ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಪ್ರಜಾಪ್ರಭುತ್ವದಲ್ಲಿಆರೋಗ್ಯಕರ ವಿಮರ್ಶೆಗಳಿಗೆಅವಕಾಶವಿದೆ.ಆದರೆ ಸಾಮಾಜಿಕಜಾಲತಾಣಗಳಲ್ಲಿ ವ್ಯಕ್ತಿತ್ವಹರಣ ಮಾಡುವುದು ಸರಿಯಲ್ಲ.ಇಂತಹ ಬೇಜವಾಬ್ದಾರಿಪ್ರವೃತ್ತಿಯನ್ನು ತಕ್ಷಣವೇನಿಲ್ಲಿಸಬೇಕು ಎಂದು ಗಿರೀಶ್ಮಟ್ಟಣ್ಣವರ್‌ಗೆ ಹೈಕೋರ್ಟ್ಎಚ್ಚರಿಕೆ ನೀಡಿದೆ.
ಧರ್ಮಸ್ಥಳದಧರ್ಮಾಧಿಕಾರಿ ಡಾ.ಡಿ.ವೀರೇಂದ್ರಹೆಗ್ಗಡೆ ಅವರ ವಿರುದ್ಧಇನ್‌ಸ್ಟಾಗ್ರಾಮ್‌ನಲ್ಲಿಅವಹೇಳನಕಾರಿ ಹಾಗೂ ಅಶ್ಲೀಲವಿಷಯಗಳನ್ನು ಪೋಸ್ಟ್ ಮಾಡಿದಆರೋಪದ ಮೇಲೆ ಧರ್ಮಸ್ಥಳ ಪೊಲೀಸ್ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ಅನ್ನು ರದ್ದುಗೊಳಿಸುವಂತೆ ಕೋರಿಗಿರೀಶ್ ಮಟ್ಟಣ್ಣವರ್ ಸಲ್ಲಿಸಿದ್ದಅರ್ಜಿಯ ವಿಚಾರಣೆ ನಡೆಸಿದನ್ಯಾಯಮೂರ್ತಿ ಎಂ.ನಾಗಪ್ರಸನ್ನಅವರಿದ್ದ ಏಕಸದಸ್ಯ ಪೀಠವು,ಅರ್ಜಿದಾರರನಡವಳಿಕೆಗೆ ತೀವ್ರ ಆಕ್ಷೇಪವ್ಯಕ್ತಪಡಿಸಿತು.ಇಂತಹ ನಡವಳಿಕೆಮುಂದುವರಿಸುವುದಿಲ್ಲ ಎಂದುಮುಂದಿನ ವಿಚಾರಣೆಯೊಳಗೆ ನ್ಯಾಯಾಲಯಕ್ಕೆಪ್ರಮಾಣಪತ್ರ (ಅಫಿಡವಿಟ್)ಸಲ್ಲಿಸುವಂತೆಆದೇಶಿಸಿ,ವಿಚಾರಣೆಯನ್ನುಜೂ. 22ಕ್ಕೆಮುಂದೂಡಿದೆ.
ಅರ್ಜಿದಾರರಪರ ವಕೀಲರು ವಾದ ಮಂಡಿಸಿ, ಈ ಪೋಸ್ಟ್‌ಗಳಿಂದಸಮಾಜದಲ್ಲಿ ಯಾವುದೇ ಶಾಂತಿ ಭಂಗಉಂಟಾದ ನಿರ್ದಿಷ್ಟ ಘಟನೆ ನಡೆದಿಲ್ಲ.ಸಂತ್ರಸ್ತರಾದವರುನೇರವಾಗಿ ದೂರು ನೀಡಿಲ್ಲ,ಬದಲಿಗೆ ಮೂರನೇವ್ಯಕ್ತಿಯೊಬ್ಬರು ನೀಡಿದ ದೂರಿನಆಧಾರದ ಮೇಲೆ ಹಳೆಯ ಪೋಸ್ಟ್‌ಗಳನ್ನುಹುಡುಕಿ ತಂದು ಪ್ರಕರಣ ದಾಖಲಿಸಲಾಗಿದೆಎಂದು ವಾದಿಸಿದರು.
ಈವಾದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದಸರ್ಕಾರಿ ಅಭಿಯೋಜರು,ದೂರನ್ನುಸಂತ್ರಸ್ತರೇ ನೀಡಬೇಕು ಎಂದಿಲ್ಲ.ಯಾರು ಬೇಕಾದರೂದೂರು ನೀಡಬಹುದು.ಇಂತಹ ಪೋಸ್ಟ್‌ಗಳುಸಾರ್ವಜನಿಕ ವಲಯದಲ್ಲಿ ತಪ್ಪುಸಂದೇಶ ರವಾನಿಸಿ,ಸಮಾಜದ ಸ್ವಾಸ್ಥ್ಯಕೆಡಿಸುತ್ತವೆ ಎಂದರು.
