ಎಸ್.ದೇವೆಂದ್ರಗೌಡ 
ರಾಜ್ಯ

ಗಣತಿ ಅರ್ಜಿ ಭರ್ತಿಗೆ ಸಹಾಯ ಮಾಡಿ

JAGADEESH KUMBAR
ಸಿಂಧನೂರು: ಎಸ್‌ಐಆರ್ ಹೆಸರಿನಲ್ಲಿ ಭಾರತೀಯ ಪ್ರಜೆಯನ್ನು ಅನುಮಾನದಿಂದ ನೋಡಲಾಗುತ್ತಿದ್ದು, ಕಾರ್ಯಾಂಗದ ದಬ್ಬಾಳಿಕೆ ವಿರುದ್ಧ ನ್ಯಾಯಾಂಗ ನಿಲ್ಲಬೇಕೆಂದು ಸಮುದಾಯ ಸಂಘಟನೆ ಅಧ್ಯಕ್ಷ ಎಸ್.ದೇವೇಂದ್ರಗೌಡ ಒತ್ತಾಯಿಸಿದರು.
ಸಿಪಿಐಎಂ ಪಕ್ಷ ಹಮ್ಮಿಕೊಂಡಿದ್ದ ಎಸ್‌ಐಆರ್ ಕುರಿತ ಸಭೆಯಲ್ಲಿ ಬುಧವಾರ ಮಾತನಾಡಿ, ಎನ್ಯುಮರೇಷನ್ ಫಾರ್ಮ್ (ಗಣತಿ ಅರ್ಜಿ) ತುಂಬುವ ಪ್ರಕ್ರಿಯೆ ಆರಂಭವಾಗಿದ್ದು, ಒಂದು ತಿಂಗಳ ಕಾಲ ನಡೆಯಲಿದೆ.
 ಸಂಘಟನೆಗಳ ಮುಖಂಡರು ಸೇರಿ ನಮ್ಮ ಸುತ್ತಮುತ್ತಲಿನ ಸದಸ್ಯರ ಫಾರ್ಮ್ ತುಂಬಿಸುವ ಕೆಲಸದಲ್ಲಿ ಸಹಾಯ ಮಾಡಬೇಕು. 2002ರ ಮತಪಟ್ಟಿ ಇಟ್ಟುಕೊಂಡು ಭಾಗ ಸಂಖ್ಯೆ, ಕ್ರಮ ಸಂಖ್ಯೆ ಸರಿಯಾದ ಹೆಸರು, ವಿಳಾಸ ತುಂಬುವಂತೆ ಸಹಕರಿಸಬೇಕು.
ಬಿಎಲ್‌ಒ ಭೇಟಿ ನೀಡಿದಾಗ ಮತದಾರರು ಇಲ್ಲದ ಸಂದರ್ಭದಲ್ಲಿ ವಯಸ್ಕ ಸಂಬಂಧಿಕರು ಮಾಹಿತಿ ನೀಡಿ ಫಾರ್ಮ್ ತುಂಬಿಸಬಹುದು ಎಂದರು. ಪ್ರತಿ ಮತದಾರನ ಹಕ್ಕು ರಕ್ಷಿಸಬೇಕು. ದಾಖಲೆಗಳ ಕೊರತೆಯಿಂದ ಯಾರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆಯಬಾರದು ಎಂದರು. 
ಪಕ್ಷದ ತಾಲೂಕು ಕಾರ್ಯದರ್ಶಿ ಬಸವಂತರಾಯಗೌಡ ಕಲ್ಲೂರ, ಸದಸ್ಯರಾದ ಎಂ.ಗೋಪಾಲಕೃಷ್ಣ, ವೀರೇಶ ತುರ್ವಿಹಾಳ, ರೇಣುಕಮ್ಮ, ಶರಣಮ್ಮ ಪಾಟೀಲ್, ಯಂಕಪ್ಪ ಕೆಂಗಲ್, ಗೇಸದರಾಜ, ಅಳ್ಳಪ್ಪ, ಬಿ.ಲಿಂಗಪ್ಪ, ಶರಬಣ್ಣ ನಾಗಲಾಪುರ, ಶಕುಂತಲಾ ಪಾಟೀಲ್, ಮುನಿಸ್ವಾಮಿ, ಇಬ್ರಾಹಿಂ ಸಾಬ್, ಹನುಮಂತ, ಅಂಬುಜಾ, ಪಾರ್ವತಿ, ಶಾರದಾ ಇದ್ದರು.