ಧರ್ಮಸಾಗರ ಪ್ರೌಢಶಾಲೆಯ ದೈಹಿಕ ಶಿಕರಾದ ದಿವಂಗತ ಜಿ.ಎಸ್​. ವೀರಭದ್ರ ರೆಡ್ಡಿ ಅವರ ಮೂರನೇ ವರ್ಷದ ಸ್ಮರಣಾರ್ಥವಾಗಿ ರಕ್ತದಾನ ಶಿಬಿರ ನಡೆಯಿತು. ವಿದ್ಯಾ ಸಂಸ್ಥೆಯ ಖಜಾಂಚಿ ಡಾ.ಡಿ.ವಿ. ಧನರಾಜ್​, ಎಸ್​.ಕೇಶವಬಾಬು ರೆಡ್ಡಿ ಇತರರಿದ್ದರು.  
ರಾಜ್ಯ

ರಕ್ತದಾನದಿಂದ ಇನ್ನೊಬ್ಬರ ಜೀವಕ್ಕೆ ನೆರವು / SARJAPUR

ಸರ್ಜಾಪುರ : ವಿಶ್ವದಾದ್ಯಂತ ರಕ್ತದ ಕೊರತೆಯಿಂದ ಅನೇಕ ರೋಗಿಗಳು ಸಮಯಕ್ಕೆ ಚಿಕಿತ್ಸೆ ಪಡೆಯಲಾಗದೆ ಸಂಕಷ್ಟ ಅನುಭವಿಸುತ್ತಿದ್ದು, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ಅತ್ಯಂತ ಅಗತ್ಯವಾಗಿವೆ. ಆರೋಗ್ಯವಂತರು ವರ್ಷಕ್ಕೆ ಕನಿಷ್ಠ ಎರಡು ಬಾರಿ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ರಸಲು ಸಹಾಕಾರಿಯಾಗಬೇಕು ಎಂದು ಧರ್ಮ ಸಾಗರ ವಿದ್ಯಾ ಸಂಸ್ಥೆಯ ಖಜಾಂಚಿ ಡಾ. ಡಿ.ವಿ. ಧನರಾಜ್​ ತಿಳಿಸಿದರು.
ಧರ್ಮಸಾಗರ ಪ್ರೌಢಶಾಲೆಯ ದೈಹಿಕ ಶಿಕ ದಿವಂಗತ ಜಿ.ಎಸ್​.ವೀರಭದ್ರ ರೆಡ್ಡಿ ಅವರ ಮೂರನೇ ವರ್ಷದ ಸ್ಮರಣಾರ್ಥ ಧರ್ಮಸಾಗರ ಪ್ರೌಢಶಾಲೆ 1990 ಮತ್ತು 1993ನೇ ಹಳೇ ವಿದ್ಯಾರ್ಥಿಗಳ ಎಜುಕೇಷನಲ್​ ಚಾರಿಟಬಲ್​ ಟ್ರಸ್ಟ್​ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಮತ್ತು ಉಚಿತ ಕಣ್ಣಿನ ಶಿಬಿರ ಹಾಗೂ ವೈದ್ಯಕಿಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದಾನದಿಂದ ಯಾವುದೇ ದೈಹಿಕ ಹಾನಿ ಸಂಭವಿಸುವುದಿಲ್ಲ. ಬದಲಾಗಿ ಇದು ದಾನಿಗಳ ಆರೋಗ್ಯಕ್ಕೂ ಲಾಭದಾಯಕವಾಗಿದೆ. ಆದ್ದರಿಂದ ಯಾವುದೇ ಆತಂಕವಿಲ್ಲದೆ ಆರೋಗ್ಯವಂತ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬಹುದು ಎಂದರು.
ದಿವಂಗತ ಜಿ.ಎಸ್​.ವಿರಭದ್ರ ರೆಡ್ಡಿ ಅವರು ಶಿಣ ಮತ್ತು ಸಮಾಜ ಸೇವೆ ಎರಡನ್ನೂ ಜೀವನದ ಧ್ಯೇಯವಾಗಿಸಿಕೊಂಡಿದ್ದರು. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಕೊಂಡಯ್ಯಬೇಕು ಎಂದು ಸಲಹೆ ನೀಡಿದರು. ಧರ್ಮಸಾಗರ ಪ್ರೌಢಶಾಲೆ 1990 ಮತ್ತು 1993ನೇ ಹಳೇ ವಿದ್ಯಾರ್ಥಿಗಳ ಎಜುಕೇಷನಲ್​ ಚಾರಿಟಬಲ್​ ಟ್ರಸ್ಟ್​ ಅಧ್ಯ ಎಸ್​. ಕೇಶವಬಾಬುರೆಡ್ಡಿ ಮಾತನಾಡಿ, ಶಿಣವು ಕೇವಲ ಉದ್ಯೋಗಕ್ಕೆ ಸೀಮಿತವಾಗದೆ, ಸಮಾಜದ ಒಳಿತಿಗೆ ಉಪಯೋಗವಾಗಬೇಕೆಂಬುದೇ ನಮ್ಮ ಆಶಯವಾಗಿದೆ.
ಧರ್ಮಸಾಗರ ಪ್ರೌಢಶಾಲೆ ನಮಗೆ ಶಿಸ್ತು, ಸೇವಾಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿ ಕಲಿಸಿದೆ ಎಂದರು.ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಸದಸ್ಯ ಕೆ.ಸುರೇಶ್​, ಟ್ರಸ್ಟ್​ ಉಪಾಧ್ಯೆ ಸವಿತಾ, ಕಾರ್ಯದರ್ಶಿ ವಿಷ್ಣು ಶರ್ಮ, ಖಜಾಂಚಿ ಪ್ರಭಾಕರ್​ ಇದ್ದರು.