High court 
ರಾಜ್ಯ

ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ಸಲ್ಲಿಸಿರುವ ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್​, ಬಿಜೆಪಿ ದಾಖಲಿಸಿರುವ ಪ್ರಕರಣ| High court

ಬೆಂಗಳೂರು: 

ನಿಕಟಪೂರ್ವ (2023) ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ದರ ಪಟ್ಟಿ ಎಂದು ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ವಿರುದ್ಧ ದಾಖಲಾಗಿರುವ ಮಾನಹಾನಿ ಪ್ರಕರಣ ರದ್ದುಕೋರಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್​, ಆದೇಶ ಕಾಯ್ದಿರಿಸಿದೆ.

ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಿದ ವಿಚಾರಣಾ ನ್ಯಾಯಾಲಯದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಆದೇಶ ಕಾಯ್ದಿರಿಸಿದೆ. ಈ ಜಾಹೀರಾತುಗಳನ್ನು ಹಂಚಿಕೊಂಡ ಆರೋಪದಲ್ಲಿ ರಾಹುಲ್​ ಗಾಂಧಿ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ನ್ಯಾಯಮೂರ್ತಿ ಎಸ್​. ಸುನೀಲ್​ ದತ್​ ಯಾದವ್​ ಅವರಿದ್ದ ಏಕಸದಸ್ಯ ನ್ಯಾಯಪೀಠ, ಫೆ.17ರಂದು ರದ್ದುಪಡಿಸಿತ್ತು.
ಬಿಜೆಪಿ ಪರ ವಾದಿಸಿದ್ದ ವಾದಿಸಿದ್ದ ವಕೀಲರು, ಭ್ರಷ್ಟಾಚಾರದ ಸುಳ್ಳು ಆರೋಪಗಳಿಂದ ಬಿಜೆಪಿಗೆ ಸುಮಾರು 40 ವಿಧಾನಸಭೆ ಸ್ಥಾನಗಳು ನಷ್ಟವಾಗಿವೆ. ಶೇಕಡವಾರು ಮತ ಪ್ರಮಾಣದಲ್ಲಿ ಕೂಡ ಇಳಿಕೆ ಕಂಡುಬಂದಿದೆ. ಆದ್ದರಿಂದ ಪ್ರಕರಣ ರದ್ದುಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.

ಅರ್ಜಿದಾರರ ಪರ ವಾದಿಸಿರುವ ವಕೀಲರು, ರಾಹುಲ್​ ಗಾಂಧಿ ವಿರುದ್ಧದ ಪ್ರಕರಣ ರದ್ದುಮಾಡಿರುವುದನ್ನು ಉಲ್ಲೇಖಿಸಿದ್ದಾರೆ. ದೂರು ದಾಖಲಿಸುವ ಮುನ್ನ ಬಿಜೆಪಿಯ ರಾಷ್ಟ್ರೀಯ ಟಕದಿಂದ ರಾಜ್ಯ ಟಕವು ಅನುಮತಿ ಪಡೆದಿಲ್ಲ ಎಂದು ವಾದಿಸಿ ಪ್ರಕರಣ ರದ್ದುಕೋರಿದ್ದಾರೆ.

⚠️

ಪ್ರಕರಣದ ಹಿನ್ನಲೆ

ಚುನಾವಣೆಗೂ ಮೊದಲು ಕಾಂಗ್ರೆಸ್​ ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತು ಸಂಪೂರ್ಣ ಸುಳ್ಳು, ಮಾನಹಾನಿಕರ ಮತ್ತು ಕಾಲ್ಪನಿಕ ಎಂದು ಬಿಜೆಪಿ ಆರೋಪಿತ್ತು. ಬಿಜೆಪಿಯ ಡಬಲ್​ ಇಂಜಿನ್​ ಸರ್ಕಾರ ಎಂಬ ಘೋಷಣೆ ಬದಲಿಗೆ ಟ್ರಬಲ್​ ಇಂಜಿನ್​ ಸರ್ಕಾರ ಎಂದು ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಚುನಾವಣೆಗೆ ಮೂರು ದಿನ ಬಾಕಿ ಇರುವಾಗ ಜಾಹೀರಾತು ನೀಡಿ ಪಕ್ಷಕ್ಕೆ ನಷ್ಟ ಉಂಟುಮಾಡಿದ್ದಾರೆ ಎಂದು ಕೆಪಿಸಿಸಿ, ಡಿ.ಕೆ. ಶಿವಕುಮಾರ್​, ಸಿದ್ಧರಾಮಯ್ಯ ಮತ್ತು ರಾಹುಲ್​ ಗಾಂಧಿ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿತ್ತು.