ಯಾದಗಿರಿ-ಚಿತ್ತಾಪುರ ರಾಷ್ಟಿçÃಯ ಹೆದ್ದಾರಿಯಲ್ಲಿ ಅಳವಡಿಸಿರುವ ಎಎನ್‌ಪಿಆರ್ ಕ್ಯಾಮರಾಗಳು.
- ಎಂಟು ಕಡೆ ಎಎನ್‌ಪಿಆರ್ ಕ್ಯಾಮರಾ
- ಅತಿವೇಗ-ನಿಯಮ ಉಲ್ಲಂಘನೆಗೆ ಬ್ರೇಕ್
ಅಪರಾಧ ಮತ್ತು ಅಪಘಾತ ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಮೂಲಕ `ಜನಸ್ನೇಹಿ ಪೊಲೀಸ್' ಎಂದೇ ಹೆಸರು ಮಾಡಿರುವ ಇಲ್ಲಿನ ಜಿಲ್ಲಾ ಪೊಲೀಸ್ ಇಲಾಖೆ ಮತ್ತೊಂದು ಮಹತ್ವದ ಕಾರ್ಯಕ್ಕೆ ಕೈಹಾಕುವ ಮೂಲಕ ಜನಮನ ಸೆಳೆದಿದೆ.
ವಾಹನಗಳ ಸಂಚಾರದ ಮೇಲೆ ಹೈಟೆಕ್ ಕಣ್ಗಾವಲು ಇರಿಸಲು ಅತ್ಯಾಧುನಿಕ ಎಎನ್‌ಪಿಆರ್ (ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್) ಕ್ಯಾಮರಾಗಳನ್ನು ಜಿಲ್ಲೆಯ ಪ್ರಮುಖ ರಾಜ್ಯ ಮತ್ತು ರಾಷ್ಟೀಯ ಹೆದ್ದಾರಿಗಳ ಒಟ್ಟು ೮ ಸ್ಥಳಗಳಲ್ಲಿ ಅಳವಡಿಸಲಾಗಿದೆ. ಹೀಗಾಗಿ ಇನ್ಮುಂದೆ ಈ ಕ್ಯಾಮರಾಗಳಿಂದ ಜಿಲ್ಲೆಯ ರಾಜ್ಯ ಹೆದ್ದಾರಿಗಳಲ್ಲಿ ಸಂಚಾರ ನಿಯಮ ಉಲ್ಲಂಗಿಸಿ ತಪ್ಪಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ.
ವಾಹನಗಳ ಪ್ರತಿಯೊಂದು ಚಲನ, ವಲನ ಈ ಕ್ಯಾಮರಾದಲ್ಲಿ ದಾಖಲಾಗಲಿದೆ. ವಾಹನದ ನೋಂದಣಿ ಸಂಖ್ಯೆ, ಸಂಚಾರದ ಸಮಯ, ವೇಗ ಸೇರಿ ವಿವಿಧ ಮಾಹಿತಿ ಕ್ಷಣಾರ್ಧದಲ್ಲಿ ದಾಖಲಿಸಿ ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿವೆ. ಅತಿವೇಗ, ಸಂಚಾರ ನಿಯಮ ಉಲ್ಲಂಘನೆ, ಅನುಮಾನಾಸ್ಪದ ವಾಹನಗಳ ಚಲನವಲನ ಮತ್ತು ಅಪರಾಧ ಕೃತ್ಯಗಳಲ್ಲಿ ಬಳಸುವ ವಾಹನಗಳನ್ನು ಪತ್ತೆಹಚ್ಚುವಲ್ಲಿ ಈ ವ್ಯವಸ್ಥೆ ಪ್ರಮುಖ ಪಾತ್ರವವಹಿಸಲಿದೆ.
ಕಳ್ಳತನಕ್ಕೊಳಗಾದ ವಾಹನಗಳನ್ನು ಜಿಲ್ಲಾ ಪ್ರವೇಶಿಸಿದರೂ ಅಥವಾ ಹೊರ ಹೋದರೂ ಈ ಕ್ಯಾಮರಾ ಮೂಲಕ ತಕ್ಷಣವೇ ಮಾಹಿತಿ ಲಭ್ಯವಾಗಲಿದೆ. ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆಗೆ ಆದ್ಯತೆ ನೀಡಿರುವ ಪೋಲಿಸ್ ಇಲಾಖೆ, ಈ ಒಂದು ತಂತ್ಇಕತೆಯನ್ನು ಪರಿಣಾಮಕಾರಿಯಾಗಿ ಬಳಸಲು ಮುಂದಾಗಿದೆ.
ಹೆದ್ದಾರಿಗಳಲ್ಲಿ ಸಂಚಾರ ನಿಯಮ ಪಾಲನೆ ಹೆಚ್ಚಿಸುವ ಜತೆಗೆ ಅಪಘಾತಗಳ ಪ್ರಮಾಣ ಕಡಿಮೆ ಮಾಡುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಪೋಲಿಸ್ ಇಲಾಖೆ ಮುಂದಾಗಿದೆ. ಸಂಚಾರ ನಿಯಮ ಉಲ್ಲಂಘಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ನಿಯಮಾನುಸಾರ ದಂಡ ವಿಽಸುವ ಪ್ರಕ್ರಿಯೆಯೂ ಈ ವ್ಯವಸ್ಥೆ ಮೂಲಕ ನಡೆಯುತ್ತದೆ. ಇದರಿಂದ ವಾಹನ ಸವಾರರು ಸಂಚಾರ ನಿಯಮ ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಪೃಥ್ವಿಕ್ ಶಂಕರ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ವಾಹನ ಸವಾರರು ಸೀಟ್ ಬೆಲ್ಟ್ ಧರಿಸದಿರುವುದು, ವೇಗದ ಮಿತಿ ಮಿರುವುದು, ಮೊಬೈಲï ಬಳಸುತ್ತ ವಾಹನ ಚಲಾಯಿಸುವುದು ಸೇರಿ ಹಲವು ನಿಯಮ ಇನ್ನೂ ಅನೇಕರು ಉಲ್ಲಂöಸುತ್ತಿದ್ದಾರೆ. ಇಂತಹವುಗಳಿಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡಿರುವ ಈ ಕೆಲಸ ಮತ್ತು ಶ್ಲಾಘನೀಯ. | ನಾಗರತ್ನ ಅನಪುರಜಿಲ್ಲಾ ಉಪಾಧ್ಯಕ್ಷೆ, ವಕೀಲರ ಸಂಘ ಯಾದಗಿರಿ
ರಾಜ್ಯದ ಹೆz್ದÁರಿಗಳಲ್ಲಿ ಅಪಘಾತಗಳ ಪ್ರಮಾಣ ಹಾಗೂ ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಎಎನ್‌ಪಿಆರ್ ಕ್ಯಾಮರಾ ಅಳವಡಿಸಲಾಗುತ್ತಿದೆ. ಸಂಚಾರ ನಿಯಮ ಉಲ್ಲಂöಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ, ನಿಯಮಾನುಸಾರ ದಂಡ ವಿಽಸಲಾಗುವುದು.| ಪೃಥ್ವಿಕ್ ಶಂಕರ್ಎಸ್‌ಪಿ ಯಾದಗಿರಿ