ಬೆಂಗಳೂರು: ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವಿನ ಫೈಟ್ ದಿನೇದಿನೇ ತಾರಕಕ್ಕೇರಿದೆ. ಇದರ ನಡುವೆ ಕಾಂಗ್ರೆಸ್ ಹೈಕಮಾಂಡ್ ಇದೀಗ ಇಬ್ಬರ ನಾಯಕರಿಗೆ ಹೊಸ ಸಂದೇಶ ರವಾನಿಸಿದೆ.
ಹೌದು, ಇಬ್ಬರು ನಾಯಕರು ಮಾತನಾಡಿಕೊಂಡು ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚನೆ ನೀಡಿದೆ. ನಿಮ್ಮಿಬ್ಬರ ತೀರ್ಮಾನದ ಮೇಲೆ ನಾವು ಫೈನಲ್ ಮಾಡಲಿದ್ದೇವೆ ಎಂದು ಹೈಕಮಾಂಡ್ ತಿಳಿಸಿದೆ. ಈ ಹಿನ್ನಲೆ ಡಿಸಿಎಂ ಡಿಕೆ ಶಿವಕುಮಾರ್ಗೆ, ಸಿಎಂ ಸಿದ್ದರಾಮಯ್ಯ ಅವರು ಕೆರೆ ಮಾಡಿ ನಾಳೆ(ನ.29) ಬ್ರೇಕ್ಫಾಸ್ಟ್ಗೆ ಬರುವಂತೆ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದ ಬಳಿ ಮಾತನಾಡಿರುವ ಸಿಎಂ, ಹೈಕಮಾಂಡ್ನಿಂದ ನನಗೂ ಮತ್ತು ಡಿಕೆಗೂ ಕರೆ ಬಂದಿದೆ. ನಾಳೆ ಬ್ರೇಕ್ಫಾಸ್ಟ್ ಮೀಟಿಂಗ್ ಇದೆ. ಹೈಕಮಾಂಡ್ನವರು ಏನ್ ಹೇಳ್ತಾರೆ ನಾವು ಅದನ್ನು ಕೇಳುತ್ತೇವೆ. ನನ್ನ ನಿಲುವಿನಲ್ಲಿ ಯಾವುದೇ ಬದಲಾಣೆ ಇಲ್ಲ. ಈ ಬಗ್ಗೆ ನಾಳೆ ಚರ್ಚೆ ಮಾಡುತ್ತೇವೆ ಎಂದರು.
ಸಿಎಂ ನಿವಾಸದಲ್ಲಿ ಬ್ರೇಕ್ಫಾಸ್ಟ್
ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಶನಿವಾರ ಬೆಳಗ್ಗೆ 9.30ಕ್ಕೆ ಬ್ರೇಕ್ಫಾಸ್ಟ್ ಮೀಟಿಂಗ್ ನಡೆಯಲಿದೆ. ಸಿಎಂ ಸ್ಥಾನದ ಫೈಟ್ ಕೊನೆಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಇಬ್ಬರ ನಾಯಕರ ನಡುವಿನ ಸಭೆ ತೀವ್ರ ಕೂತುಹಲ ಮೂಡಿಸಿದೆ.