ಆರೋಪಿಪ್ರಕಟಿಸಿದ್ದ ಚಿತ್ರಣಗಳನ್ನುಪರಿಶೀಲಿಸಿದ ನ್ಯಾಯಪೀಠವು,ನಿಮಗೆ ಇದೆಲ್ಲದರಅಗತ್ಯವೇನಿತ್ತು?ನಿಮ್ಮ ವೈಯಕ್ತಿಕಅಭಿಪ್ರಾಯ ಅಥವಾ ವಿಮರ್ಶೆಗಳನ್ನುವ್ಯಕ್ತಪಡಿಸಲು ಸ್ವತಂತ್ರರಿದ್ದೀರಿ,ಅದಕ್ಕೆಅಭ್ಯಂತರವಿಲ್ಲ.ಆದರೆ ಸಾರ್ವಜನಿಕವಾಗಿನಿಂದಿಸುವುದು ಪ್ರಜಾಪ್ರಭುತ್ವದಲಕ್ಷಣವಲ್ಲ.ರಚನಾತ್ಮಕಟೀಕೆಗಳನ್ನು ಸ್ವಾಗತಿಸಬಹುದು,ಆದರೆ ನಿಂದನೆಯನ್ನುಒಪ್ಪಲಾಗದು.ಇದರಿಂದ ನಿಮಗೆಸಿಗುವ ಲಾಭವಾದರೂ ಏನು?ಎಂದು ತರಾಟೆಗೆತೆಗೆದುಕೊಂಡಿತು.
ಪೋಸ್ಟ್‌ನಿಂದಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲಎಂಬ ವಾದವನ್ನು ತಳ್ಳಿಹಾಕಿದಕೋರ್ಟ್, ಕೇವಲಘಟನೆಯ ನಂತರದ ಪರಿಣಾಮಗಳಷ್ಟೇಮುಖ್ಯವಾಗುವುದಿಲ್ಲ.ಸಾರ್ವಜನಿಕರಲ್ಲಿವೈಷಮ್ಯ ಅಥವಾ ಅಶಾಂತಿ ಸೃಷ್ಟಿಸುವಉದ್ದೇಶ ಅಥವಾ ಸಂಭವನೀಯತೆ ಕಂಡುಬಂದರೂಅದು ಅಪರಾಧದ ವ್ಯಾಪ್ತಿಗೆ ಬರುತ್ತದೆಎಂದು ಸ್ಪಷ್ಟಪಡಿಸಿತು.
ಧರ್ಮಸ್ಥಳಗ್ರಾಮದ ನಿವಾಸಿ ಜಿ.ಸುಬ್ರಹ್ಮಣ್ಯಪ್ರಸಾದ್ ಎಂಬುವರು 2026ರಏಪ್ರಿಲ್ 14ರಂದುಧರ್ಮಸ್ಥಳ ಪೊಲೀಸ್ ಠಾಣೆಗೆ ದೂರುನೀಡಿದ್ದರು.ಗಿರೀಶ್ ಮಟ್ಟಣ್ಣವರ್ಯಾವುದೇ ಆಧಾರಗಳಿಲ್ಲದೆ ಧರ್ಮಸ್ಥಳದಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಅವರ ವಿರುದ್ಧ ಇನ್‌ಸ್ಟಾಗ್ರಾಮ್‌ನಲ್ಲಿಉದ್ದೇಶಪೂರ್ವಕವಾಗಿ ಮಾನಹಾನಿಕರಹಾಗೂ ಅಶ್ಲೀಲ ಪೋಸ್ಟ್‌ಗಳನ್ನುಹಾಕಿದ್ದಾನೆ.ಈ ಪೋಸ್ಟ್‌ಗಳುವೀರೇಂದ್ರ ಹೆಗ್ಗಡೆ ಅವರ ಬೆಂಬಲಿಗರುಹಾಗೂ ವಿರೋಧಿಗಳ ನಡುವೆ ದ್ವೇಷಮತ್ತು ಸಾಮಾಜಿಕ ವೈಮನಸ್ಸುಮೂಡಿಸುವ ಒಳಸಂಚನ್ನು ಹೊಂದಿವೆಎಂದು ಆರೋಪಿಸಲಾಗಿತ್ತು.
ಪ್ರಸ್ತುತದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲೂಸಾಮಾಜಿಕ ಜಾಲತಾಣದ ಖಾತೆಗಳಿರುವುದುಸಾಮಾನ್ಯವಾಗಿದೆ.ಅದನ್ನು ಸಮಯಕಳೆಯುವ (ಟೈಂಪಾಸ್) ಮಾಧ್ಯಮವಾಗಿಬಳಸಿಕೊಳ್ಳುವುದರಲ್ಲಿ ತಪ್ಪಿಲ್ಲ.ಆದರೆ,ಈ ವೇದಿಕೆಗಳಮೂಲಕ ಸಮಾಜದಲ್ಲಿ ಹರಡುತ್ತಿರುವಸುಳ್ಳು ಸುದ್ದಿಗಳ ಪ್ರಮಾಣ ಆತಂಕಕಾರಿಯಾಗಿದೆ ಎಂದು ನ್ಯಾಯಪೀಠವಿಚಾರಣೆ ವೇಳೆ ಕಳವಳ ವ್ಯಕ್ತಪಡಿಸಿದೆ.