karaga ಬಂಗಾರಪೇಟೆಯಲ್ಲಿ ಹಸಿಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ಬಂಗಾರಪೇಟೆ: ನಗರದಲ್ಲಿ ಗುರುವಾರ ರಾತ್ರಿ ದ್ರೌಪದಾಂಬಾ&ಧರ್ಮರಾಯಸ್ವಾಮಿ ಹಸಿ ಕರಗ karaga ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಕರಗದ ಪೂಜಾರಿ ಕೃಷ್ಣಮೂರ್ತಿ ಅವರು ಸಂಪ್ರದಾಯಬದ್ಧ ವಿಧಿವಿಧಾನಗಳೊಂದಿಗೆ ಹಸಿ ಕರಗ ಹೊತ್ತು ಗಮನ ಸೆಳೆದರು. ದೇಶಿಹಳ್ಳಿ ಕೆರೆಯಿಂದ ಕರಗಮೆರವಣಿಗೆ ಶುರುವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯ ವೇಳೆ ಕರಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಲ್ಲಿ ಸಾವಿರಾರು ಭಕ್ತರು ಸೇರಿ ಹಸಿ ಕರಗದ ದರ್ಶನ ಪಡೆದರು.