ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಬಿ.ಸುರೇಶ್​ಬಾಬು, ತಾಲೂಕು ಅಧ್ಯಕ್ಷ ಆರ್​.ರಾಮಚಂದ್ರಯ್ಯ, ಜಿಪಂ ಮಾಜಿ ಸದಸ್ಯೆ ಮಂಜಮ್ಮ, ಲೋಹಿತಾಬಾಯಿ ಇದ್ದರು.  
ರಾಜ್ಯ

ಕೆರೆಗಳಿಗೆ ಹರಿಯಲಿದೆ ಹೇಮೆ ನೀರು

ಹುಳಿಯಾರು :ಹೇಮಾವತಿ ನೀರಿಗಾಗಿ ತಾಲೂಕಿನ ರೈತರು, ಸಮಾಜ ಸೇವಕರು, ಹೋರಾಟಗಾರರು ಸೇರಿ ಯಾರೊಬ್ಬರು ಕೂಡ ಆತಂಕ ಪಡುವ ಅಗತ್ಯವಿಲ್ಲ. ನವಿಲೆ ಕೆರೆಗೆ ನೀರು ಹರಿಸುವ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ನೀರು ಹರಿಸಲು ಬದ್ಧರಾಗಿದ್ದೇವೆ ಎಂದು ಶಾಸಕ ಸಿ.ವಿ. ಸುರೇಶ್​ ಬಾಬು ಭರವಸೆ ನೀಡಿದರು.
ಹೋಬಳಿಯ ಜಿಎಂಆರ್​ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2013 ರಿಂದಲೇ ಹೇಮಾವತಿ ನಾಲೆಯ ಮೂಲಕ ತಾಲೂಕಿನ ಹಲವಾರು ಕೆರೆಗಳಿಗೆ ನೀರು ಹರಿಸುವ ಯೋಜನೆ ಜಾರಿಯಲ್ಲಿದ್ದು, ಹುಳಿಯಾರು ಭಾಗದ ಕೆರೆಗಳಿಗೆ ಈಗಾಗಲೇ ನೀರು ತಲುಪಿಸುವ ಕೆಲಸ ನಡೆಯುತ್ತಿದೆ.
ದಬ್ಬೇಘಟ್ಟದ ಮೂಲಕ ನವಿಲೆ ಕೆರೆಗೆ ನೀರು ತರುವ ಯೋಜನೆಯು ತ್ವರಿತಗತಿಯಲ್ಲಿ ಸಾಗುತ್ತಿದ್ದು, ಶೇ.99 ಕಾಮಗಾರಿ ಪೂರ್ಣಗೊಂಡಿದೆ. ಹಿಂದೆ ಕೆರೆಯ ಒಂದು ಭಾಗದಲ್ಲಿ ಮಣ್ಣು ಕುಸಿದಿದ್ದರಿಂದ ಕೆಲಸದಲ್ಲಿ ಸ್ವಲ್ಪ ವಿಳಂಬವಾಗಿತ್ತು. ಪ್ರಸ್ತುತ ಕೇವಲ 100 ಮೀಟರ್​ ಕೆಲಸ ಮಾತ್ರ ಬಾಕಿ ಇದ್ದು, ಅದನ್ನು ಮುಂದಿನ ಒಂದು ವಾರದೊಳಗೆ ಪೂರ್ಣಗೊಳಿಸಲಾಗುವುದು ಎಂದರು.
ತಾಪಂ ಮಾಜಿ ಸದಸ್ಯೆ ಚೇತನ ಗಂಗಾಧರ್​, ತಾಲೂಕು ಮಹಿಳಾ ಸಂಘದ ಅಧ್ಯಕ್ಷೆ ಹೇಮಕ್ಕ, ಹುಳಿಯಾರು ಹೋಬಳಿ ಜೆಡಿಎಸ್​ ಅಧ್ಯಕ್ಷ ರಾಘವೇಂದ್ರ, ಜಿಲ್ಲಾ ಯುವ ಜನತಾದಳದ ಉಪಾಧ್ಯಕ್ಷ ಗೌಡಿ, ಕೇಶವಪುರ ಕಿರಣ್​, ಪಪಂ ಮಾಜಿ ಸದಸ್ಯ ರಿಯಾಜ್​, ಪುರಸಭೆ ಸದಸ್ಯರಾದ ರಾಜಶೇಖರ್​, ಮಲ್ಲಿಕಾರ್ಜುನ್​, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್​ ಇದ್ದರು.