ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೆಂಭಾವಿ ಬಳಿಯ ಯಾಳಗಿ ಗ್ರಾಮದ ಪ್ರಗತಿಪರ ರೈತ ಗೂಡುಸಾಬ್ ಸಿಪಾಯಿ ತನ್ನ ಐದು ಎಕರೆ ಜಮೀನಿನಲ್ಲಿ ಬಿತ್ತಿದ ಹತ್ತಿ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರು ಹಾಯಿಸುತ್ತಿರುವುದು. 
ರಾಜ್ಯ

ಹತ್ತಿ ಬೆಳೆಗೆ ಟ್ಯಾಂಕರ್ ನೀರು

ಪ್ರಮುಖ ಮುಖ್ಯಾಂಶಗಳು

  • ಗಮನಸೆಳೆದ ಯಾಳಗಿ ರೈತ ಗುಡೂಸಾಬ್ ಹೊಸ ಪ್ರಯತ್ನ
  • ವರಣ ಕೈ ಹಿಡಿಯುವ ಭರವಸೆ
ಕೆಂಭಾವಿ(ಯಾದಗಿರಿ): ಪಟ್ಟಣ ಸೇರಿ ವಲಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಿತ್ತಿದ ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ವರುಣದೇವನ ಕೃಪೆಗಾಗಿ ಹಲವೆಡೆ ದೇವರ ಮೊರೆ ಹೋಗಿದ್ದರೆ, ಯಾಳಗಿ ಗ್ರಾಮದ ರೈತನೊಬ್ಬ ತನ್ನ ಜಮೀನಿಗೆ ಟ್ಯಾಂಕರ್ ಮೂಲಕ ನೀರುಣಿಸಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಗಮನಸೆಳೆದಿದೆ.
ಪ್ರಗತಿಪರ ರೈತ ಗೂಡುಸಾಬ್ ಸಿಪಾಯಿ ತನ್ನ ಐದು ಎಕರೆ ಜಮೀನಿನಲ್ಲಿ ಬಿತ್ತಿದ ಹತ್ತಿ ಬೆಳೆ ಉಳಿಸಿಕೊಳ್ಳಲು ಶತಪ್ರಯತ್ನ ಮಾಡುತ್ತಿದ್ದು, ಒಂದು ವಾರದಿಂದ ಟ್ಯಾಂಕರ್ ನೀರು ತಂದು ತುಂತುರು ನೀರಾವರಿ ಮೂಲಕ ಬೆಳೆಗಳಿಗೆ ಹಾಯಿಸುತ್ತಿದ್ದಾರೆ. ಹೀಗೆ ನೀರುಣಿಸುವುದು ತುಸು ದುಬಾರಿಯಾದರೂ ಭಾರಿ ಬೆಲೆ ತೆತ್ತು ಹತ್ತಿ ಬೀಜ ಖರೀದಿಸಿದ್ದು, ಮೊಳಕೆಯೊಡೆದರೆ ಮುಂದೆ ಮಳೆ ಬರಬಹುದು ಎಂಬ ನಂಬಿಕೆಯಿAದ ಈ ಕಾರ್ಯಕ್ಕೆ ಮುಂದಾಗಿದ್ದಾರೆ.
ದಿನಕ್ಕೆ ೭೦೦ ರೂ.ಗಳಂತೆ ಟ್ಯಾಂಕರ್ ಬಾಡಿಗೆ ಪಡೆದು ನಿತ್ಯ ೩-೫ ಸಲ ನೀರು ಜಮೀನಿಗೆ ಹಾಯಿಸುವ ರೈತ ಗೂಡುಸಾಬ್ ತುಂತುರು ಮೂಲಕ ನೇರವಾಗಿ ಬೆಳೆಗಳಿಗೆ ಜೀವಜಲ ಸಿಗುವಂತೆ ಮಾಡಿದ್ದಾರೆ. ಈ ಪ್ರಯತ್ನ ಸೋಜಿಗ ಎನಿಸಿದರೂ ಮುಂಬರುವ ದಿನಗಳಲ್ಲಿ ಬರಗಾಲದ ಭೀಕರತೆ ತೋರಿಸುವ ದಿಕ್ಸೂಚಿಯಾಗಿದೆ.
"

ದುಬಾರಿ ಬೆಲೆಯ ಹತ್ತಿ ಬೀಜ ತಂದು ನಾಟಿ ಮಾಡಿರುವೆ. ಆದರೆ ಮಳೆ ಬಾರದೆ ಹೊಲದಲ್ಲಿದ್ದ ಬೆಳೆ ಒಣಗುವ ಹಂತಕ್ಕೆ ತಲುಪಿದೆ. ಆರಂಭಿಕ ಹಂತದಲ್ಲಿ ಬೆಳೆಗಳಿಗೆ ಟ್ಯಾಂಕರ್ ನೀರು ಹರಿಸುತ್ತಿದ್ದೇನೆ. ಇದು ದುಬಾರಿಯಾದರೂ ಬೆಳೆ ಕೈಗೆ ಸಿಗುವ ಭರವಸೆ ಇದೆ.| ಗೂಡುಸಾಬ್ ಸಿಪಾಯಿಪ್ರಗತಿಪರ ರೈತ, ಯಾಳಗಿ

— | ಗೂಡುಸಾಬ್ ಸಿಪಾಯಿ ಪ್ರಗತಿಪರ ರೈತ, ಯಾಳಗಿ