SIR Irregularities In Yashwantpur Constituency
- ರಾಮಮಂದಿರ ಹುಂಡಿ ಕಳುವು ಬಗ್ಗೆ ಮಾತನಾಡ್ತಾರೆ ಇಲ್ಲಿ ಮತದಾರರ ಹುಂಡಿಯನ್ನೇ ಸರ್ಕಾರ ಕಳುವು ಮಾಡುತ್ತಿದೆ
- ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರಿಂದ ತೀವ್ರ ವಾಗ್ದಾಳಿ
- ಜಲಾಶಯ ನಂಬಿ ಉಳುಮೆ ಮಾಡ್ಬೇಡಿ ಎನ್ನುವ ಸಿಎಂನನ್ನು ಎಂದು ನೋಡಿಲ್ಲ ಎಂದ ಎಚ್ಡಿಕೆ
ಬೆಂಗಳೂರು: ಗುರುವಾರ ರಾಮನಗರದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಾಗುತ್ತಿರುವ ಅಕ್ರಮದ ಬಗ್ಗೆ ವಿಡಿಯೋ ಸಾಕ್ಷಿ ಸಮೇತ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಆರೋಪಿಸಿದ್ದರು. ಆ ಬೆನ್ನಲ್ಲೇ ಯಶವಂತ ಪುರ ಕ್ಷೇತ್ರಕ್ಕೆ ಸೇರಿದ ಮತ್ತೊಂದು ಎಸ್ಐಆರ್ ಅಕ್ರಮಗಳ ವಿಡಿಯೋ ರಿಲೀಸ್ ಮಾಡಿದ್ದಾರೆ.
ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಯಶವಂತಪುರ ಕ್ಷೇತ್ರದ ಅಕ್ರಮ ಎಸ್ಐಆರ್ ಪ್ರಕ್ರಿಯೆಯ ವಿಡಿಯೋ ರಿಲೀಸ್ ಮಾಡಿದ್ದು, ಯಶವಂತಪುರ ಕ್ಷೇತ್ರದ ಶಾಸಕ ಟಿ ಸೋಮಶೇಖರ್ ಅವರಿರುವ ಪುಸ್ತಕವನ್ನು ಬಿಎಲ್ಒ ಹಿಡಿದಿರುವ ಕೆಲವು ಫೋಟೋಗಳನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹಂಚಿಕೊಂಡಿದ್ದಾರೆ.
SIR ಬಗ್ಗೆ ಹೇಳಿದ್ದೇನು?
'ಸರ್ಕಾರದ ಗುಲಾಮರಾಗಿ ಕೆಲಸ ಮಾಡಲು ಸರ್ಕಾರ ಸೂಚನೆ ಕೊಟ್ಟಿದೆ.ಕೆಪಿಸಿಸಿ ಹೊಸ ಅಧ್ಯಕ್ಷರು ಭಾಷಣ ಮಾಡ್ತಾರೆ. ರಾಮಂಮದಿರದ ಬಗ್ಗೆ ಹುಂಡಿ ಲೂಟಿ ಬಗ್ಗೆ ಮಾತಾಡ್ತಾರೆ. ನೀವೇ ಅಧಿಕಾರಿಗಳ ಬಳಿ ಮತದಾರರ ಹುಂಡಿಯನ್ನೇ ಲೂಟಿ ಮಾಡಲು ಹೊರಟಿದ್ದೀರಿ ಎಂದು ಹೇಳಿದರು. ನನಗೆ ರಾಜ್ಯದ ಹಲವು ಭಾಗಗಳಿಂದ ಕರೆ ಬರುತ್ತಿದೆ. ಮತದಾರರ ಪರಿಷ್ಕರಣೆ ನಿಯಮ ಗಾಳಿ ತೂರುತ್ತಿದ್ದಾರೆ' ಎಂದರು. ಜೊತೆಗೆ ಚುನಾವಣಾ ಆಯುಕ್ತರನ್ನು ಭೇಟಿ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡರು
ಡಿಕೆಶಿ ವಿರುದ್ಧ ವಾಗ್ದಾಳಿ
ಈ ಬಾರಿ ದೇಶದಲ್ಲಿ ಭೀಕರ ಬರಗಾಲ ಕಾಣಿಸಿಕೊಳ್ಳುವ ಮುನ್ಸೂಚನೆ ಇದೆ. ರಾಜ್ಯದ ಹಲವು ಜಲಾಶಯದಲ್ಲಿ ಒಳ ಹರಿವು ತಳಮಟ್ಟದಲ್ಲಿ ಇದೆ. ಹೀಗಾಗಿ ಜಲಾಶಯ ನಂಬಿ ಬೆಳೆ ಬೆಳೆಯಬೇಡಿ ಎಂದು ಸಿಎಂ ಡಿಕೆ ಶಿವಕುಮಾರ್ ಅವರು ವಿಧಾನಸೌಧದಲ್ಲಿ ಸಚಿವ ಸಂಪುಟ ಬಳಿಕ ಮಾತನಾಡಿದ್ದರು. ಈ ಬಗ್ಗೆ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ಕಿಡಿಕಾಡಿದ್ದಾರೆ.
ರಾಜ್ಯದ ಇತಿಹಾಸದಲ್ಲಿ ಜಲಾಶಯಗಳನ್ನ ನಂಬಿ ಬಿತ್ತನೆ ಮಾಡಬೇಡಿ ಅನ್ನೋ ಸಂದೇಶ ಕೊಟ್ಟಿರೋ ಸಿಎಂಅನ್ನು ಇದೇ ಮೊದಲು ನೋಡುತ್ತಿರುವುದು ಎಂದು ಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಮೇಕೆದಾಟು ಕಟ್ಟೋಕೆ ಬಿಡಲ್ವಂತೆ
ಮೇಕೆದಾಟು ನಿರ್ಮಾಣದ ಬಗ್ಗೆ ಮಾತನಾಡಿದ ಅವರು, ತಮಿಳುನಾಡಿನವರು ಅಣೆಕಟ್ಟಲು ಬಿಡೋದಿಲ್ಲ ಎಂದಿದ್ದಾರೆ. ಒಂದು ಇಟ್ಟಿಗೆ ಕಲ್ಲನ್ನು ಇಡಲು ಬಿಡಲ್ಲ ಎಂದಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ನವರು ಎತ್ತಿನಹೊಳೆ ನೀರು ಜೂನ್, ಜುಲೈನಲ್ಲಿ ಹರಿಸುತ್ತೇವೆ ಅಂತಾರೆ. ಇದಕ್ಕಾಗಿ ಇಲ್ಲಿಯವರೆಗೆ 23 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಆದರೆ ಏನೂ ಪ್ರಯೋಜನವಿಲ್ಲ ಎಂದು ಗುಡುಗಿದರು, (ಏಜೆನ್ಸೀಸ್).