ದೊಡ್ಡಬಳ್ಳಾಪುರದ ಶ್ರೀ ಆದಿಶಕ್ತ್ಯಾತ್ಮಕ ದ್ರೌಪದಾಂಬ ದೇವಿ ಕರಗ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಹಸಿ ಕರಗ ಉತ್ಸವ ಸಂಭ್ರಮದಿಂದ ನೆರವೇರಿತು. 
ರಾಜ್ಯ

ಹಸಿಕರಗ ಉತ್ಸವ ಅದ್ದೂರಿ / DODABALLAPUR

ದೊಡ್ಡಬಳ್ಳಾಪುರ : ನಗರದ ಚಿಕ್ಕಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ಆದಿಶಕ್ತ್ಯಾತ್ಮಕ ದ್ರೌಪದಾಂಬ ದೇವಿ ಕರಗ ಮಹೋತ್ಸವ ಪ್ರಯುಕ್ತ ಹಸಿ ಕರಗ ಉತ್ಸವ ಸಂಭ್ರಮದಿಂದ ನೆರವೇರಿತು.
ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿ ಪೂಜಾರಿ ವೈ.ಭೀಮರಾಜ್​ ಹಸಿ ಕರಗ ಹೊತ್ತು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ನಗರದ ಗಗನಾರ್ಯಸ್ವಾಮಿ ಮಠದಿಂದ ಹೊರಟ ಉತ್ಸವ ಹಳೇ ಬಸ್​ ನಿಲ್ದಾಣ, ಶ್ರೀ ನೆಲದಾಂಜನೇಯಸ್ವಾಮಿ ದೇವಾಲಯ, 7 ಸುತ್ತಿನ ಕೋಟೆ, ತೂಬಗೆರೆ ಪೇಟೆ, ವನ್ನಿಗರಪೇಟೆ ಮೊದಲಾದೆಡೆ ಸಂಚರಿಸಿ ದೇವಾಲಯದ ಬಳಿ ಆಗಮಿಸಿತು.
ಗುರುವಾರ ರಾತ್ರಿ ನಡೆಯಲಿರುವ ಶ್ರೀಆದಿಶಕ್ತ್ಯಾತ್ಮಕ ದ್ರೌಪದಾಂಬ ದೇವಿ ಕರಗ ಮಹೋತ್ಸವಕ್ಕೆ ಸಿದ್ಧತೆ ಪೂರ್ಣಗೊಂಡಿವೆ. ದೇವಾಲಯವನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿದೆ. ನಗರದ ವಿವಿಧ ವೃತ್ತಗಳಲ್ಲಿ ತಮಿಳುನಾಡು ಕಲಾವಿದರಿಂದ ತಯಾರಿಸಲಾದ ವಿವಿಧ ದೇವತೆಗಳ ವಿದ್ಯುತ್​ ದೀಪಾಲಂಕಾರ, ಬೃಹತ್​ ಕಟೌಟು ಮೆರುಗು ನೀಡಿವೆ. ಕರಗದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಗಣ ಹೋಮ, ನವಗ್ರಹ ಹೋಮ, ಚಂಡಿಕಾ ಹೋಮ ನಡೆಯಿತು. ಕರಗ ಉತ್ಸವದವರೆಗೆ ನಿತ್ಯ ಅಭಿಷೇಕ, ಪೊಂಗಲ್​ ಸೇವೆ ನೆರವೇರಿಸಲಾಯಿತು.