ರಾಜ್ಯ

ಹಿರೋಡೇಶ್ವರ ಜಾತ್ರೋತ್ಸವ ಸಂಪನ್ನ

ಪ್ರಮುಖ ಮುಖ್ಯಾಂಶಗಳು

  • ಸಹೋದರಿ ಕರೆಗೆ ಓಡುವುದರೊಂದಿಗೆ
ಶಹಾಬಾದ್​: ಉತ್ತರ ಕರ್ನಾಟಕದ ಕುಕ್ಕೆ ಖ್ಯಾತಿಯ ಮಾಲಗತ್ತಿ ಗ್ರಾಮದಲ್ಲಿ ಶ್ರೀ ಹಿರೋಡೇಶ್ವರ ದೇವರ ಜಾತ್ರೋತ್ಸವ ಗುರುವಾರ ಸಂಜೆ ತನ್ನ ಸಹೋದರಿ ಕರೆಗೆ ಓಗೊಟ್ಟು ಭಕ್ತರನ್ನು ಬಿಟ್ಟು ಓಡಿ ಹೋಗುವುದರೊಂದಿಗೆ ಸಂಪನ್ನಗೊಂಡಿತು.
ಬೆಳಗ್ಗೆ ಪೊಲೀಸ್​ ಪಾಟೀಲರ ಮನೆಯಿಂದ ಪಲ್ಲಕ್ಕಿಯೊಂದಿಗೆ ದೇವರನ್ನು ಕಾಗಿಣಾ ನದಿಗೆ ಕೊಂಡೊಯ್ದು ಗಂಗಾಸ್ನಾನ ನೆರವೇರಿಸಲಾಯಿತು. ಬಳಿಕ ಆಗಮಿಸಿದ ಪಲ್ಲಕ್ಕಿಗೆ ಗ್ರಾಮಸ್ಥರು ನೀರು ಹಾಕಿ ಆರತಿ ಬೆಳಗಿ ಸ್ವಾಗತಿಸಿದರು. ಸಂಜೆವರೆಗೆ ಹನುಮಾನ ಮಂದಿರದಲ್ಲಿ ನೈವೇದ್ಯ, ಹಣ್ಣು&ಕಾಯಿ ಸಮರ್ಪಣೆ ಮಾಡಿ ದರ್ಶನ ಪಡೆದರು. ಸಂಜೆ ಡೊಳ್ಳು ಕುಣಿತ, ತಮಟೆ ವಾದ್ಯ, ಪಟ್ಟೆ ಮತ್ತು ಬಾರಕೋಲು ತಿರುಗಿಸುವ ಕಲೆ ಪ್ರದರ್ಶನದೊಂದಿಗೆ ಭವ್ಯ ಮೆರವಣಿಗೆ ನಡೆಯಿತು.
ಪ್ರತಿತಿಯಂತೆ ಸೂರ್ಯಾಸ್ತ ವೇಳೆ 2.5 ಕಿಮೀ ದೂರದ ದೇವಸ್ಥಾನದಲ್ಲಿರುವ ತನ್ನ ಸಹೋದರಿ ಬೀಬೀ ಫಾತಿಮಾ ಕರೆಯಂತೆ ದೇವರ ಪಲ್ಲಕ್ಕಿಯನ್ನು ಹೊತ್ತು ಭಕ್ತರು ಓಡಿ ಹೋಗುವುದರೊಂದಿಗೆ ಜಾತ್ರೆ ತೆರೆ ಕಂಡಿತು.
ಶ್ರೀ ಡಾ.ಚನ್ನಬಸವ ಶರಣರು, ಟ್ರಸ್ಟ್​ ಅಧ್ಯಕ್ಷ ಪ್ರಕಾಶ ಜೈನ್​, ಅಪ್ಪಾರಾವ ಮಾಲಿಪಾಟೀಲ, ಸತ್ಯನಗೌಡ ಪೊಲೀಸ್​ ಪಾಟೀಲ, ವಜ್ರಕುಮಾರ ಪಾಟೀಲ, ಮಲ್ಲಣ್ಣ ಸಣಮೋ, ಅರ್ಚಕರಾದ ಭೀಮು ಚನ್ನಗುಂಡ, ಬಾಳಪ್ಪ ಪೂಜಾರಿ, ಎಸ್​.ಎಸ್​. ದಿವಾಕರ, ಶಾಂತಪ್ಪ ಸಾಲೊಳ್ಳಿ, ಬಾಲಕೃಷ್ಣ ಜೋಶಿ, ಈಶ್ವರ ಯಾದಗಿರಿ, ಮನೋಹರ ರಾವೂರ, ಶಾಂತನಾಥ ಜೈನ್​, ಮಲ್ಲು ಅಲ್ಲೂರ, ಮಲ್ಲಿಕಾರ್ಜುನ ಕುಲಕುಂದಿ, ಮಲ್ಲಿಕಾರ್ಜುನ ಇಟಗಿ, ದೇವೆಂದ್ರಪ್ಪ ಪಡಶೆಟ್ಟಿ, ಈಶ್ವರ ಮುಗುಳನಾಗಾವ, ಶಿವಾನಂದ ಅಲ್ಲೂರ, ಮಲ್ಲಿಕಾರ್ಜುನ ಕುಲಕುಂದಿ, ಮಲ್ಲಿಕಾರ್ಜುನ ಸಣಮೋ, ಸೂರ್ಯಕಾಂತ ಕಟ್ಟಿ, ರಾಜು ಜೀವಣಗಿ ಇತರರಿದ್ದರು.