ಬೈಲಹೊಂಗಲದಲ್ಲಿ ದುರ್ಗಾಪರಮೇಶ್ವರಿ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಬೈಲಹೊಂಗಲ: ಜಾತ್ರಾ ಮಹೋತ್ಸವ ಸಂಸತಿ, ಸಂಪ್ರದಾಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಉಳಿಸುತ್ತವೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ತಾಲೂಕಿನ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ನಾಲ್ಕನೇ ದಿನದ ಸಾಂಸತಿಕ ವೈಭವ, ಧರ್ಮಸಭೆಯಲ್ಲಿ ಮಾತನಾಡಿದರು.
ಕಾಶಿ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿದ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಮೌಲ್ಯಗಳ ಜತೆಗೆ ಶಿಕ್ಷಣ ಮತ್ತು ಸೇವಾ ಚಟುವಟಿಕೆಗಳನ್ನು ಬೆಳೆಸಬೇಕಾದ ಅಗತ್ಯವಿದೆ. ಆರಾದ್ರಿಮಠ ಬಡಮಕ್ಕಳ ಶಿಕ್ಷಣಕ್ಕಾಗಿ ಗುರುಕುಲ ವ್ಯವಸ್ಥೆ ಆರಂಭಿಸಿರುವುದು ಶ್ಲಾನೀಯ ಎಂದರು.
ದುರ್ಗಾ ಮಾತಾ ಪರಮೇಶ್ವರಿ ಮಹಾರಥೋತ್ಸವವಕ್ಕೆ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ವಿವಿಧ ಕಲಾತಂಡಗಳು ಭಾಗವಹಿಸಿ ಮೆರುಗು ತಂದವು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಳಗದ ಅಧ್ಯ ಸುರೇಶ ಗೋಕಾಕ ಅವರಿಗೆ ಶಾಂಭವಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾರಿಕಾ ಮಂಜುನಾಥ, ಖ್ಯಾತ ನಿರ್ದೇಶಕ ತರುಣ ಸುಧಿ-ರ್&ಸೋನಲ್ ದಂಪತಿ ಮಾತನಾಡಿದರು. ಶಾಸಕ ಬಾಬಾಸಾಹೇಬ ಪಾಟೀಲ, ಶಂಕರ ಮಾಡಲಗಿ, ರಾಜು ಕುಡಸೋಮಣ್ಣವರ, ಚೂನಪ್ಪ ಪೂಜೇರಿ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಶಿವಾನಂದ ಬಡ್ಡಿಮನಿ, ಯುವ ಮುಖಂಡ ಸನತ್ ಜಾರಕಿಹೊಳಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತೇಶ ಶಾಸ್ತ್ರಿ ಆರಾದ್ರಿಮಠ, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ, ದಿಲೀಪ ಕುರಂದವಾಡಿ, ದೀಪಕ್ ಗುಡಗನಟ್ಟಿ, ಮುಕ್ತಾರ ಪಠಾನ್, ಮಹಾಂತೇಶ ತುರಮರಿ, ಜಗದೀಶ ಗೋಕಾಕ, ವಿಠ್ಠಲ ಕಡಕೋಳ, ಶಿವರಾಜ ಪಟ್ಟಣಶೆಟ್ಟಿ, ಬಿ.ಬಿ.ಬೋಗೂರ, ಸುನಿಲ ವರ್ಣೇಕರ ಇತರರಿದ್ದರು.