ಅಫಜಲಪುರದ ಶ್ರೀ ಗುರು ಮಳೇಂದ್ರ ಮಠದಲ್ಲಿ ಯಡಿಯೂರ ಸಿದ್ಧಲಿಂಗೇಶ್ವರ ಪುರಾಣ ಕಾರ್ಯಕ್ರಮವನ್ನು ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಉದ್ಘಾಟಿಸಿದರು. ರಾಚಯ್ಯ ಶಾಸ್ತ್ರಿ, ಚಂದ್ರಶೇಖರ ಕರಜಗಿ, ಶಾಂತಯ್ಯ ಹಿರೇಮಠ, ಸಂಗ್ರಾಮಗೌಡ ಪಾಟೀಲ್​, ಸಿದ್ದರಾಮ ಗಣಾಚಾರಿ ಇತರರಿದ್ದರು. 
ರಾಜ್ಯ

ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ

ಅಫಜಲಪುರ: ಬದುಕಿನಲ್ಲಿ ಯಶಸ್ಸು ಲಭಿಸಲು ಹಾಗೂ ಗುರಿ ತಲುಪಲು ಅಚಲ ಪರಿಶ್ರಮ, ಗುರುವಿನ ಮಾರ್ಗದರ್ಶನ ಅಗತ್ಯ ಎಂದು ಮಳೇಂದ್ರ ಮಠದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು. ಶ್ರೀ ಗುರು ಮಳೇಂದ್ರ ಮಠದಲ್ಲಿ ಶ್ರಾವಣ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಯಡಿಯೂರ ಶ್ರೀ ಸಿದ್ಧಲಿಂಗೇಶ್ವರ ಪುರಾಣ ಉದ್ಘಾಟಿಸಿ ಮಾತನಾಡಿ, ಹಿರಿಯ ಪೂಜ್ಯರು ಹಾಕಿಕೊಟ್ಟ ಮಾರ್ಗದಲ್ಲಿ ಶ್ರೀಮಠ ಸಾಗುತ್ತಿದ್ದು, ಧರ್ಮಜಾಗೃತಿ ಹಾಗೂ ಸಂಸ್ಕಾರ ಪಸರಿಸುವ ಕೆಲಸ ನಿರಂತರ ನಡೆಯುತ್ತಿದೆ ಎಂದರು. ರಾಚಯ್ಯ ಶಾಸ್ತ್ರಿ ಪುರಾಣ ಹೇಳಿದರು. ದೇವಲಗಾಣಗಾಪುರ ನಗರ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕರಜಗಿ, ಪ್ರಮುಖರಾದ ಶಾಂತಯ್ಯ ಹಿರೇಮಠ, ಸಂಗ್ರಾಮಗೌಡ ಪಾಟೀಲ್​, ಸಿದ್ದರಾಮ ಗಣಾಚಾರಿ, ಮಳೇಂದ್ರ ಡಾಂಗೆ, ಚಿದಾನಂದ ಮಠ, ಗಂಗಾಧರ ಶ್ರೀಗಿರಿ, ಮಲ್ಲಿಕಾರ್ಜುನ ನಿಂಗದಳ್ಳಿ, ಮಲ್ಲಿಕಾರ್ಜುನ ವಾಳಿ, ಗಂಗಾಧರ ಸ್ಥಾವರಮಠ, ಕೆ.ಎಚ್​.ಬಿರಾದಾರ, ಶ್ರೀಶೈಲ ಬಳೂರಗಿ, ಮೌನೇಶ ಬಡಿಗೇರ, ಬಸಣ್ಣ , ವಿಶ್ವನಾಥ ಮಠಪತಿ, ಮಹಾಂತೇಶ ಭಾವಿ, ಬಸಯ್ಯ ನಂದಿಕೋಲ ಇತರರಿದ್ದರು.