ದೇವನಹಳ್ಳಿ ನ್ಯೂ ಮಾನಸ ಮತ್ತು ಪೇನ್​ ಕ್ಲಿನಿಕ್​ನಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ.ರಾವೇಂದ್ರ ಆರೋಗ್ಯ ತಪಾಸಣೆ ಮಾಡಿದರು.  
ರಾಜ್ಯ

ಆಧುನಿಕ ಜೀವನ ಶೈಲಿಯಿಂದ ಆರೋಗ್ಯ ಸಮಸ್ಯೆ / DEVANAHALLI

ದೇವನಹಳ್ಳಿ : ಪ್ರಸ್ತುತ ಆಧುನಿಕ ಜೀವನ ಶೈಲಿ ಒತ್ತಡದ ಬದುಕಿನ ಜೀವನದಿಂದ ಮಕ್ಕಳು, ವಯೋವೃದ್ಧರು ಎನ್ನದೆ ಎಲ್ಲರಿಗೂ ಒಂದಲ್ಲ ಒಂದು ರೀತಿಯ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ ಎಂದು ನ್ಯೂ ಮಾನಸ ಆಸ್ಪತ್ರೆ ಸಂಸ್ಥಾಪಕ ಡಾ.ಎನ್​.ಎಚ್​.ನರಸಾರೆಡ್ಡಿ ತಿಳಿಸಿದರು.
ಪಟ್ಟಣದ ಮರಳುಬಾಗಿಲಿನಲ್ಲಿರುವ ನ್ಯೂ ಮಾನಸ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಪೇನ್​ ಕ್ಲಿನಿಕ್​ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಮನುಷ್ಯನ ಹೊರಭಾಗದ ಗಾಯ ಕಾಯಿಲೆಗಳು ಮನ್ಯುಷ್ಯನಿಗೆ ಬೇಗ ತಿಳಿಯುತ್ತದೆ. ಆದರೆ ಒಳಬಾಗದ ಕಾಯಿಲೆಗಳನ್ನು ತಿಳಿಯುವುದು ಕಷ್ಟ ಅದನ್ನು ತ ವೈದ್ಯರೆ ತಪಾಸಣೆ ಮಾಡಿ ತಿಳಿಸಬೇಕು ಎಂದರು.
ಕೀಲು ಮೂಲೆ ತ ಡಾ.ರಾವೇಂದ್ರ ರಾಮಾಂಜಲು ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಒಂದು ಜೀವಿಯ ದೇಹ, ಮನಸ್ಸು ಸಂಪೂರ್ಣ ಸಮತೋಲನದಲ್ಲಿರುವ ಸ್ಥಿತಿಯನ್ನು ಆರೋಗ್ಯ ಎಂದು ಕರೆಯಲಾಗುತ್ತದೆ, ವಿಶ್ವ ಆರೋಗ್ಯ ಸಂಸ್ಥೆಯ 1945ರ ಹೇಳಿಕೆಯ ಪ್ರಕಾರ ಆರೋಗ್ಯವೆಂದರೆ ಕೇವಲ ರೋಗ, ಭಾದೆಗಳ ಗೈರು ಹಾಜರಿಯಷ್ಟೇ ಅಲ್ಲ, ಸಂಪೂರ್ಣ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸುಸ್ಥಿತಿ ಎಂದರು.
ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ, ಒಬ್ಬ ಮನುಷ್ಯ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿರುತ್ತದೆ, ಇದರಿಂದ ಆರೋಗ್ಯಕರ ಸಮಾಜ ರೂಪುಗೊಳ್ಳುತ್ತದೆ ಹಾಗೂ ದೇಶದ ಪ್ರಗತಿ ಹೆಚ್ಚುತ್ತದೆ. ಇಂದಿನ ಈ ಉಚಿತ ವಿಶೇಷವಾಗಿ ಶಿಬಿರದಲ್ಲಿ ದೀರ್ ಕಾಲದ ಕುತ್ತಿಗೆ ನೋವು, ಬೆನ್ನು, ಭುಜ, ಮಣಿಕಟ್ಟು, ಮೊಣಕೈ, ಮೊಣಕಾಲು, ಸೊಂಟ, ಹಿಮ್ಮಡಿ ಹಾಗೂ ತಲೆ ನೋವಿನಿಂದ ಬಳಲುತ್ತಿರುವವರಿಗಾಗಿ ತಪಾಸಣೆ ಚಿಕಿತ್ಸ ಸಲಹೆ ಹಮ್ಮಿಕೊಳ್ಳಲಾಗಿದೆ ಎಂದರು.
ಡಾ.ಎನ್​.ಎಚ್​.ನರಸಾಡ್ಡಿ, ಡಾ.ರಾವೇಂದ್ರ ರಾಮಾನಂಜಲು, ಮ್ಯಾನೇಜರ್​ ಪ್ರಭಾಕರ್​, ವ್ಯವಸ್ಥಾಪಕ ಸೋಮಶೇಖರ್​ ಇದ್ದರು.