ಔರಾದ್ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಜ್ಯ ಗಡಿ ಅಪರಾಧ ಸಮನ್ವಯ ಸಭೆಯಲ್ಲಿ ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ, ಹುಮನಾಬಾದ್ ಡಿವೈಎಸ್ಪಿ ಮಡೋಳಪ್ಪ, ಗಜಾನನ ಬಲಹತ್ವಂಡೆ, ವಿಶಾಲ ಧೂಮೆ, ಕಿರಣ ಪೋಪಲಘಾಟ, ವೆಂಕಟ ರೆಡ್ಡಿ ಇದ್ದರು.
- ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಅನಿಸಿಕೆ
- ಔರಾದ್ನಲ್ಲಿ ಅಂತಾರಾಜ್ಯ ಗಡಿ ಅಪರಾಧ ಸಮನ್ವಯ ಸಭೆ
ಔರಾದ್: ಗಡಿ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳ ನಿಯಂತ್ರಣ ಮತ್ತು ಗಡಿ ಭದ್ರತೆಯನ್ನು ಬಲಪಡಿಸಲು ನೆರೆಯ ರಾಜ್ಯಗಳೊಂದಿಗೆ ಸಮನ್ವಯ ಸಭೆ ನೆರವಾಗುತ್ತದೆ ಎಂದು ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಜ್ಯ ಗಡಿ ಅಪರಾಧ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಕಳ್ಳಸಾಗಣೆ, ಕುಖ್ಯಾತ ಅಪರಾಧಿಗಳ ಪತ್ತೆ ಅಂತಾರಾಜ್ಯ ಪೊಲೀಸ್ ಅಧಿಕಾರಿಗಳು ಕೈಜೋಡಿಸಿದರೆ ಪ್ರಕರಣಗಳನ್ನು ಬೇಧಿಸಲು ಸಾಧ್ಯವಾಗುತ್ತದೆ ಎಂದರು.
ಅಪರಾಧಿಗಳ ಮಾಹಿತಿ ವಿನಿಮಯ, ಗಡಿ ಭದ್ರತೆ ಮತ್ತು ಗಸ್ತು, ಕಳ್ಳಸಾಗಾಣಿಕೆ ತಡೆಯುವುದು, ಅಪರಾಧಗಳ ನಿಯಂತ್ರಣ, ಗಡಿ ಭಾಗದ ಪೊಲೀಸ್ ಠಾಣೆಗಳ ನಡುವೆ ಉತ್ತಮ ಸಮನ್ವಯತೆ ಸಾಧಿಸುವುದು ಮತ್ತು ತನಿಖಾ ಪ್ರಕ್ರಿಯೆಯನ್ನು ಸುಲಭಗೊಳಿಸುವುದು, ಅಪರಾಧಿಗಳ ಪತ್ತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಿದರು.
ಹುಮನಾಬಾದ್ ಡಿವೈಎಸ್ಪಿ ಮಡೋಳಪ್ಪ, ಮಹಾರಾಷ್ಟ್ರದ ಉದಗೀರ ಪೊಲೀಸ್ ಇನ್ಸ್ಪೆಕ್ಟರ್ ಜಗಾನಂದ ಬಟವಾಡೆ, ನಿಲಂಗಾ ಡಿವೈಎಸ್ಪಿ ವಿಶಾಲ ಎಸ್.ಧೂಮೆ, ದೇಗಲೂರ ಡಿವೈಎಸ್ಪಿ ಕಿರಣ ಪೋಪುಲಘಾಟ್, ತೆಲಂಗಾಣದ ನಾರಾಯಣಖೇಡ ಡಿವೈಎಸ್ಪಿ ಜೆ. ವೆಂಕಟರಡ್ಡಿ ಮಾತನಾಡಿ, ಭವಿಷ್ಯದಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಇನ್ನಷ್ಟು ಪರಿಣಾಮಕಾರಿ ಸಮನ್ವಯ ವ್ಯವಸ್ಥೆ ರೂಪಿಸುವ ಕುರಿತು ಸಲಹೆಗಳನ್ನು ನೀಡಿದರು.
ಸಿಪಿಐ ರುವೀರಸಿಂಗ್ ಠಾಕೂರ್, ಕಮಲನಗರ ಸಿಪಿಐ ಶ್ರೀಕಾಂತ ಅಲ್ಲಾಪುರೆ, ಮೇಹೆಕರ್ ಪಿಎಸ್ಐ ಸುದರ್ಶನ ರಡ್ಡಿ, ಸಂತಪುರ ಪಿಎಸ್ಐ ದಿನೇಶ್ ಎಂ.ಟಿ., ಕಮಲನಗರ ಪಿಎಸ್ಐ ಆಶಾ ರಾಠೋಡ್, ಹೊಕ್ರಣಾ ಪಿಎಸ್ಐ ಉಷಾಬಾಯಿ, ಉದಗೀರ ಎಸ್ಡಿಪಿಒ ಟಿ.ಎಂ. ಮಮಕಾರ, ಬೀದರ್ ಗ್ರಾಮೀಣ ಪೊಲೀಸ್ ಠಾಣೆಯ ಮಹೇಶ ಪಾಟೀಲ್, ಗಡಿ ರಾಜ್ಯಗಳ ಪಿಎಸ್ಐಗಳಾದ ಎಚ್.ಪಿ.ಬಾಗಾರ, ಪಿ.ಎ. ಗರ್ಜೆ, ಎ.ಪಿ. ಕೊಡವಾದ, ಆರ್.ಎಂ.ಹುಂಡೇಕರ, ಆರ್.ಜಿ. ಚವ್ಹಾಣ್, ಡಿ.ಡಿ. ಗಡೆ ಇತರರು ಭಾಗವಹಿಸಿದ್ದರು.