ಸುರಪುರದಲ್ಲಿ ಗುರುವಾರ ಹಮ್ಮಿಕೊಂಡ ರಾಷ್ಟಿçÃಯ ವೈದ್ಯರ ದಿನ ಕಾರ್ಯಕ್ರಮವನ್ನು ಡಿಎಚ್‌ಒ ಡಾ.ಮಹೇಶ್ ಬಿರಾದಾರ ಉದ್ಘಾಟಿಸಿದರು. ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯ, ಡಾ.ಮಲ್ಲನಗೌಡ ಎಸ್.ಪಾಟೀಲ್, ಡಾ.ಆರ್.ವಿ.ನಾಯಕ ಇತರರಿದ್ದರು.
- ಕುಟುಂಬ ಕಲ್ಯಾಣಾಽಕಾರಿ ಮೆಚ್ಚುಗೆ
- ಸುರಪುರದಲ್ಲಿ ವೈದ್ಯರ ದಿನ ಕಾರ್ಯಕ್ರಮಕ್ಕೆ ಚಾಲನೆ
ಜಿಲ್ಲೆಯಲ್ಲಿ ಸರ್ಕಾರದ ಪ್ರತಿಯೊಂದು ಆರೋಗ್ಯ ಯೋಜನೆ ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವುದಲ್ಲದೆ ಜ್ಲಿಲೆಯ ಆರೋಗ್ಯ ಸೇವೆಯ ಪ್ರಗತಿಗೆ ವೈದ್ಯರು ಹಾಗೂ ಇಲಾಖೆ ಸಿಬ್ಬಂದಿಯ ನಿಸ್ವಾರ್ಥ ಸೇವೆಯೇ ಮೂಲ ಕಾರಣ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಽಕಾರಿ ಡಾ.ಮಹೇಶ ಬಿರಾದಾರ ಹೇಳಿದರು.
ರಾಜ್ಯ ಸರ್ಕಾರಿ ವೈದ್ಯಾಽಕಾರಿಗಳ ಸಂಘದ ಜಿಲ್ಲಾ ಘಟಕದಿಂದ ಗುರುವಾರ ಹಮ್ಮಿಕೊಂಡ ರಾಷ್ಟಿçÃಯ ವೈದ್ಯರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸೇವೆಯಲ್ಲಿ ಇಲಾಖೆ ಸಿಬ್ಬಂದಿ ನಿಸ್ವಾರ್ಥ ಸೇವೆ ಮೂಲ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ವೈದ್ಯರ ಸಂಘಟನೆ ಇನ್ನಷ್ಟು ಬಲಪಡಿಸಬೇಕು ಎಂದು ಸಲಹೆ ನೀಡಿದರು.
ವಿಶೇಷ ಆಹ್ವಾನಿತರಾಗಿದ್ದ ಡಾ.ಭಗವಂತ ಅನವಾರ ಮಾತನಾಡಿ, ಪ್ರಸಿದ್ಧ ವೈದ್ಯ, ಸ್ವಾತಂತ್ರ‍್ಯ ಹೋರಾಟಗಾರ ಹಾಗೂ ಪಶ್ಚಿಮ ಬಂಗಾಳದ ೨ನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿದಾನ್ ಚಂದ್ರರಾಯ್ ಅವರ ವೈದ್ಯಕೀಯ ಕ್ಷೇತ್ರದ ಅಪಾರ ಸೇವೆ ಸ್ಮರಿಸಿ, ಭಾರತ ಸರ್ಕಾರ ೧೯೯೧ರಿಂದ ಜುಲೈ ೧ರಂದು ರಾಷ್ಟಿçÃಯ ವೈದ್ಯರ ದಿನವನ್ನಾಗಿ ಆಚರಿಸುತ್ತಾ ಬಂದಿದೆ ಎಂದು ದಿನಾಚರಣೆಯ ಮಹತ್ವವನ್ನು ತಿಳಿಸಿದರು.
ರುಕ್ಮಾಪುರ ಹಿರೇಮಠದ ಪೀಠಾಽಪತಿ ಶ್ರೀ ಗುರುಶಾಂತಮೂರ್ತಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈದ್ಯಾಽಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಮಲ್ಲನಗೌಡ ಎಸ್.ಪಾಟೀಲ್ ವಹಿಸಿದ್ದರು. ಡಾ.ಮಲ್ಲಪ್ಪ.ಕೆ, ಡಾ.ಪದ್ಮಾನಂದ ಗಾಯಕ್ವಾಡ, ಡಾ.ಜ್ಯೋತಿ ಕಟ್ಟಿಮನಿ, ಸುರಪುರ ತಾಲೂಕು ಆರೋಗ್ಯಾಽಕಾರಿ ಡಾ.ಆರ್.ವಿ.ನಾಯಕ, ಡಾ.ರಮೇಶ ಗುತ್ತೇದಾರ, ಡಾ.ಹಣಮಂತ, ಡಾ.ಯಲ್ಲಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಡಾ.ಯಶ್ವಂತ ರಾಠೋಡ್, ಹಿರಿಯ ವೈದ್ಯಾಽಕಾರಿಗಳಾದ ಡಾ.ಎಸ್.ಬಿ.ಪಾಟೀಲ್, ಡಾ.ಜಗನ್ನಾಥ ರೆಡ್ಡಿ, ಡಾ.ಅಶೋಕರೆಡ್ಡಿ, ಡಾ.ಮಂಜುನಾಥ ಚಿಕ್ಕಮಠ, ಡಾ.ಶರಣು ಹೊಸಮನಿ, ಡಾ.ಮಹೇಂದ್ರನಾಥ ಇತರರಿದ್ದರು.
ಸಂಘದ ಪದಾಽಕಾರಿಗಳಾದ ಡಾ.ಗಿರೀಶ್ ಕುಲಕರ್ಣಿ, ಮುದಾಸೀರ್ ಅಹ್ಮದ್, ಡಾ.ಜÁ್ಞನೇಶ್ವರ ಹಾಗೂ ಸಂಜಯ್ ಚಂದ್ರ ಕಾರ್ಯಕ್ರಮ ನಿರ್ವಹಿಸಿದರು.