High court 
ರಾಜ್ಯ

ಪೊಲೀಸರಿಗೇ ನ್ಯಾಯ ಸಿಕ್ಕಿಲ್ಲ! ಇನ್ನು ಸಾರ್ವಜನಿಕರಿಗೆ ಸಿಗುತ್ತದೆ ಎಂದು ಹೇಗೆ ನಂಬುವುದು? High court

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ತರಬೇತಿ ನೀಡಲು ಗೃಹ ಇಲಾಖೆಗೆ ನಿರ್ದೇಶನ.
ಶ್ರವಣ್​ ನೀರಬಿದಿರೆ ಬೆಂಗಳೂರು
ಪೊಲೀಸ್​ ಅಧಿಕಾರಿಗಳ ಮೇಲೆ ಠಾಣೆಯೊಳಗಡೆಯೇ ಹಲ್ಲೆ ನಡೆದಿದ್ದ ಪ್ರಕರಣವೊಂದರಲ್ಲಿ ಬೇಜವಾಬ್ದಾರಿಯುತವಾಗಿ ತನಿಖೆ ನಡೆಸಿ ಆರೋಪಿಯ ಖುಲಾಸೆಗೆ ಕಾರಣವಾಗಿರುವ ಪೊಲೀಸರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್​, ತನಿಖಾಧಿಕಾರಿಗಳಿಗೆ ತರಬೇತಿ ನೀಡಲು ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಗೃಹ ಇಲಾಖೆಗೆ ನಿರ್ದೇಶನ ನೀಡಿದೆ.
ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಾಮೂರ್ತಿಗಳಾದ ಎಚ್​.ಪಿ. ಸಂದೇಶ್​ ಮತ್ತು ಟಿ. ವೆಂಕಟೇಶ್​ ನಾಯ್ಕ್​ ಅವರಿದ್ದ ವಿಭಾಗೀಯ ನ್ಯಾಯಪೀಠವು ಈ ಆದೇಶ ನೀಡಿದೆ. ಘಟನೆಯು ಸಾರ್ವಜನಿಕ ಸ್ಥಳ ಮತ್ತು ಪೊಲೀಸ್​ ಠಾಣೆಯ ಒಳಗಡೆ ನಡೆದಿದ್ದರೂ, ಪೊಲೀಸರು 'ಹೋಪ್​ಲೆಸ್​' ತನಿಖೆ ನಡೆಸಿ, ಆರೋಪಿಯ ಖುಲಾಸೆಗೆ ಕಾರಣವಾಗಿದ್ದಾರೆ ಎಂದು ನ್ಯಾಯಾಲಯ ಅರ್ಜಿ ವಜಾಗೊಳಿಸಿದೆ.
ತಮ್ಮದೇ ಸಹೋದ್ಯೋಗಿಗಳಿಗೆ ನ್ಯಾಯ ಕೊಡಿಸಲಾಗದ ಪೊಲೀಸರು, ಸಾರ್ವಜನಿಕರಿಗೆ ನ್ಯಾಯ ಒದಗಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ನ್ಯಾಯಪೀಠ, ಇದು ಪೊಲೀಸ್​ ಇಲಾಖೆಗೆ ಅವಮಾನ ಉಂಟುಮಾಡುವ ವಿಷಯವಾಗಿದೆ ಎಂದು ಟೀಕಿಸಿದೆ.
ಪೊಲೀಸ್​ ಠಾಣೆಯ ಒಳಗಡೆಯೇ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ. ಆದರೆ, ಹಲ್ಲೆಗೆ ಬಳಸಿರುವ ಆಯುಧ, ಗಾಯಗೊಂಡವರ ರಕ್ತಸಿಕ್ತ ಬಟ್ಟೆಗಳು ಮತ್ತು ನೆಲದ ಮೇಲಿನ ರಕ್ತದ ಕಲೆಗಳ ಸಾಕ್ಷ್ಯಗಳನ್ನು ತನಿಖಾಧಿಕಾರಿ ಸಂಗ್ರಹಿಸಿಲ್ಲ. ಗಾಯಗೊಂಡ ಸಾಕ್ಷಿಗಳಾದ ಪೊಲೀಸರ ಹೇಳಿಕೆಗಳಲ್ಲಿ ವಿರೋಧಾಭಾಸವಿದ್ದು, ನಂಬರ್ಲಹವಾಗಿಲ್ಲ. ಅವರ ಹೇಳಿಕೆಗಳನ್ನು ಬೆಂಬಲಿಸಲು ಯಾವುದೇ ಪೂರಕ ಪುರಾವೆಗಳು ಲಭ್ಯವಿಲ್ಲ. ಆರೋಪಿಯ ಸರಿಯಾದ ವಿಳಾಸವನ್ನು ಸಂಗ್ರಹಿಸಲೂ ವಿಲವಾಗಿದೆ. ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಸಾಕ್ಷ್ಯಗಳನ್ನು ಸಂಗ್ರಹಿಸಿಲ್ಲ. ಇದು ತನಿಖಾ ವೈಲ್ಯಕ್ಕೆ ಸ್ಪಷ್ಟ ನಿರ್ದೇಶನ ಎಂದು ಕಟುವಾಗಿ ನುಡಿದಿದೆ.

