ ಸಮಾವೇಶದ ಪೋಸ್ಟರ್​ ಶನಿವಾರ ಬಿಡಿಬಿಸಿ ಅಧ್ಯಕ್ಷ ಅನೀಲಕುಮಾ ರಗಟೆ ಮತ್ತು ಮುಖಂಡ ಬಸವರಾಜ ಸ್ವಾಮಿ ಅವರಿಗೆ ನೀಡಿ ಸಮಾವೇಶಕ್ಕೆ ಆಹ್ವಾನಿಸಲಾಯಿತು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಗುಂಡುರೆಡ್ಡಿ ಕಮಲಾಪುರೆ, ಸಿದ್ರಾಮಪ್ಪ ಗುದಗೆ, ರಾಜು ಮಂಠಾಳೆ, ದತ್ತು ಭೆಂಡೆ, ಮನೋಜ ಮಾಶೇಟ್ಟಿ, ರೇಖಾ ಹೊಸಮನಿ ಇದ್ದರು. 
ರಾಜ್ಯ

ಹಿಂದೂ ಸಮಾವೇಶದ ಭರ್ಜರಿ ಪ್ರಚಾರಕ್ಕೆ ಚಾಲನೆ

ಬಸವಕಲ್ಯಾಣ: ನಗರದಲ್ಲಿ ಜೂ.28ರಂದು ಹಮ್ಮಿಕೊಳ್ಳಲಾಗಿರುವ ಬಸವಾದಿ ಶಿವಶರಣರ ಬೃಹತ್​ ಹಿಂದೂ ಸಮಾವೇಶದ ಪ್ರಚಾರ ಕಾರ್ಯಕ್ಕೆ ನಗರದಲ್ಲಿ ಶನಿವಾರ ಚಾಲನೆ ನೀಡಲಾಯಿತು. ನಗರದ ಬಿಡಿಪಿಸಿ ಕಚೇರಿ, ಭಾಂಡೆ ಬಜಾರ್​, ಸರಾಫ್​ ಬಜಾರ್​, ಎಪಿಎಂಸಿ ಮಾರುಕಟ್ಟೆ, ಕಿರಾಣ ಬಜಾರ್​, ತರಕಾರಿ&ಹಣ್ಣು ಮಾರ್ಕೆಟ್​, ಅಡತ್​ ಬಜಾರ್​ ಸೇರಿ ನಾನಾ ಕಡೆ ಸಮಾವೇಶದ ಸಂಟಕರು ಭೇಟಿ ನೀಡಿ ಪೋಸ್ಟರ್​ಗಳನ್ನು ವಿತರಿಸಿ ಆಹ್ವಾನಿಸಿದರು. ಸಮಾವೇಶದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಗುಂಡುರಡ್ಡಿ ಕಮಲಾಪುರೆ, ಪ್ರಮುಖರಾದ ಸುನೀಲ ಪಾಟೀಲ್​, ಎಪಿಎಂಸಿ ಮಾಜಿ ಸಿದ್ರಾಮಪ್ಪ ಗುದಗೆ, ದೀಪಕ ಗಾಯಕವಾಡ, ಗಿರೀಶ ತಾಂಬೋಳೆ, ರಾಜು ಸುಗರೆ, ಅನಿಲ ಹಲಶೆಟ್ಟೆ, ಶ್ರೀಕಾಂತ ಮಂಠಾಳ, ದತ್ತು ಭೇಂಡೆ, ಸತೀಶ ಮಟಗೆ, ಹಣಮಂತ ಅಂಬುಲಗೆ, ಮನೋಜ ಮಾಶೆಟ್ಟೆ, ಸಂದೀಪ ಪಾಟೀಲ್​, ರೇಖಾ ಹೊಸಮನಿ ಇತರರು ಪಾಲ್ಗೊಂಡಿದ್ದರು.
"

ಸಮಾವೇಶದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವಂತೆ ಪ್ರೇರೇಪಿಸಲು ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ. ಎಲ್ಲೆಡೆ ತೆರಳಿದಾಗ ಉತ್ತಮ ಸ್ಪಂದನೆ ದೊರೆಯುತ್ತಿದೆ. ಬಹುತೇಕರು ಸಮಾವೇಶಕ್ಕೆ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

— > ಗುಂಡುರೆಡ್ಡಿ ಕಮಲಾಪುರೆ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