- ಗಾಯಾಳುವನ್ನು ಆಸ್ಪತೆಗ್ರೆ ಸೇರಿಸಿ, ನಂತರ Gಟನೆ ಬಗ್ಗೆ ಗೊತ್ತೆ ಇಲ್ಲ ಎಂದಿದ್ದ
ಬೆಂಗಳೂರು: ರಸ್ತೆ ಅಪಘಾತದ ನಂತರ ಗಾಯಾಳುವನ್ನು ಸ್ವತಃ ಆಸ್ಪತ್ರೆಗೆ ಸೇರಿಸಿ, ಆನಂತರ ನ್ಯಾಯಾಲಯದಲ್ಲಿ ಅಪಘಾತದ ಬಗ್ಗೆ ತನಗೆ ತಿಳಿದೇ ಇಲ್ಲ ಎಂದು ಸುಳ್ಳು ವಾದ ಮಂಡಿಸಿದ ಟೆಂಪೋ ಚಾಲಕನಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಶಿೆ ಪ್ರಶ್ನಿಸಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ನಿವಾಸಿ ಬಿ. ನಾಗರಾಜು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠವು ವಜಾಗೊಳಿಸಿದೆ. ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಜೀವಹಾನಿಯಾಗಿದ್ದು, ಶಿಕ್ಷೆ ಕಡಿತಗೊಳಿಸಲು ಯಾವುದೇ ಸಕಾರಣಗಳಿಲ್ಲ ಎಂದು ಹೇಳಿದೆ.
2009ರ ಮೇ 6ರಂದು ಸಂಜೆ 5 ಗಂಟೆ ಸುಮಾರಿಗೆ ಮೈಸೂರಿನ ರಾಜೀವನಗರದ ಗಣಪತಿ ದೇವಸ್ಥಾನದ ಬಳಿಯ ರಿಂಗ್ ರೋಡ್ನಲ್ಲಿ ಟೆಂಪೋ ಡಿಕ್ಕಿಯಾದ ಪರಿಣಾಮ ಸಿದ್ದಪ್ಪ ಎಂಬ ಸೈಕಲ್ ಸವಾರ ಗಂಭೀರ ಗಾಯಗೊಂಡಿದ್ದರು. ಗಾಯಾಳುವನ್ನು ಟೆಂಪೋ ಚಾಲಕ ತಾನೇ ತನ್ನ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ್ದ. ಆದರೆ, ಚಿಕಿತ್ಸೆ ಲಕಾರಿಯಾಗದೆ ಗಾಯಾಳು ಮೃತಪಟ್ಟಿದ್ದರು. ಈ ಸಂಬಂಧ ಮೈಸೂರಿನ ದೇವರಾಜ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣಾ ನ್ಯಾಯಾಲಯವು ಚಾಲಕನ ರ್ನಿಲಕ್ಷ$್ಯದ ಕಾರಣ ಅಪಘಾತ ಸಂಭವಿಸಿದೆ ಎಂದು ಘೋಷಿಸಿ 6 ತಿಂಗಳ ಜೈಲು ಶಿೆಯನ್ನು ವಿಧಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಚಾಲಕನ ದ್ವಂದ್ವಕ್ಕೆ ಅಸಮಾಧಾನ:
ಗಾಯಾಳುವನ್ನು ತನ್ನದೇ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ ಚಾಲಕನು, ನ್ಯಾಯಾಲಯದ ಮುಂದೆ ತನಗೂ ಈ ಅಪಘಾತಕ್ಕೂ ಸಂಬಂಧವೇ ಇಲ್ಲ ಎಂಬಂತೆ ಸಂಪೂರ್ಣವಾಗಿ ಅಪಘಾತವನ್ನೇ ನಿರಾಕರಿಸಿರುವುದು ಆಶ್ಚರ್ಯಕರವಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ. ಅಪಘಾತದ ದೃಶ್ಯವನ್ನು ಕಂಡ ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸಲಾಗಿದೆ. ಅಪಘಾತ ನಡೆದು ದಶಕಕ್ಕೂ ಹೆಚ್ಚು ಕಾಲ ಕಳೆದಿರುವುದರಿಂದ ಜೈಲು ಶಿಕ್ಷೆಯನ್ನು ರದ್ದುಪಡಿಸಿ, ಕೇವಲ ದಂಡದ ಮೊತ್ತವನ್ನು ಮಾತ್ರ ಹೆಚ್ಚಿಸಬೇಕು ಎಂದು ಆರೋಪಿ ಪರ ವಕೀಲರ ವಾದವನ್ನೂ ನ್ಯಾಯಪೀಠ ನಿರಾಕರಿಸಿದೆ.