ಏನಿದು ಪ್ರಕರಣ?

2021ರ ಅ.29ರ ಮಧ್ಯಾಹ್ನ 3.15ರ ಸುಮಾರಿಗೆ ಯಶವಂತಪುರ ಹೂವಿನ ಮಾರುಕಟ್ಟೆಯಲ್ಲಿ ಗಸ್ತು ತಿರುಗುತ್ತಿದ್ದ ಮಹಿಳಾ ಹೋಮ್​ಗಾರ್ಡ್​ಗಳ ಮೇಲೆ ಉಮೇಶ್​ ಎಂಬಾತ ಹಲ್ಲೆ ನಡೆಸಿದ್ದ. ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಆತನನ್ನು ತಡೆಯಲು ಹೋದಾಗ, ಚಾಕು ಮತ್ತು ಕಬ್ಬಿಣದ ರಾಡ್​ನಿಂದ ದಾಳಿ ಮಾಡಿ ಮಹಿಳಾ ಸಿಬ್ಬಂದಿ ತುಟಿಗೆ ಗಾಯ ಉಂಟುಮಾಡಿದ್ದಲ್ಲದೆ, ಮತ್ತೊಬ್ಬ ಸಿಬ್ಬಂದಿಯ ಬೆನ್ನು ಮತ್ತು ಕೈಗೆ ಹೊಡೆದಿದ್ದ. 
ಘಟನೆಯ ನಂತರ ಆರೋಪಿಯನ್ನು ಬಂಧಿಸಿ ಆರ್​ಎಂಸಿ ಯಾರ್ಡ್​ ಪೊಲೀಸ್​ ಠಾಣೆಗೆ ಕರೆ ತರಲಾಗಿತ್ತು. ಠಾಣೆ ಒಳಗೂ ಗಲಾಟೆ ಮಾಡಿದ್ದ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದ. ಈ ಹಿನ್ನಲೆಯಲ್ಲಿ ಆರೋಪಿ ವಿರುದ್ಧ ಕೊಲೆ ಯತ್ನ, ಸರ್ಕಾರಿ ಕೆಲಸಕ್ಕೆ ಅಡ್ಡಿ ಮತ್ತು ಮಹಿಳೆಯರ ನತೆಗೆ ಧಕ್ಕೆ ತಂದ ಗಂಭಿರ ಆರೋಪಗಳಡಿ ಪ್ರಕರಣ ದಾಖಲಿಸಿ ಚಾರ್ಜ್​ಶೀಟ್​ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ತನಿಖಾ ಲೋಪವನ್ನು ಎತ್ತಿಹಿಡಿದು ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪೊಲೀಸರು ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.

ಎರಡು ತಿಂಗಳಿಗೊಮ್ಮೆ ತರಬೇತಿ ನೀಡಿ

ರಾಜ್ಯದಲ್ಲಿ ತನಿಖಾಧಿಕಾರಿಗಳ ವೈಲ್ಯದಿಂದಾಗಿ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್​, ರಾಜ್ಯ ಪೊಲೀಸ್​ ಮಹಾನಿರ್ದೇಶಕರಿಗೆ ಖಡಕ್​ ಸೂಚನೆ ನೀಡಿದೆ. ತನಿಖಾಧಿಕಾರಿಗಳಿಗೆ ತನಿಖಾ ತಂತ್ರಗಳು ಮತ್ತು ಸಾಕ್ಷ್ಯ ಸಂಗ್ರಹಣೆ ಬಗ್ಗೆ ಪ್ರತಿ ಎರಡು ತಿಂಗಳಿಗೊಮ್ಮೆಯಾದರೂ ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ನಿಯಮಿತವಾಗಿ ತರಬೇತಿ ಆಯೋಜಿಸಬೇಕು ಎಂದು ಆದೇಶಿಸಿದೆ.

ಶಿಸ್ತುಕ್ರಮಕ್ಕೆ ಆದೇಶ
ತರಬೇತಿ ಕಾರ್ಯಕ್ರಮಗಳನ್ನು ಗೃಹ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್​ ಮುಖ್ಯಸ್ಥರ ಸಮನ್ವಯದೊಂದಿಗೆ ನಿರ್ವಹಿಸಬೇಕು. ಅಲ್ಲದೆ, ಈ ಪ್ರಕರಣದಲ್ಲಿ ಸರಿಯಾದ ತನಿಖೆ ನಡೆಸದ ಹಾಗೂ ಸಾಾಧಾರಗಳನ್ನು ಸಂಗ್ರಹಿಸದ ತನಿಖಾಧಿಕಾರಿಯ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಕೈಗೊಂಡ ಕ್ರಮಗಳು ಮತ್ತು ತರಬೇತಿ ಕಾರ್ಯಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಜೂ.8ರ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿದೆ.