ರಾಷ್ಟ್ರೋತ್ಥಾನದ ವಿದ್ಯಾಕೇಂದ್ರ ಫೋನ್ ಇನ್ ಕಾರ್ಯಕ್ರಮ
ಧಾರವಾಡ: ಸತ್ತೂರಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರವು ವಿಜಯವಾಣಿ ದಿನಪತ್ರಿಕೆಯ ಸಹಯೋಗದೊಂದಿಗೆ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಪಾಲಕರು ಕರೆ ಮಾಡಿ ಉತ್ತರ ಪಡೆದುಕೊಂಡರು.
ಬೆ೦ಗಳೂರು ರಾಷ್ಟ್ರೋತ್ಥಾನ ಪರಿಷತ್ ಸದಸ್ಯ ಜಯಣ್ಣ ಎಚ್., ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಉತ್ತರ ಕ್ಲಸ್ಟರ್‌ನ ಶಿಕ್ಷಣ ವಿಭಾಗ ಪ್ರಮುಖ ರಂಗನಾಥ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸತ್ತೂರ ಶಾಲೆಯ ಕರೆಸ್ಪಾಂಡೆ೦ಟ್ ಗುರುರಾಜ ಅಗಡಿ ಹಾಗೂ ಪ್ರಧಾನಾಚಾರ್ಯ ರಾಮಕೃಷ್ಣ ಭಾಗವಹಿಸಿದ್ದರು.
ಮಕ್ಕಳಿಗೆ ಸಿಬಿಎಸ್‌ಇ ಪಠ್ಯಕ್ರಮ ಸೂಕ್ತವೇ? ರಾಷ್ಟ್ರೋತ್ಥಾನದ ಪಠ್ಯಕ್ರಮ, ಪಂಚಮುಖಿ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣ, ಕಲಿಕೆಯಲ್ಲಿ ಶಿಕ್ಷಕ- ಪಾಲಕರ ಪಾತ್ರ, ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳ ಸಿದ್ಧತೆ, ಪ್ರವೇಶಾತಿ ಪ್ರಕ್ರಿಯೆ, ವಸತಿಯುತ ಶಿಕ್ಷಣ, ಪಿಯು ಹಂತಕ್ಕೆ ಆಯ್ಕೆ ಸೇರಿ ಹಲವು ಪ್ರಶ್ನೆಗಳಿಗೆ ತಜ್ಞರು ಮಾರ್ಗದರ್ಶನ ನೀಡಿದರು.