ಚಿಂತಾಮಣಿ ತಾಲೂಕಿನ ಆಲಂಬಗಿರಿಯ ಬೆಟ್ಟದಲ್ಲಿ ಹಮ್ಮಿಕೊಂಡಿದ್ದ ಗಿರಿಪ್ರದಣೆಯಲ್ಲಿ ಧರ್ಮಾಧಿಕಾರಿ ಡಾ.ಎಂ.ಅರ್.ಜಯರಾಮ್ ಭಾಗವಹಿಸಿದ್ದರು.
: ತಾಲೂಕಿನ ಶ್ರೀೇತ್ರ ಆಲಂಬಗಿರಿಯ ಬೆಟ್ಟದಲ್ಲಿ ಶ್ರಾವಣ ಮಾಸದ ಹುಣ್ಣಿಮೆ ಪ್ರಯುಕ್ತ ಗಿರಿಪ್ರದಣೆ ಹಾಗೂ ದೀಪೋತ್ಸವ ನಡೆಯಿತು. ಶಂಖು, ಚಕ್ರಗಳ ವೇದಿಕೆಯಲ್ಲಿ ಪೂಜೆ ಸಲ್ಲಿಸಿ, ಕೈವಾರ ೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ನೇತೃತ್ವದಲ್ಲಿ ಗಿರಿಪ್ರದಣೆಯಲ್ಲಿ ಭಕ್ತರು ಭಾಗವಹಿಸಿದ್ದರು.ದೀಪೋತ್ಸವ ನೆರವೇರಿಸಲಾಯಿತು.
ಚಿಂತಾಮಣಿ ತಾಲೂಕಿನ ಕೈವಾರದ ಸದ್ಗುರು ಶ್ರೀ ಯೋಗಿನಾರೇಯಣ ಮಠದ ನಾದಸುಧಾರಸ ಸಾಂಸತಿಕ ಯೋಜನೆಯಡಿಯಲ್ಲಿ ಶ್ರಾವಣ ಶನಿವಾರ ಬಂಗಾರಪೇಟೆಯ ವಿದುಷಿ ವೈದೇಹಿ ಕೇಶವಮೂರ್ತಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ವಿ.ಗೋವರ್ಧನ್ ಪಿಟೀಲಿನಲ್ಲಿ, ವಿದ್ವಾನ್ ಬ್ಯಾಲಹಳ್ಳಿ ಲ್ಮನಾರಾಯಣ್ ಮೃದಂಗ ಬಾರಿಸಿದರು. ಸಹಗಾಯನದಲ್ಲಿ ವಿದುಷಿ ಮಾನಸ ಸಹಕರಿಸಿದರು.
ಸಂಗೀತ ಕಾರ್ಯಕ್ರಮದಲ್ಲಿ ತ್ಯಾಗರಾಜಸ್ವಾಮಿ, ಕನಕದಾಸರು, ಪುರಂದರದಾಸರು, ಸದ್ಗುರು ಕೈವಾರ ತಾತಯ್ಯನವರ ಕೀರ್ತನೆಗಳನ್ನು ಹಾಡಿದರು.ವಾನರಾಶಿ ಬಾಲಕೃಷ್ಣ ಭಾಗವತರ್ ಕಲಾವಿದರನ್ನು ಸನ್ಮಾನಿಸಿದರು.
ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಸದಸ್ಯರಾದ ಕೆ.ವಿ.ಸುರೇಶ್ ವ್ಯವಸ್ಥಾಪಕ ಕೆ.ಲ್ಮನಾರಾಯಣ್ ಇದ್ದರು. ಪ್ರತಿದಿನ ಬೆಳಗ್ಗೆ 11ರಿಂದ ಸಂಜೆ 7 ರವರೆಗೆ ನಾದಸುಧಾರಸ ವೇದಿಕೆಯಲ್ಲಿ ಕನಕದಾಸರು, ಪುರಂದರ ದಾಸರು ಮತ್ತು ಯೋಗಿ ನಾರೇಯಣ ತಾತಯ್ಯನವರ ಕೀರ್ತನೆಗಳ ಗಾಯನವನ್ನು ಏರ್ಪಡಿಸಲಾಗಿದೆ.