ಯಾದಗಿರಿಯ ಅಜೀಂ ಪ್ರೇಮ್‌ಜಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಜಿ¯್ಲÁ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ, ದೇವಿಂದ್ರ ಹುಲ್ಕಲï, ಅನಿಲï ಎಸ್. ಅಂಗಡಿ, ಮುರಳೀಧರ ಇತರರಿದ್ದರು.
- ಉಪನಿರ್ದೇಶಕ ಚನ್ನಬಸಪ್ಪ ಹೇಳಿಕೆ
- ಅಜೀಂ ಪ್ರೇಮ್‌ಜಿ ಶಾಲೆಯಲ್ಲಿ ಸಂವಾದ
ಯಾದಗಿರಿ : ವಿದ್ಯಾರ್ಥಿಗಳಲ್ಲಿ ಉನ್ನತ ಗುರಿ, ಆತ್ಮವಿಶ್ವಾಸ ಹಾಗೂ ಸಾಧನೆಯ ಮನೋಭಾವ ಬೆಳೆಸುವ ಉದ್ದೇಶದಿಂದ ಇಲ್ಲಿನ ಅಜೀಂ ಪ್ರೇಮï ಜಿ ಶಾಲೆಯಲ್ಲಿ ಹುಲಕಲ್ (ಜೆ)ನ ಕನಸು ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಟ್ರಸ್ಟ್ ಶುಕ್ರವಾರ ಸಾಧಕರೊಂದಿಗೆ ಸಂವಾದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಈ ವೇಳೆ ಮಾತನಾಡಿದ ಮುಖ್ಯ ಅತಿಥಿ ಜಿ¯್ಲÁ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ಸಿದ್ಧತೆ ನಡೆಸಬೇಕು, ಅಧ್ಯಯನದ ಕ್ರಮ, ಗುರಿ ಸಾಽಸಲು ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದ ಮಹತ್ವಗಳೇನು ಎಂಬ ಕುರಿತು ಪ್ರೇರಣಾದಾಯಕ ಸಲಹೆ ನೀಡಿದರು.
ತಮ್ಮ ವಿದ್ಯಾರ್ಥಿ ಜೀವನ ಎಷ್ಟು ಕಠಿಣವಿತ್ತು, ಅದರಲ್ಲಿಯೇ ತಾವು ಕಷ್ಟಪಟ್ಟು ಓದಿ ಕೆಎಎಸ್ ಅಽಕಾರಿಯಾಗಿರುವ ಬಗ್ಗೆ ಮನಮುಟ್ಟುವಂತೆ ವಿದ್ಯಾರ್ಥಿಗಳೊಂದಿಗೆ ಹಂಚಿಕೊAಡರು. ಈ ವೇಳೆ ವಿದ್ಯಾರ್ಥಿಗಳು ಕೇಳಿದ ವಿವಿಧ ಪ್ರಶ್ನೆಗಳಿಗೆ ತಮ್ಮ ಅನುಭವಗಳ ಆಧಾರದ ಮೇಲೆ ಸರಳ ಹಾಗೂ ಸ್ಪಷ್ಟ ಉತ್ತರ ನೀಡಿದರು. ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ದೇವಿಂದ್ರ ಹುಲ್ಕಲï ಮಾತನಾಡಿ, ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಉತ್ತಮ ವ್ಯಕ್ತಿತ್ವ ನಿರ್ಮಾಣದ ಅಡಿಪಾಯ ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ಮನದಟ್ಟುಗೊಳಿಸಿದರು.
ಬದುಕಿನಲ್ಲಿ ದೊಡ್ಡ ಕನಸು ಕಾಣಬೇಕು, ಅವುಗಳನ್ನು ನನಸಾಗಿಸಲು ನಿರಂತರ ಪ್ರಯತ್ನಿಸಬೇಕು ಎಂದರು. ಪ್ರಾಚಾರ್ಯ ಅನಿಲï ಎಸ್. ಅಂಗಡಿ ಮಾತನಾಡಿದರು. ಶಿಕ್ಷಕ ಮುರಳೀಧರ ನಿರೂಪಿಸಿದರು.