ಮಾಲೂರು Karaga ತಾಲೂಕು ತೊರ್ನಹಳ್ಳಿಯಲ್ಲಿ ಶ್ರೀ ದ್ರೌಪದಾಂಬಾ ಹಾಗೂ ಶ್ರೀ ಧರ್ಮರಾಯಸ್ವಾಮಿಯ 60ನೇ ಹಸಿಕರಗ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. 
ರಾಜ್ಯ

ತೊರ್ನಹಳ್ಳಿಯಲ್ಲಿ ಹಸಿಕರಗ ವಿಜೃಂಭಣೆ Karaga

ಮಡಿವಾಳ: ಮಾಲೂರು ತಾಲೂಕು ತೊರ್ನಹಳ್ಳಿಯಲ್ಲಿ ಶ್ರೀ ದ್ರೌಪದಾಂಬಾ ಹಾಗೂ ಶ್ರೀ ಧರ್ಮರಾಯ Karaga ಸ್ವಾಮಿಯ 60ನೇ ಹಸಿಕರಗ ಮಹೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಉತ್ಸವದ ಅಂಗವಾಗಿ ದೇವಾಲಯಕ್ಕೆ ವಿಶೇಷ ವಿದ್ಯುತ್​ ದೀಪಾಲಂಕಾರ ಮಾಡಲಾಗಿತ್ತು.
ಕರಗದ ಪೂಜಾರಿಗಳಾದ ಮಾರೇಶ್​, ರಾಮಕೃಷ್ಣಪ್ಪ, ಶ್ರೀನಿವಾಸ್​ ಅವರು ಹಸಿಕರಗ ಕೈಯಲ್ಲಿಡಿದು ಪ್ರಮುಖ ಬೀದಿಗಳಲ್ಲಿ ನೃತ್ಯ ಮಾಡಿದರು. ಕರಗಕ್ಕೆ ಮಲ್ಲಿಗೆ ಹೂವು ಅರ್ಪಿಸುವ ಮೂಲಕ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ವೀರಕುಮಾರರು ಕತ್ತಿಗಳನ್ನು ಹಿಡಿದು ಗೋವಿಂದ ನಾಮಸ್ಮರಣೆ ಮಾಡುತ್ತ ಹೆಜ್ಜೆ ಹಾಕಿದರು.
ಟಿ.ಎಂ.ರೋಜಾ ರಾಜಪ್ಪ, ಚಿನ್ನಪ್ಪ, ಶಂಕರ್​, ಆನಂದ್​, ಕುಲದ ಗೌಡರು, ಯಜಮಾನರು ವೀರಕುಮಾರರು, ಸೇರಿ ತೊರ್ನಹಳ್ಳಿ, ಬೈರನಹಳ್ಳಿ, ಸೊಣ್ಣನಾಯಕನಹಳ್ಳಿ ಭಾಗವಹಿಸಿದ್ದರು.
ಏ.26ರಂದು ಹೂವಿನ ಕರಗ ಹಮ್ಮಿಕೊಳ್ಳಲಾಗಿದೆ.