ನೆಲಮಂಗಲ ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಜಗದೀಶ್ಚೌಧರಿ, ಸತೀಶ್, ರಾಮಕೃಷ್ಣಪ್ಪ, ಕೆ.ಪಿ.ಬೃಂಗೇಶ್ ಇತರರು ಇದ್ದರು.
ನೆಲಮಂಗಲ : ಹಿಂದುಗಳ ಜಾಗೃತಿಗಾಗಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಪ್ರಯುಕ್ತ 25ರಂದು ತಾಲೂಕಿನಲ್ಲಿ ಹಿಂದೂ ಸಮಾಜೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್ಚೌಧರಿ ತಿಳಿಸಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯಿಂದ ಆಯೋಜಿಸಿದ್ದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. 25ರಂದು ಬೆಳಗ್ಗೆ 10 ಗಂಟೆಗೆ ನಗರದ ವಿವರ್ಸ್ ಕಾಲನಿಯ ಶ್ರೀ ಚೌಡೇಶ್ವರಿ ದೇವಾಲಯದಿಂದ ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದವರೆಗೂ ಹಿಂದೂ ಶೋಭಯಾತ್ರೆ ನಡೆಯಲಿದ್ದು, ಬಳಿಕ ವೇದಿಕೆ ಕಾರ್ಯಕ್ರಮ ನೆರವೇರಿಸಲಾಗುವುದು. ಬಸವಣ್ಣ ದೇವರ ಮಠದ ಶ್ರೀ ಸಿದ್ಧಲಿಂಗಸ್ವಾಮೀಜಿ, ಶಿವಾನಂದಾಶ್ರಮದ ಶ್ರೀ ರಮಾನಂದನಾಥಸ್ವಾಮಿಜಿ ಸಾನಿಧ್ಯ ವಹಿಸಲಿದ್ದು, ಸಾಕಷ್ಟು ಗಣ್ಯರು ಭಾಗವಹಿಲಿದ್ದಾರೆ ಎಂದರು.
ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಸನಾತನ ಪರಂಪರೆ ಹಾಗೂ ಭಾರತೀಯತೆಯ ಅಸ್ಮಿತೆ ಉಳಿಸಿ, ಬೆಳಸುವ ಧ್ಯೇಯದಿಂದ ಪ್ರಾರಂಭಗೊಂಡ ಆರ್ಎಸ್ಎಸ್ ಸಂಘಟನೆಗೆ ನೂರು ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಹಿಂದುಗಳಲ್ಲಿ ಸಂಘಟನೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಸಮಾಜೋತ್ಸವ ಆಚರಿಸಲಾಗುತ್ತಿದೆ ಎಂದರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಮಾತನಾಡಿದರು.
ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ಬೃಂಗೇಶ್, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್, ಮಹಿಳಾ ಮೋರ್ಚಾ, ತಾಲೂಕು ಅಧ್ಯಕ್ಷ ಮಂಜುಳಾಸುರೇಶ್, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಸೋಲೂರು ಉಮೇಶ್, ಮುಖಂಡ ರವಿ, ರಾಜಮ್ಮಪ್ರಕಾಶ್, ಮಂಜುನಾಥ್, ಗಿರೀಶ್, ಅರುಣ್ಕುಮಾರ್, ಮಂಗಳಮ್ಮ, ಸುಮಾ, ಮಂಜುಳಾ ಇತರು ಇದ್ದರು.