ಬಂಗಾರಪೇಟೆಯಲ್ಲಿ ಹೈಟೆಕ್ ಮಾದರಿ ಶಾಲೆ Hi-tech school
ಬಂಗಾರಪೇಟೆ: ನಗರದಲ್ಲಿ ಟಾಟಾ ಸಂಸ್ಥೆ ಸಹಯೋಗದಲ್ಲಿ ಹೈಟೆಕ್ ಮಾದರಿ ಸರ್ಕಾರಿ ಶಾಲೆ ನಿರ್ಮಾಣಕ್ಕೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸೋಮವಾರ ಭೂಮಿಪೂಜೆ ನೆರವೇರಿಸಿದರು.Hi-tech school
ಸಮಸ್ಯೆಗಳು ಎಷ್ಟೇ ಇದ್ದರೂ ಶಿಣದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬ ಉದ್ದೇಶದಿಂದ ಹೊಸ ಸರ್ಕಾರಿ ಶಾಲೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ಈ ಶಾಲೆಯನ್ನು 3.5 ಕೋಟಿ ವೆಚ್ಚದಲ್ಲಿ ಮಾದರಿ ಶಾಲೆಯನ್ನಾಗಿ ನಿರ್ಮಾಣ ಮಾಡಲಿದ್ದು, ಟಾಟಾ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ಸುಮಾರು 2.5 ಕೋಟಿ ರೂ. ಮತ್ತು ಸರ್ಕಾರದಿಂದ 1 ಕೋಟಿ ರೂ. ವೆಚ್ಚದಲ್ಲಿ ಈ ಶಾಲೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಫರ್ನಿಚರ್, ಸಿಸಿಟಿವಿ ಸೇರಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಬೆಲೆ ಬಾಳುವ ಈ ಜಾಗವನ್ನು ಮಕ್ಕಳ ಶೈಣಿಕ ಅಭಿವೃದ್ಧಿಗಾಗಿ ದಾನವಾಗಿ ನೀಡಿದ ಪುರಸಭೆ ಮಾಜಿ ಸದಸ್ಯ ಎಸ್.ವಿ.ಆರ್. ಮಣಿ ಹಾಗೂ ಅವರ ಕುಟುಂಬದ ಕೊಡುಗೆ ಸ್ಮರಣೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಶಾಲೆ ಹಿಂದಿನಿಂದ ಎಸ್.ವಿ.ಆರ್.ಶಾಲೆಯಾಗಿದ್ದು, ನಂತರ ಎನ್.ಟಿ.ಜಿ.ಎಂ. ಶಾಲೆಯಾಗಿ ಸರ್ಕಾರ ನಡೆಸುತ್ತಿದೆ. ಭಾರೀ ಮಳೆಯಿಂದ ಹಳೆಯ ಕಟ್ಟಡದ ಒಂದು ಭಾಗ ಕುಸಿದ ಹಿನ್ನೆಲೆ ಮಕ್ಕಳ ಸುರತೆಗಾಗಿ ಶಾಲೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ಈಗ ಕಟ್ಟಡದ ನಿರ್ಮಾಣ ಪ್ರಾರಂಭವಾಗಿದ್ದು, 8 ತಿಂಗಳೊಳಗೆ ಹೊಸ ಸರ್ಕಾರಿ ಶಾಲೆ ನಿರ್ಮಿಸಿ ಮಕ್ಕಳಿಗೆ ಸಮರ್ಪಿಸಲಾಗುತ್ತದೆ ಎಂದು ವಿವರಿಸಿದರು.
ಬಿ.ಆರ್.ಸಿ ನಾರಾಯಣಸ್ವಾಮಿ, ಇಸಿಒ ನಾರಾಯಣಸ್ವಾಮಿ, ಪೊಲೀಸ್ ಇನ್ಸ್ಪೆಕ್ಟರ್ ರವಿಕುಮಾರ್ ಇದ್ದರು.