ಭಾಲ್ಕಿಯ ಖಡಕೇಶ್ವರ ಶಾಲೆಯಲ್ಲಿ ಮಂಳವಾರ ಹಮ್ಮಿಕೊಂಡಿದ್ದ ಸಮವಸ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳು ಸಮವಸ ಧರಿಸಿ ಗಮನ ಸೆಳೆದರು.  
ರಾಜ್ಯ

ನಿರಂತರ ಅಧ್ಯಯನ ಸಾಧನೆಗೆ ಸಹಕಾರಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕಿ ಆರತಿ ಪಾತ್ರೆ ಅಭಿಮತ
  • ಖಡಕೇಶ್ವರ ಶಾಲೆಯಲ್ಲಿ ಸಮವಸ ದಿನಾಚರಣೆ
ಭಾಲ್ಕಿ: ನಿರಂತರ ಓದು ಮತ್ತು ಅಧ್ಯಯನ ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಶಿವಾಜಿ ಕಾಲೇಜಿನ ಉಪನ್ಯಾಸಕಿ ಆರತಿ ಪಾತ್ರೆ ಹೇಳಿದರು.
ನಗರದ ಲೆಕ್ಚರ್​ ಕಾಲನಿಯ ಖಡಕೇಶ್ವರ ಪ್ರೌಢ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಮವಸ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮವಸ ಮಕ್ಕಳಲ್ಲಿ ಸಮಾನ ಭಾವನೆ ಮೂಡಿಸುತ್ತದೆ. ಶಿಸ್ತು ಕಲಿಸಿ ಕೊಡುತ್ತದೆ. ಈ ಶಾಲೆಯಲ್ಲಿ ಬಡ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪಡೆದು ನಾಡಿಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.
ಮಕ್ಕಳ ತ ಡಾ.ರಾಮಲಿಂಗ ವಳಸಂಗಕರ್​ ಮಾತನಾಡಿ, ಸಮವಸ ಸಮಾನತೆಯ ಸಂಕೇತ. ಇದರಿಂದ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಲ್ಲಿ ಸಮಾನತೆಯ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮುಖ್ಯಗುರು ಆನಂದ ಕಲ್ಯಾಣೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಜಯಪ್ರಕಾಶ ಸಹಾನೆ, ಅಂಜಲಿ ಜೋಶಿ, ಶುಭಂ ರಾಯವಾಡೆ, ಪ್ರಕಾಶ ರುದನೂರೆ, ದಿಲೀಪ ಂಟೆ, ಉದಯಕುಮಾರ ಜೋಶಿ ಇತರರಿದ್ದರು. ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಪ್ರಥಮ ಮತ್ತು ದ್ವೀತಿಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಯಿತು. ನಗರದ ಇಳಕಲ್​ ಸಾರಿ ಸೆಂಟರ್​ನ ಮಾಲೀಕ ವಿಜಯಕುಮಾರ ಸಜ್ಜನ್​ ವೈಯಕ್ತಿಕವಾಗಿ ಹತ್ತು ಸಾವಿರ ರೂ. ನಗದು ನೀಡಿ ವಿದ್ಯಾರ್ಥಿಗಳಿಗೆ ಪೋತ್ಸಾಹಿಸಿದರು.