ಯಕ್ಕುಂಡಿ ಕರ್ನಾಟಕ ಪಬ್ಲಿಕ್​ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಮಾರ್ಗದರ್ಶನ ವೃತ್ತಿ ಮೇಳ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಚ್​.ಶಿವಣ್ಣ, ವೈ.ಪಿ.ಬೋಳಶೆಟ್ಟಿ, ದಿವ್ಯಶ್ರೀ ಬೋಸಲೆ, ಎಂ.ಬಿ.ಗಾಳಿ, ಎಸ್​.ಜಿ.ಕ್ಯಾಮಣ್ಣವರ, ಸಿ.ಎಸ್​.ಹುಡೇದ ಇತರರಿದ್ದರು. 
ರಾಜ್ಯ

ಉನ್ನತ ಅಧ್ಯಯನ ಜೀವನ ರೂಪಿಸಲು ಸಹಕಾರಿ

ಯಕ್ಕುಂಡಿ: ವಿದ್ಯಾರ್ಥಿಗಳು ಉನ್ನತ ವೃತ್ತಿ, ಅಧ್ಯಯನ ಆಯ್ಕೆ ಮಾಡಿಕೊಂಡಾಗ ಮುಂದಿನ ಜೀವನ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದು ಕೆಪಿಎಸ್​ ಪ್ರಾಚಾರ್ಯ ಎಚ್​.ಶಿವಣ್ಣ ಹೇಳಿದರು.
ಗ್ರಾಮದ ಕರ್ನಾಟಕ ಪಬ್ಲಿಕ್​ ಶಾಲೆಯ ಪ್ರೌಢಶಾಲಾ ವಿಭಾಗದಲ್ಲಿ ಬುಧವಾರ ಕೆಪಿಎಸ್​ ಪ್ರೌಢಶಾಲೆ ಮತ್ತು ಇಂಡಿಯಾ ಲಿಟರಸಿ ಸಂಸ್ಥೆ ಆಶ್ರಯದಲ್ಲಿ 9ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವೃತ್ತಿ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಉನ್ನತ ಶಿಣದ ಬಗ್ಗೆ ಕನಸು ಕಂಡು ಭವಿಷ್ಯದಲ್ಲಿ ನನಸುಮಾಡಿಕೊಳ್ಳಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಪಿಡಿಒ ವೈ.ಪಿ.ಬೋಳಶೆಟ್ಟಿ ಮಾತನಾಡಿ, ಶಿಕರ ಮಾರ್ಗದರ್ಶನ ಹಾಗೂ ನಿರಂತರ ಅಧ್ಯಯನದಿಂದ ವಿದ್ಯಾರ್ಥಿಗಳು
ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಇಂಡಿಯಾ ಲಿಟರೆಸಿ ಸಂಸ್ಥೆಯ ಎಂ.ಬಿ.ಗಾಳಿ ಮಾತನಾಡಿದರು. ದಿವ್ಯಶ್ರೀ ಬೋಸಲೆ, ಎಸ್​.ಜಿ.ಕ್ಯಾಮಣ್ಣವರ, ಸಿ.ಎಸ್​.ಹುಡೇದ, ಶಾಲಾ ಶಿಕರು ಇತರರಿದ್ದರು.