ಆಯತಪ್ಪಿ ಬಿದ್ದು ಪ್ರಯಾಣಿಕ ಮೃತ.
- ರೈಲ್ವೆ ನಿಲ್ದಾಣ
- ರೈಲು ಹತ್ತುವಾಗ ಆಯತಪ್ಪಿ ಬಿದ್ದು ಪ್ರಯಾಣಿಕ ಮೃತ
ಹೊಳೆನರಸೀಪುರ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಸಂಜೆ ರೈಲು ಹತ್ತುವಾಗ ಆಯತಪ್ಪಿ ಬಿದ್ದು ಪ್ರಯಾಣಿಕ ಮೃತಪಟ್ಟಿದ್ದಾನೆ.
ತಾಲೂಕಿನ ಕೆ.ಮುದ್ದನಹಳ್ಳಿಯ ನಾಗರಾಜ್(47) ಮೃತ ವ್ಯಕ್ತಿ.
ಅರಸೀಕೆರೆಯಿಂದ ಮೈಸೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲನ್ನು ಹತ್ತುವಾಗ ಈ ಅವಘಡ ಸಂಭವಿಸಿದೆ. ಮೈಸೂರಿಗೆ ತೆರಳುವ ಸಲುವಾಗಿ ರೈಲು ಹತ್ತಲು ಬಂದಿದ್ದ ನಾಗರಾಜ್, ರೈಲು ಚಲಿಸಲು ಆರಂಭಿಸಿದಾಗ ಹತ್ತಲು ಯತ್ನಸಿದ್ದಾರೆ. ಈ ವೇಳೆ ಆಯತಪ್ಪಿ ಬಿದ್ದು ರೈಲಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.