ಮಳಖೇಡದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಹಾಪ್ಕಾಮ್ಸ್ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ ಚಾಲನೆ ನೀಡಿದರು. ಮಹಾಂತಪ್ಪ ಸಂಗಾವಿ, ರಾಜಶೇಖರ ಪುರಾಣಿಕ, ಮಂಜುನಾಥ ಭಂಡಾರಿ, ಬಸವರಾಜ ಮಾಲಿಪಾಟೀಲ್, ಭಗವಾನ ಬೋಚಿನ್ ಇದ್ದರು.
- ಬಸವರಾಜ ಪಾಟೀಲ್ ಊಡಗಿ ಅನಿಸಿಕೆ
- ಮಳಖೇಡದಲ್ಲಿ ಕ್ರಿಕೆಟ್ ಟೂರ್ನಿಗೆ ಚಾಲನೆ
ಮಳಖೇಡ: ಕ್ರೀಡೆಗಳಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುವುದಲ್ಲದೇ ಮಾನಸಿಕ ಸ್ವಾಸ್ಥ$್ಯ ಹೆಚ್ಚಾಗುತ್ತದೆ. ಕ್ರೀಡೆಗಳಲ್ಲಿ ಆರೋಗ್ಯಪೂರ್ಣ ಸ್ಪರ್ಧೆ ಇರಬೇಕು ಎಂದು ಹಾಪ್ಕಾಮ್ಸ್ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ ಹೇಳಿದರು.
ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕ್ರಿಕೆಟ್ ಕ್ಲಬ್ನಿಂದ ಭಾನುವಾರ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯಲ್ಲಿ ಸೋಲು&ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ಯಾವುದೇ ಮನಸ್ತಾಪಕ್ಕೆ ಎಡೆ ಮಾಡಿಕೊಡದೆ ಉತ್ತಮ ರೀತಿಯಲ್ಲಿ ಪಂದ್ಯದಲ್ಲಿ ಭಾಗವಹಿಸಬೇಕು. ಬಿಸಿಲು ಜಾಸ್ತಿ ಇರುವುದರಿಂದ ತಂಪಾದ ಹೊತ್ತಿನಲ್ಲಿ ಆಟವಾಡಿ ಎಂದು ಸಲಹೆ ನೀಡಿದರು.
ಆಯೋಜಕ ಭಗವಾನ್ ಬೋಚಿನ್ ಮಾತನಾಡಿ, ಕ್ರೀಡಾಕೂಟದಲ್ಲಿ ಟ್ರೋಫಿಗಾಗಿ 10 ತಂಡಗಳು ಸೆಣಸಾಡಲಿವೆ. ವಿನ್ನರ್ಗೆ 25 ಸಾವಿರ ರೂ. ನಗದು, ಟ್ರೋಫಿ ಹಾಗೂ ರನ್ನರ್ಗೆ 15 ಸಾವಿರ ರೂ. ನಗದು, ಟ್ರೋಫಿ ನೀಡಲಾಗುವುದು ಎಂದರು.
ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಮಹಾಂತಪ್ಪ ಸಂಗಾವಿ, ರಾಜಶೇಖರ ಪುರಾಣಿಕ, ಮಂಜುನಾಥ ಭಂಡಾರಿ, ಬಸವರಾಜ ಮಾಲಿಪಾಟೀಲ, ಚನ್ನಬಸ್ಸಪ್ಪ ಹಾಗರಗಿ, ರಕಿರ್ ಹುಸೇನ್ ಖಾನ್, ತುರಾಬ್ ಉಲ್ ಹಖ್, ರಮೇಶ ನಂದೂರ, ತೌಸಿಫ್ಖಾನ್, ರಾಜಶೇಖರಯ್ಯ ಮಠಪತಿ, ಕಪಿಲ್ ವಾಲಿ, ಕೀರ್ತಿಕುಮಾರ ಮಾಳಗಿ, ಕುಮಾರ ದೊಡ್ಡಮನಿ, ಅನೀಲಕುಮಾರ, ಪ್ರಶಾಂತ ದೊಡ್ಡಮನಿ, ಅಬ್ರಾರ್ ಖಾನ್, ಇಮ್ತಿಯಾಜ್ ಇನಾಮದಾರ್, ಫಾರೂಖ್ ಆಲಂಪುರಿ, ಮಿನಾಜ್ ಕಾಳಗಿ, ಫಯಾಜ್ ಮುಜುಮದಾರ್, ಸಾಧಿಕ್ ಲಂಗರಿ, ಮೈಥಿಲಿಖಾನ್, ಸೈಯದ್ ಯಾಸಿನ್ ಇತರರಿದ್ದರು.
ಶಿವಕುಮಾರ ದಳಪತಿ ನಿರೂಪಣೆ ಮಾಡಿದರು. ವಿಶ್ವನಾಥ ಸಂಗಾವಿ ವಂದಿಸಿದರು.