ಬುಕ್ಕಾಪಟ್ಟಣ sports ಹೋಬಳಿಯ ಹೂಯಿಲ್ ದೊರೆ ಶ್ರೀ ಶಾರದಾ ಇಂಟರ್ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಪ್ರಾಂಶುಪಾಲ ನವೀನ್ ಕುಮಾರ್, ಬಾಲೋಧ್ಯಾನ ಮುಖ್ಯ ಶಿಕ್ಷಕಿ ಕಾವ್ಯಾ ಮಹೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಕಿರಣ್ ಕುಮಾರ್, ಮಹೇಶ್ ಗೌಡ ಇದ್ದರು.
ಬುಕ್ಕಾಪಟ್ಟಣ: ಕಠಿಣ ಪರಿಶ್ರಮ, ಶಿಸ್ತುಬದ್ಧ ಜೀವನ, ಹಗಲಿರಳು ಸಾಧಿಸಬೇಕೆಂಬ ಹಂಬಲ ಸಾಧನೆಯ ಕಿಚ್ಚು ಹಚ್ಚುತ್ತದೆ sports ಎಂದು ಶ್ರೀ ಅಯ್ಯ ಆಂಜನೇಯ ಹೆಲ್ತ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿ ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಹೂಯಿಲ್ ದೊರೆ ಶ್ರೀ ಶಾರದಾ ಇಂಟರ್ ನ್ಯಾಷನಲ್ ಕೇಂಬ್ರಿಡ್ಜ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ಹಾಗೂ ಮೇಜರ್ ಧ್ಯಾನಚಂದ್ ಜನ್ಮದಿನಾಚರಣೆ ಉದ್ಘಾಟಿಸಿ ಮಾತನಾಡಿ, ಧ್ಯಾನ್ ಚಂದ್ ಅವರ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ
ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಗೆ ಇಡಲಾಗಿದೆ ಎಂದಾದರೆ ಅವರ ಸಾಧನೆ ಎಷ್ಟರಮಟ್ಟಿಗೆ ಇತ್ತು ಎಂಬುದರ ಬಗ್ಗೆ ಎಲ್ಲರೂ ಅರಿಯಬೇಕಿದೆ.
ತನ್ನ ದೇಶ ಮಾತ್ರ ವಿಶ್ವವನ್ನು ಆಳಲು ಸಮರ್ಥ ಎಂಬ ಭಾವನೆ ಹೊಂದಿದ್ದ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ತನ್ನ ದೇಶಕ್ಕಾಗಿ ಆಡುವಂತೆ ಹಲವು ಆಸೆ ಆಮಿಷಗಳನ್ನು ಇಟ್ಟರೂ ಸಹ ತಾನು ಕೇವಲ ತನ್ನ ದೇಶಕ್ಕಾಗಿ ಆಡುತ್ತೇನೆ, ಅದೇ ನನಗೆ ಪರಮತೃಪ್ತಿ ಎಂದು ಸಾರಿದ ಮಹಾನ್ ದೇಶಭಕ್ತ ಮೇಜರ್ ಧ್ಯಾನ್ ಚಂದ್ ಎಂದು ಬಣ್ಣಿಸಿದರು.