Harikatha at Yoginareyana Math, Kaivara
ಚಿಂತಾಮಣಿ: ತಾಲೂಕಿನ ಕೈವಾರದ ಶ್ರೀ ಯೋಗಿನಾರೇಯಣ ಮಠದಲ್ಲಿ ಶಿವರಾತ್ರಿ ಜಾಗರಣೆಯ ಪ್ರಯುಕ್ತ ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ಕರ್ನಾಟಕ ಕಲಾಶ್ರೀ ಹರಿಕಥಾ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಅವರಿಂದ ಹರಿಕಥೆ ನಡೆಸಿಕೊಟ್ಟರು.
ಸದ್ಗುರು ಶ್ರೀ ಯೋಗಿನಾರೇಯಣ ತಾತಯ್ಯನವರ ಜೀವನಚರಿತ್ರೆ&ಕಾಲಜ್ಞಾನದ ಹರಿಕಥೆಯನ್ನು ಮಾಡಿದ ಬಾಲಕೃಷ್ಣ ಭಾಗವತರು, ತಾತಯ್ಯನವರ ಜೀವನದ ಹಲವಾರು ಪ್ರಸಂಗವನ್ನು ಹೇಳುತ್ತಾ ನೆರೆದಿದ್ದ ಜನರಲ್ಲಿ ಭಕ್ತಿಭಾವ ಮೂಡಿಸಿದರು. ತಾತಯ್ಯನವರು ಶತಕಗಳ ಮೂಲಕ ಸಮಾಜಕ್ಕೆ ನೀಡಿರುವ ಸಂದೇಶಗಳನ್ನು ವಿವರಿಸಿದರು.
ಹರಿಕಥೆಗೆ ಪಕ್ಕವಾದ್ಯದಲ್ಲಿ ಹಾರ್ಮೋನಿಯಂ ಗೋವರ್ಧನ್, ವಯಲಿನ್ ಶ್ರೀಹರಿ, ಕೋಲಾರ ಪ್ರಶಾಂತ ಮೃದಂಗ, ಕೆ.ರಾಮಕುಮಾರ್ ತಬಲ ಸಹಕಾರ ನೀಡಿ ಸಹಕರಿಸಿದರು. ನಾದ ಸುಧಾರಸ ವೇದಿಕೆಯ ಕಲಾವಿದರು ಭಾಗವಹಿಸಿದ್ದರು.ಭಕ್ತರಿಗೆ ಯೋಗಿನಾರೇಯಣ ಟ್ರಸ್ಟ್ಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.