ಜೇರಬಂಡಿಯಲ್ಲಿ ಹಮ್ಮಿಕೊಂಡ ಸಂಜೀವಿನಿ ಸಂಚಾರ ಆರೋಗ್ಯ ಸೇವಾ ಶಿಬಿರದಲ್ಲಿ ರೋಗಿಗಳ ತಪಾಸಣೆ ನಡೆಸಲಾಯಿತು. ವ್ಯವಸ್ಥಾಪಕ ಈಶ್ವರಯ್ಯ, ಡಾ.ಅಮರೀನ್ ಬೇಗಂ, ಲ್ಯಾಬ್ ಟೆಕ್ನಿಷಿಯನ್ ದೇವರಾಜ, ಜಿಎನ್‌ಎಂ ಹೊಳೆಯಪ್ಪ, ಸಿಬ್ಬಂದಿ ವರ್ಷಾ, ನಾಗರಾಜ, ಶರಣಪ್ಪ ಎನ್.ಗಣೇಕಲ್ ಇತರರಿದ್ದರು. 
ರಾಜ್ಯ

ಹಳ್ಳಿಗರ ಮನೆ ಬಾಗಿಲಿಗೆ ಆರೋಗ್ಯ ಸೇವೆ

ದೇವದುರ್ಗ: ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಂಜೀವಿನಿ ಸಂಚಾರ ಆರೋಗ್ಯ ಸೇವೆ ಆರಂಭಿಸಿದ್ದು, ಮೊಬೈಲ್ ವಾಹನ ಜನರ ಮನೆ ಬಾಗಿಲಿಗೆ ಬಂದು ಪರೀಕ್ಷಿಸಲಿದೆ ಎಂದು ಎಸ್‌ಬಿಐ ಫೌಂಡೇಷನ್ ಸಿಇಒ ರಾಮಯ್ಯ ಹೇಳಿದರು. 
ಜೇರಬಂಡಿ ಗ್ರಾಮದಲ್ಲಿ ಅವಾರ್ಡ್ ಸ್ವಯಂ ಸೇವಾ ಸಂಸ್ಥೆ ಆರಂಭಿಸಿದ ಸಂಜೀವಿನಿ ಸಂಚಾರ ಆರೋಗ್ಯ ಸೇವಾ ಶಿಬಿರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ 20 ಗ್ರಾಮಗಳಲ್ಲಿ ಉಚಿತ ಆರೋಗ್ಯ ಸೇವೆ ಒದಗಿಸಲಾಗಿದೆ. 
ಹಿಂದುಳಿದ ಹಾಗೂ ಆಸ್ಪತ್ರೆಯಿಂದ ದೂರ ಇರುವ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ವಾರಕ್ಕೊಮ್ಮೆ ಹಳ್ಳಿಗೆ ಸಂಚಾರ ಮಾಡಿ ಜನರ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುವುದು. ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.